MLC 2025: RCB ಮಾಜಿ ನಾಯಕನ ವೀರಾವೇಶದ ಶತಕ: ಒಂದೇ ಇನಿಂಗ್ಸ್‌ನಲ್ಲಿ 9 ಸಿಕ್ಸರ್
ಅಮೆರಿಕದಲ್ಲಿ ಸದ್ಯ ಮೇಜರ್ ಲೀಗ್ ಕ್ರಿಕೆಟ್ (Major League Cricket) ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಕ್ಷಮತೆ ಪ್ರದರ್ಶಿಸುತ್ತಿದ್ದಾರೆ. ಟೆಕ್ಸಸ್ ಸೂಪರ್ ಕಿಂಗ್ಸ್ ಪರ ಬ್ಯಾಟ್ ಮಾಡಿದ ಆರ್‌ಸಿಬಿ (RCB) ತಂಡದ ಮಾಜಿ ನಾಯಕ ಫಾಫ್ ಡುಪ್ಲೇಸಿಸ್ (Faf du Plessis) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಎಂಐ ನ್ಯೂ ಯಾರ್ಕ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಸ್ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 223 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 184 ರನ್ ಕಲೆ ಹಾಕಿ ಸೋಲು ಕಂಡಿತು. ಟೆಕ್ಸಸ್ ತಂಡ ಟೂರ್ನಿಯಲ್ಲಿ ದಾಖಲಿಸಿದ 5ನೇ ಗೆಲುವು ಇದಾಗಿದೆ. ಈ ಮೂಲಕ ಸೂಪರ್ ಕಿಂಗ್ಸ್ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಈ ವೇಳೆ ಟೆಕ್ಸಸ್ ತಂಡದ ಪರ ನಾಯಕ ಫಾಫ್ ಡುಪ್ಲೇಸಿಸ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 53 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ಶತಕದ ಬಲದಿಂದ ಫಾಫ್ ಹಲವು ದಾಖಲೆಗಳನ್ನು ಬರೆದರು. ಟೆಕ್ಸಸ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಡೊನೊವನ್ ಫೆರೀರಾ ಉತ್ತಮ ಸಾಥ್ ನೀಡಿ ಅರ್ಧಶತಕ ಬಾರಿಸಿದರು. ಇವರು 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರು.
ಫಾಫ್ ಶತಕದ ಅಬ್ಬರ
ಇದು ಟಿ20 ಕ್ರಿಕೆಟ್‌ನಲ್ಲಿ ಫಾಫ್ ಬಾರಿಸಿದ ಎಂಟನೇ ಶತಕ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ, ಜೋಸ್ ಬಟ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಆರನ್ ಫಿಂಚ್ ಅವರನ್ನು ಸರಿಗಟ್ಟಿದ್ದಾರೆ. ಈ ಎಲ್ಲ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ 8 ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಟಿ20 ಸ್ವರೂಪದಲ್ಲಿ ಫಾಫ್ ಒಟ್ಟು 420 ಪಂದ್ಯಗಳನ್ನು ಆಡಿದ್ದು, 32.74 ಸರಾಸರಿಯಲ್ಲಿ 11755 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಶತಕಗಳು ಸೇರಿವೆ.

ಗುರಿಯನ್ನು ಬೆನ್ನಟ್ಟಿದ ಎಂಐ ನ್ಯೂ ಯಾರ್ಕ್ ತಂಡದ ಪರ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಲಿಲ್ಲ. ಇವರು 39 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸೇರಿದಂತೆ 70 ರನ್ ಸಿಡಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಟೆಕ್ಸಸ್ ಸೂಪರ್ ಕಿಂಗ್ಸ್ ಪರ ಅಕೇಲ್ ಹೊಸೇನ್ 3 ವಿಕೆಟ್ ಪಡೆದು ಬೀಗಿದರು. ಇನ್ನು ನಾಂಡ್ರೆ ಬರ್ಗರ್, ಮಾರ್ಕಸ್ ಸ್ಟೋಯ್ನಿಸ್ ತಲಾ 2 ವಿಕೆಟ್ ಪಡೆದು ಮಿಂಚಿದರು.












Click it and Unblock the Notifications