Virat Kohli: ವಿರಾಟ್ ಕೊಹ್ಲಿ ಆಸ್ತಿ ಮೌಲ್ಯ ಎಷ್ಟು ಸಾವಿರ ಕೋಟಿ?

ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅನಭಿಷಿಕ್ತ ದೊರೆ. ರನ್ ಮೆಷಿನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದರೆ ಸಾಕು, ಹಲವು ದಾಖಲೆಗಳು ನಿರ್ಮಾಣವಾಗುತ್ತವೆ. ಭಾರತ 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದ್ದು, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಲಿದ್ದಾರೆ.

ಕ್ರಿಕೆಟ್‌ನ ಜಾಗತಿಕ ಐಕಾನ್ ಆಗಿರುವ ವಿರಾಟ್ ಕೊಹ್ಲಿ ಆಸ್ತಿ ಎಷ್ಟು ಎನ್ನುವ ಕುತೂಹಲ ಸಹಜವಾಗಿ ಇರುತ್ತದೆ. ಕೊಹ್ಲಿ ಕ್ರಿಕೆಟರ್ ಮಾತ್ರವಲ್ಲ ವ್ಯವಹಾರಸ್ಥ ಕೂಡ, ಅವರು ಹಲವು ಉದ್ಯಮಗಳಲ್ಲಿ ಬಂಡವಾಳ ಹೂಡಿದ್ದಾರೆ. ಒನ್‌ 8 ಎನ್ನುವ ಚೈನ್ ರೆಸ್ಟೋರೆಂಟ್‌ನ ಮಾಲೀಕ ಕೂಡ.

Exploring Virat Kohli s Brand Value A Comprehensive Analysis

ಕೊಹ್ಲಿ ಬ್ರಾಂಡ್‌ಮೌಲ್ಯ ಎಷ್ಟಿದೆ?

ಕೊಹ್ಲಿ ಕ್ರಿಕೆಟ್‌ನಲ್ಲಿ ಅಗ್ರ ಹೆಸರು ಮಾತ್ರವಲ್ಲದೆ ಬ್ರಾಂಡ್ ಮೌಲ್ಯದ ದೃಷ್ಟಿಯಿಂದಲೂ ಮಿಂಚಿದ್ದಾರೆ. ಬ್ರಾಂಡ್ ಮೌಲ್ಯದಲ್ಲಿ ಕೊಹ್ಲಿ ಗಣನೀಯವಾಗಿ ಮುಂದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯವು $227.9 ಮಿಲಿಯನ್ ಎಂದು ಹೇಳಲಾಗಿದೆ. ಅಂದರೆ 1900 ಕೋಟಿ ರೂಪಾಯಿಗಳಷ್ಟು.

ಭಾರತದ ಪ್ರಭಾವಶಾಲಿ ಸೆಲಿಬ್ರಿಟಿ

ವಿರಾಟ್ ಕೊಹ್ಲಿ ಭಾರತದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಸಲಹಾ ಸಂಸ್ಥೆ ಕ್ರೋಲ್ ಭಾರತದ ಅತ್ಯಂತ ಪ್ರಭಾವಶಾಲಿ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಅವರಿಗಿಂತ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ಬ್ರ್ಯಾಂಡ್ ಮೌಲ್ಯವು $227.9 ಮಿಲಿಯನ್ ಆಗಿದ್ದು, 2022 ರಲ್ಲಿ $176.9 ಮಿಲಿಯನ್‌ನಿಂದ ಸುಮಾರು 30% ($ 51 ಮಿಲಿಯನ್ ಅಧಿಕ) ಹೆಚ್ಚಳವಾಗಿದೆ.

ವಿರಾಟ್ ಕೊಹ್ಲಿ ಆಸ್ತಿ ಎಷ್ಟಿದೆ

ವಿರಾಟ್ ಕೊಹ್ಲಿ ಅಂದಾಜು $126 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಅಂದರೆ ಸರಿಸುಮಾರು 1,050 ಕೋಟಿ ರೂಪಾಯಿ. 2020 ರಲ್ಲಿ, ಅವರ ಹೆಸರು ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು, ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಕೊಹ್ಲಿ ವಿಶ್ವದ ಮೂರನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.

ಬಿಸಿಸಿಐನಿಂದ ಪಡೆಯುವ ಸಂಬಳ, ಐಪಿಎಲ್‌ ಫ್ರಾಂಚೈಸಿಯಿಂದ ಬರುವ ಸಂಬಳ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದರಿಂದ ಕೂಡ ಕೋಟಿ ಕೋಟಿ ಆದಾಯ ಗಳಿಸುತ್ತಾರೆ. ಅನೇಕ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು ಅದರಿಂದ ಕೂಡ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾರೆ. ಉದ್ಯಮಿ ಕೂಡ ಆಗಿದ್ದು, ಹಲವು ಕಡೆಗಳಲ್ಲಿ ಬಂಡವಾಳ ಹೂಡಿದ್ದಾರೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ನಟಿಯಾಗಿದ್ದು ಸಿನಿಮಾಗಳಿಂದ, ಜಾಹೀರಾತುಗಳಿಂದ ಸಾಕಷ್ಟು ಆದಾಯ ಗಳಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+