ವಿರಾಟ್ ಕೊಹ್ಲಿ ಬೆಂಗಳೂರು ತಂಡಕ್ಕೆ ನೀಯತ್ತಾಗಿ ಇರೋದು ಯಾಕೆ?
ವಿರಾಟ್ ಕೊಹ್ಲಿ ಇದೀಗ ಕನ್ನಡಿಗನೇ ಆಗಿ ಹೋಗಿದ್ದಾರೆ. 16 ವರ್ಷಗಳ ಹಿಂದೆ ಬೆಂಗಳೂರು ಐಪಿಎಲ್ ತಂಡಕ್ಕೆ ಆಡಲು ವಿರಾಟ್ ಕೊಹ್ಲಿ ಬಂದಿದ್ದರು. ಆಗಿನ್ನೂ 19 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಆದರೆ ಆರ್‌ಸಿಬಿ ಬೆಂಗಳೂರು ತಂಡ, ವಿರಾಟ್ ಕೊಹ್ಲಿ ಅವರನ್ನು ತಮ್ಮ ತಂಡಕ್ಕೆ ಸೆಲೆಕ್ಟ್ ಮಾಡಿತ್ತು. ಹಾಗಾದ್ರೆ 2008ರಲ್ಲಿ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿಗೆ ಕೊಟ್ಟ ಹಣ ಎಷ್ಟು? ಬನ್ನಿ ತಿಳಿಯೋಣ.
ಅಂಡರ್-19 ವಿಶ್ವಕಪ್ ಗೆದ್ದು ಬೀಗಿದ್ದ ತಂಡದಲ್ಲಿ, ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದರು. ಈ ಹಿನ್ನೆಲೆ ತಮಗೆ ಐಪಿಎಲ್ ಆಡುವ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದರು ವಿರಾಟ್ ಕೊಹ್ಲಿ. 2008 ರಲ್ಲಿ 'ಅಂಡರ್-19' ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಇದೇ ವಿರಾಟ್ ಕೊಹ್ಲಿ ಮಿಂಚಿದ್ದರು. ಇಷ್ಟೆಲ್ಲಾ ಇದ್ದರೂ ವಿರಾಟ್ ಕೊಹ್ಲಿ ಅವರಿಗೆ ಮಾತ್ರ IPL ಆಡುವುದು ಅಷ್ಟು ಸುಲಭವಾಗಿ ಇರಲಿಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿ ಅವರನ್ನು, ಯಾವುದೇ ತಂಡ ಆಯ್ಕೆ ಮಾಡಿರಲಿಲ್ಲ. ಅಂತಿಮವಾಗಿ ಕೊನೆಗೆ ಆರ್‌ಸಿಬಿ ತಂಡವೇ ವಿರಾಟ್ ಕೊಹ್ಲಿಗೆ ಮಣೆ ಹಾಕಿತ್ತು. ಹಾಗಾದ್ರೆ ವಿರಾಟ್ ಕೊಹ್ಲಿ ತಮ್ಮ ಮೊದಲ ಐಪಿಎಲ್ ಹರಾಜಿನಲ್ಲಿ ಪಡೆದ ಹಣ ಎಷ್ಟು ಲಕ್ಷ ರೂಪಾಯಿ ಗೊತ್ತಾ?

12 ಲಕ್ಷ ಪಡೆದಿದ್ದರು ಕೊಹ್ಲಿ!
ಈ ಮಾತನ್ನು ನಂಬುವುದು ಕಷ್ಟವಾಗಿದ್ದರೂ ನಿಜ, ಯಾಕಂದ್ರೆ ವಿರಾಟ್ ಕೊಹ್ಲಿ ಅವರಿಗೆ ಮೊದಲ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಕೊಟ್ಟಿದ್ದು ಕೇವಲ 12 ಲಕ್ಷ ರೂಪಾಯಿ. ಹೀಗೆ ಯಾರೂ ಕೂಡ ತಂಡಕ್ಕೆ ಸೇರಿಸಿಕೊಳ್ಳದ ಸಮಯದಲ್ಲಿ ವಿರಾಟ್ ಕೊಹ್ಲಿಗೆ ಮಣೆ ಹಾಕಿ ಗೌರವ ತೋರಿಸಿದ್ದ ಆರ್‌ಸಿಬಿ ತಂಡವನ್ನು ಈ ಕಾರಣಕ್ಕೆ ವಿರಾಟ್ ಕೊಹ್ಲಿ ಬಿಟ್ಟು ಹೋಗಿಲ್ಲ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಮಾತ್ರ ಈ ರೀತಿ ಒಂದೇ ತಂಡಕ್ಕಾಗಿ, ಸುಮಾರು 16 ವರ್ಷಗಳಿಂದ ನಿರಂತರವಾಗಿ ಆಟ ಆಡುತ್ತಿದ್ದಾರೆ.
ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರವಾಗಿ 155 ಸ್ಟ್ರೈಕ್ ರೇಟ್ ಮೂಲಕ 661ಕ್ಕೂ ಹೆಚ್ಚು ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ, ಐಪಿಎಲ್ ಅಖಾಡದಲ್ಲೂ ವಿರಾಟ್ ಕೊಹ್ಲಿ ಅವರ ಅಬ್ಬರ ಜೋರಾಗಿದೆ. ಹಾಗೇ ಆರ್‌ಸಿಬಿ ತಂಡ ಇದೀಗ ಮುಂದಿನ ಹಂತಕ್ಕೆ ಅಂದ್ರೆ ಪ್ಲೇ ಆಫ್ ಹಂತಕ್ಕೆ ಹೋಗಲು ಸಜ್ಜಾಗಿದೆ. ಇನ್ನೇನು ಆರ್‌ಸಿಬಿ ಒಂದು ಪಂದ್ಯ ಗೆದ್ದರೆ ಸಾಕು ಮುಂದಿನ ಹಂತಕ್ಕೆ ಹೋಗಲಿದೆ. ಈ ಮೂಲಕ ಆರ್‌ಸಿಬಿ ಟೀಂ ಕಪ್ ಗೆಲ್ಲುವುದು ಬಹುತೇಕ ಪಕ್ಕಾ ಆಗಲಿದೆ. ನಿನ್ನೆ ದೆಹಲಿ ತಂಡದ ವಿರುದ್ಧ ಗೆದ್ದು ಬೀಗಿದ್ದ ಆರ್‌ಸಿಬಿ ತಂಡಕ್ಕೆ ಚೆನ್ನೈ ತಂಡ ಸವಾಲು ಎಸೆಯಲಿದೆ.












Click it and Unblock the Notifications