IPL 2024: ವಿಲ್ ಜಾಕ್ಸ್ RCB ತಂಡದ ಭವಿಷ್ಯದ ಎಬಿಡಿ ವಿಲಿಯರ್ಸ್
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅಬ್ಬರಿಸಿದ ಸ್ಟಾರ್.. ಇವರ ಆಟಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇವರ ಸ್ಫೋಟಕ ಬ್ಯಾಟಿಂಗ್ ಧಾಟಿಯನ್ನು ಕಂಡು ಬೆಂಗಳೂರು ಹುಡುಗರು ಕುಣಿದು ಕೊಪ್ಪಳಿಸಿದ್ದಾರೆ. ಇವರು ನಿವೃತ್ತಿಯ ಬಳಿಕ ದಕ್ಷಿಣ ಆಫ್ರಿಕಾ ಅಭಿಮಾನಿಗಳಿಗಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹೆಚ್ಚಾಗಿ ಬೇಸರ ಗೊಂಡಿದ್ದರು.
ಎಬಿಡಿ ಆಟವೇ ಅಂತಹದ್ದು ಸೋಲುವ ಪಂದ್ಯಕ್ಕೂ ಗೆಲುವಿನ ಟಚ್ ನೀಡುವ ಕ್ಷಮತೆಯನ್ನು ಹೊಂದಿದ್ದ ಪ್ಲೇಯರ್.. ಬೆಂಗಳೂರು ಅಂಗಳದಲ್ಲಿ ಎಬಿಡಿ ಅಬ್ಬರಿಸುವ ಪರಿಯನ್ನು ಕಂಡು ಎದುರಾಳಿಗಳು ಸಹ ಸ್ಟನ್ ಆಗಿದ್ದರು. ಇವರು ಆಫ್ ಸೈಡ್, ಆನ್ ಸೈಡ್, ಹುಕ್ ಶಾಟ್‌ಗಳನ್ನು ಕಂಡು ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದರು. ಇವರಂತಹ ಸ್ಟಾರ್ ಆಟಗಾರ ಆರ್‌ಸಿಬಿಗೆ ಇನ್ನೊಬ್ಬ ಸಿಕ್ಕರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಅಭಿಮಾನಿಗಳಲ್ಲಿ ಇದ್ದುದ್ದು ಸುಳ್ಳು ಅಲ್ಲವೇ ಅಲ್ಲ.

ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ
ವಿಲ್ ಜಾಕ್ಸ್ ಅವರನ್ನು ಹೋಲುವ ಆಟಗಾರನೇ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಇಂಗ್ಲೆಂಡ್ ತಂಡದ ಯುವ ಆಟಗಾರ ವಿಲ್ ಜಾಕ್ಸ್. ಆರ್‌ಸಿಬಿ ಪರ ಆರಂಭಿಕ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಜಾಕ್ಸ್, ಗುಜರಾತ್ ಟೈಟನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದರು. ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟೈಟನ್ಸ್ ತಂಡದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು.
ಸ್ಫೋಟಕ ಆಟಕ್ಕೆ ಮಣ್ಣನೆ
ಕಣ್ಣು ಮುಚ್ಚಿ ತೆರೆಯುವುದರಲ್ಲಿ ಶತಕ ಬಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಇವರ ಆಟವನ್ನು ನೋಡಿದ ಆರ್‌ಸಿಬಿ ಫ್ಯಾನ್ಸ್ ಫುಲ್ ಖುಷ್.. ಆರ್‌ಸಿಬಿ, ಗುಜರಾತ್ ವಿರುದ್ಧ ಮಸ್ಟ್ ವಿನ್ ಗೇಮ್ ಆಡಬೇಕಿದೆ.

ಎಬಿಡಿ ಸ್ಥಾನ ತುಂಬಬಲ್ಲರಾ?
ಆರ್‌ಸಿಬಿ ಇನ್‌ಸೈಡರ್ ಸ್ಟೋರಿನಲ್ಲಿ ವಿಲ್ ಜಾಕ್ಸ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿಯ ಮುಂದಿನ ಎಬಿಡಿ ವಿಲಿಯರ್ಸ್ ಆಗುತ್ತೀರಾ ಎಂಬ ಪ್ರಶ್ನೆಗೆ, ವಿಲ್ ಜಾಕ್ಸ್ ಇದೊಂದು ಸವಾಲಿನ ಕೆಲಸ. ಇದನ್ನು ಮಾಡಲು ನಿಜಕ್ಕೂ ಭಯ ಆಗುತ್ತದೆ. ಎಬಿಡಿ ವಿಲಿಯರ್ಸ್ ನಿಜಕ್ಕೂ ಆರ್‌ಸಿಬಿ ತಂಡದ ಲೆಜೆಂಡ್. ಅವರೊಬ್ಬ ವಿಶ್ವದ ಲೆಜೆಂಡ್ ಆಟಗಾರ. ನಿಜಕ್ಕೂ ಇದು ನಂಬಲು ಅಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ ಎಂದಿದ್ದಾರೆ.
ಐಪಿಎಲ್‌ನಲ್ಲಿ ಎಬಿಡಿ ಆಟ ಹೇಗಿದೆ?
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗರ 2011 ರಿಂದ 2021ರ ವರೆಗೆ ಐಪಿಎಲ್‌ನಲ್ಲಿ 157 ಪಂದ್ಯಗಳನ್ನು ಆಡಿದ್ದು, 41.10 ಸರಾಸರಿಯಲ್ಲಿ 4522 ರನ್ ಸೇರಿಸಿದ್ದಾರೆ. ಈ ವೇಳೆ ಸ್ಟ್ರೈಕ್ ರೇಟ್ 158 ಆಗಿದೆ. ಇದರಲ್ಲಿ 2 ಶತಕ, 37 ಅರ್ಧಶತಕ ಸೇರಿವೆ. ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್, ಕರ್ನಾಟಕದ ವಿನಯ್ ಕುಮಾರ್ ಹಾಗೂ ಎಬಿಡಿ ಆರ್‌ಸಿಬಿಯ ಹಾಲ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಹಿಂಬಾಲಿಸದ ಆರ್‌ಸಿಬಿ ತಂಡಕ್ಕೆ ಜಯದ ಮಾಲೆಯನ್ನು ತೊಡಿಸುವಲ್ಲಿ ವಿಲ್ ಜಾಕ್ಸ್ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇವರು ಸ್ಪಿನ್ ಬೌಲರ್‌ಗಳ ವಿರುದ್ಧ ಆಡಲು ಕೊಂಚ ಹಿಂಜರಿಯುವಂತೆ ಕಾಣುತ್ತಿತ್ತು. ಆದರೆ ಬಳಿಕ ಕೇವಲ 24 ಎಸೆತಗಳಲ್ಲಿ 83 ರನ್ ಸಿಡಿಸಿ ಅಬ್ಬರಿಸಿದರು.












Click it and Unblock the Notifications