Arshad Khan: ಏಲ್‌ಎಸ್‌ಜಿ ಸೋಲಿನಲ್ಲೂ ಮಿಂಚಿದ ಅರ್ಷದ್ ಖಾನ್ ಯಾರು?
ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರಗಳು ಆರಂಭವಾಗಿವೆ. ಈ ಬೆನ್ನಲ್ಲೆ ಮಂಗಳವಾರ ಲಖ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಲಖ್ನೋ ಸೋಲು ಕಂಡರು ಈ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಮಿಂಚಿದ್ದು, ಅರ್ಷದ್ ಖಾನ್.
ಎಲ್‌ಎಸ್‌ಜಿ ತಂಡ ಗುರಿಯನ್ನು ಬೆನ್ನಟ್ಟಿದಾಗ ಸ್ಟಾರ್ ಆಟಗಾರರು ನಿರಾಸೆಯನ್ನು ಮೂಡಿಸಿದರು. ಆದರೆ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿದ ಅರ್ಷದ್ ಖಾನ್ ಎಲ್‌ಎಸ್‌ಜಿ ತಂಡಕ್ಕೆ ನವ ತಾರೆಯಂತೆ ಗುರುತಿಸಿಕೊಂಡರು. ಇವರ ಅಮೋಘ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಇವರ ಆಟಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅರ್ಷದ್ ಖಾನ್, ಎಲ್ಲರೂ ಹುಬ್ಬೇರಿಸುವಂತೆ ಬ್ಯಾಟ್ ಮಾಡಿದರು. ಲಕ್ನೋದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಔಟಾಗಿ ಪೆವಿಲಿಯನ್‌ಗೆ ಮರಳಿದಾಗ, ಅರ್ಷದ್ ಖಾನ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇವರು 33 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್‌ಗಳನ್ನು ಹೊಡೆದು ಬಾರಿಸಿ ಅಜೇಯ 58 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 75.76 ಭರ್ಜರಿಯಾಗಿದೆ.
ಅರ್ಷದ್ ಖಾನ್ ಯಾರು?
ಮಧ್ಯಪ್ರದೇಶದ ಗೋಪಾಲ್‌ಗಂಜ್‌ನ ಸಿಯೋನಿ ತಹಸಿಲ್‌ನಲ್ಲಿ ಜನಿಸಿದ ಅರ್ಷದ್ ಖಾನ್ ಅವರಿಗೆ 27 ವರ್ಷ. ಅವರು ಆಲ್ ರೌಂಡರ್ ಎಂದು ಹೆಸರುವಾಸಿ. ಅರ್ಷದ್ ಎಡಗೈ ಬ್ಯಾಟಿಂಗ್ ಮತ್ತು ಎಡಗೈ ಬೌಲಿಂಗ್ ನಿಂದ ತಂಡಕ್ಕೆ ನೆರವಾಗಬಲ್ಲ ಆಟಗಾರ. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಜೊತೆಗೆ, ಅರ್ಷದ್ ಸೀಮ್ ಬೌಲಿಂಗ್‌ಗೆ ಹೆಸರುವಾಸಿ. ಈ ಪಂದ್ಯದಲ್ಲಿ ಅವರು ಒಂದು ವಿಕೆಟ್ ಕೂಡ ಪಡೆದರು.
2022ರಲ್ಲಿ ಮುಂಬೈ ತಂಡದಲ್ಲಿದ್ದ ಅರ್ಷದ್
ಅರ್ಷದ್ ಅವರ ಸ್ಥಿರ ಪ್ರದರ್ಶನದ ನಂತರ, ಅವರನ್ನು 2022 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಇವರಿಗೆ ಮಣೆ ಹಾಕಿತು. ಆದರೆ ಆ ಋತುವಿನಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಇಡೀ ಸರಣಿಯನ್ನು ಆಡಲಿಲ್ಲ. 2023ರಲ್ಲೂ ಇವರನ್ನು ಮುಂಬೈ ತಂಡದಲ್ಲಿ ಉಳಿಸಿಕೊಂಡಿತು.

ಆದರೆ ಅವರು ಗಾಯದಿಂದಾಗಿ ಇಡೀ ಋತುವನ್ನು ಕಳೆದುಕೊಂಡರು. ವಿಶೇಷವೆಂದರೆ ಅರ್ಷದ್ 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದರೆ IPL 2024 ಹರಾಜಿನ ಮೊದಲು ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತು. ಇದಾದ ಬಳಿಕ ಕೇವಲ 20 ಲಕ್ಷ ನೀಡಿ ಎಲ್‌ಎಸ್‌ಜಿ ತಂಡಕ್ಕೆ ಸೇರಿಸಿಕೊಂಡಿತು. ಈ ಬಾರಿಯೂ ಲಕ್ನೋ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಅರ್ಷದ್ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 83 ರ ಸರಾಸರಿಯಲ್ಲಿ 83 ರನ್ ಗಳಿಸಿದರು ಮತ್ತು ಒಂದು ವಿಕೆಟ್ ಪಡೆದರು.
ತಂದೆಯಿಂದ ಕ್ರಿಕೆಟ್ ವ್ಯಾಕರಣ
ತಂದೆ ಅಶ್ಫಾಕ್ ಅವರ ಮಾರ್ಗದರ್ಶನದಲ್ಲಿ ಅರ್ಷದ್ ಕ್ರಿಕೆಟ್ ವ್ಯಾಕರಣಗಳನ್ನು ಕಲಿತರು. ಅಶ್ಫಾಕ್ ಸಿಯೋನಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ಕೋಚ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅರ್ಷದ್ ಅವರ ಅದ್ಭುತ ಪ್ರದರ್ಶನದಿಂದಾಗಿ ಅವರು ಕೇವಲ 14 ನೇ ವಯಸ್ಸಿನಲ್ಲಿ ಮಧ್ಯಪ್ರದೇಶದ 16 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದರು. ಇದಾದ ನಂತರ ಅವರು ಹಿಂತಿರುಗಿ ನೋಡಲಿಲ್ಲ.
ಅಂಡರ್-19 ಮತ್ತು ಅಂಡರ್-23 ತಂಡಗಳಲ್ಲಿ ಸ್ಥಾನ ಪಡೆದ ನಂತರ, ಅರ್ಷದ್ ಸಿಕೆ ನಾಯುಡು ಟ್ರೋಫಿ 2020 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ಟೂರ್ನಿಯಲ್ಲಿ ಅವರು 400 ರನ್ ಹಾಗೂ 36 ವಿಕೆಟ್ ಪಡೆದಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.












Click it and Unblock the Notifications