Shreyanka Patil: ಪ್ರತಿ ಬಾರಿ ಕಪ್ ನಮ್ದೆ ಎನ್ನುತ್ತಿದ್ದರು..ಈಗ ಕಪ್ ನಮ್ಮದೆ ಎಂದು ಖುಷಿ ಹಂಚಿಕೊಂಡ ಶ್ರೇಯಾಂಕಾ ಪಾಟೀಲ್

ನವದೆಹಲಿ, ಮಾರ್ಚ್ 18: ಕಳೆದ ಕೆಲವು ವರ್ಷಗಳಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು "ಈ ಸಲ ಕಪ್ ನಮ್ದೆ" ಎಂಬ ಘೋಷಣೆ ಕೂಗುತ್ತಲೇ ಇದ್ದರು. ಆದರೆ, ಕಪ್ ಮಾತ್ರ ನಮ್ಮದಾಗಿರಲಿಲ್ಲ. ಬರೋಬ್ಬರಿ 16 ವರ್ಷಗಳಿಂದ ಕಪ್‌ಗಾಗಿ ಕಾಯುತ್ತಿದ್ದ ಆರ್‌ಸಿಬಿ ಫ್ಯಾನ್ಸ್‌ಗೆ ಕೊನೆಗೆ ಕಪ್ ಕೊಟ್ಟಿರೋದು ಹೆಮ್ಮೆಯ ಮಹಿಳಾ ತಂಡ.

ಕಳೆದ 16 ವರ್ಷಗಳಿಂದ ಆರ್‌ಸಿಬಿ ಪುರುಷರ ತಂಡ ತರದ ಕಪ್‌ ಅನ್ನು ಆರ್‌ಸಿಬಿ ಮಹಿಳಾ ತಂಡ ಎರಡನೇ ವರ್ಷವೇ ತಂದು ತೋರಿಸಿದೆ. ಈ ಮೂಲಕ ಎಷ್ಟೋ ಕೋಟ್ಯಾಂತರ ಜನರ ಕನಸನ್ನು ಆರ್‌ಸಿಬಿ ಮಹಿಳಾ ಮಣಿಗಳು ನನಸು ಮಾಡಿದ್ದಾರೆ. ಭಾನುವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಇತಿಹಾಸ ಬರೆದಿದೆ.

Ee Sala Cup Namde RCB s Shreyanka Patil reaction after WPL Triumph

ಕಪ್ ತಂದಿದ್ದೇವೆ ಎಂದು ಖುಷಿ ಹಂಚಿಕೊಂಡ ಶ್ರೇಯಾಂಕಾ ಪಾಟೀಲ್

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಆರ್‌ಸಿಬಿ ಕೊನೆಗೂ ಟ್ರೋಫಿಗೆ ಮುತ್ತಿಟ್ಟಿದೆ. ಈ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದಿರುವುದು ಕನ್ನಡತಿ ಶ್ರೇಯಾಂಕಾ ಪಾಟೀಲ್.

ಆರ್‌ಸಿಬಿ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್, ಡಬ್ಲ್ಯುಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಜಯೋತ್ಸವದ ನಂತರ ಖುಷಿ ಹಂಚಿಕೊಂಡಿರುವ ಅವರು, " ಇಷ್ಟು ದಿನ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದರು. ಈಗ ಕಪ್ ನಮ್ಮದಾಗಿದೆ. ಇದು ಅಭಿಮಾನಿಗಳಿಗೆ ಅರ್ಪಣೆ" ಎಂದು ಹೇಳಿದ್ದಾರೆ.

Ee Sala Cup Namde RCB s Shreyanka Patil reaction after WPL Triumph

ಮೈದಾನದಲ್ಲಿ ಮಿಂಚಿದ ಶ್ರೇಯಾಂಕಾ ಪಾಟೀಲ್

ಫೈನಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಆರ್‌ಸಿಬಿ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಗೆದ್ದು ಬೀಗಿದ್ದಾರೆ. ಕನ್ನಡತಿಯ ಅದ್ಬುತ ಆಟ ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅರುಣ್ ಜೆಟ್ಲಿ ಮೈದಾನದಲ್ಲಿ ಆರ್‌ಸಿಬಿ ಅಭಿಮಾನಿಗಳ ಬಹುದಿನಗಳ ಕನಸನ್ನು ನನಸು ಮಾಡಿ 'ಕಪ್ ನಮ್ದೆ' ಎಂದು ಕೂಗಿದ್ದಾರೆ.

ಇನ್ನು, ಡ್ರೆಸ್ಸಿಂಗ್ ರೂಮ್ ಅನ್ನು ಶಾಂತವಾಗಿ ಇರಿಸಿದ್ದಕ್ಕಾಗಿ ಆರ್‌ಸಿಬಿ ಮಹಿಳಾ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ಶ್ರೇಯಾಂಕಾ ಪಾಟೀಲ್ ಶ್ಲಾಘಿಸಿದ್ದಾರೆ. "ನಾವು ದಿನದಿಂದ ದಿನಕ್ಕೆ ಕಠಿಣ ಪರಿಶ್ರಮ ಮಾಡಿದ್ದೇವೆ. ನಾವೆಲ್ಲರು ಒಂದು ಕುಟುಂಬದವರಂತೆ ಭಾವಿಸಿದ್ದೇವೆ. ನಮಗೆ ಲ್ಯೂಕ್ ವಿಲಿಯಮ್ಸ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಾವು ಮುಂಬೈ ವಿರುದ್ಧ ಗೆದ್ದ ಕೊನೆಯ ಪಂದ್ಯದಲ್ಲಿ ಅವರು ಕಣ್ಣೀರು ಹಾಕಿದ್ದರು" ಎಂದು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+