ಅಪ್ಪನಿಗೆ ಕಚ್ಚುತ್ತಿದ್ದ ಶ್ರೇಯಾಂಕಾ ಪಾಟೀಲ್: ಕಾರಣ ಗೊತ್ತಾದರೆ ಶಾಕ್ ಆಗುತ್ತೆ!
ಶ್ರೇಯಾಂಕಾ ಪಾಟೀಲ್ ಈಗ ಎಲ್ಲೆಲ್ಲೂ ವೈರಲ್ ಆಗುತ್ತಿರುವ ಕನ್ನಡದ ಕುವರಿ. ಅದ್ರಲ್ಲೂ ಡಬ್ಲ್ಯೂಪಿಎಲ್ (WPL) ಕಪ್‌ನ ಆರ್‌ಸಿಬಿ ತಂಡ ಗೆದ್ದ ನಂತರ ಇಂಟರ್ನೆಟ್ ಪೂರ್ತಿ ಇದೇ ವಿಚಾರ ಚರ್ಚೆಯಾಗುತ್ತಿದೆ. ಶ್ರೇಯಾಂಕಾ ಪಾಟೀಲ್ ಎಲ್ಲಿಯವರು? ಶ್ರೇಯಾಂಕಾ ಪಾಟೀಲ್ ಹುಟ್ಟಿದ್ದು ಎಲ್ಲಿ? ಶ್ರೇಯಾಂಕಾ ಪಾಟೀಲ್ ತಂದೆ ಯಾರು? ಶ್ರೇಯಾಂಕಾ ಪಾಟೀಲ್ ಓದಿ, ಬೆಳೆದಿದ್ದು ಎಲ್ಲಿ?
ಹಿಂಗೆ ಡಿಸೈನ್ ಡಿಸೈನ್ ಸರ್ಚಿಂಗ್ ಪ್ರಶ್ನೆಗಳು ಈಗ ಗೂಗಲಮ್ಮನಿಗೆ ಹರಿದು ಬಂದಿವೆ. ಇದೇ ಸಮಯದಲ್ಲಿ ಯಾರಿಗೂ ಗೊತ್ತಿರದ ಸಂಗತಿಯೊಂದು ನಿಮ್ಮ ಬಳಿ ಹೇಳ್ತಾ ಇದ್ದೀವಿ. ಇಲ್ಲಿ ಸ್ಟಾರ್ ಪ್ಲೇಯರ್ ಆಗಿರುವ ಶ್ರೇಯಾಂಕಾ ಪಾಟೀಲ್ ಅವರ ಅಪ್ಪನಿಗೆ ಕಚ್ಚೋದು ಯಾಕೆ? ಸ್ವತಃ ಶ್ರೇಯಾಂಕಾ ಪಾಟೀಲ್ ಅವರೆ ಹೇಳಿರುವಂತೆ, ಅವರ ತಂದೆಗೆ ಶ್ರೇಯಾಂಕಾ ಕಚ್ಚೋದು ಯಾಕೆ? ಇದರ ಹಿಂದೆ ದೊಡ್ಡ ಕಥೆಯೇ ಇದೆ, ಸ್ವತಃ ಶ್ರೇಯಾಂಕಾ ಈ ವಿಚಾರ ಹೇಳಿದ್ದಾರೆ ಬನ್ನಿ ತಿಳಿಯೋಣ.

ಕಲಬುರಗಿ ಮೂಲದ ಕನ್ನಡತಿ ಶ್ರೇಯಾಂಕಾ
ಆರ್‌ಸಿಬಿ ಬೆಂಗಳೂರು ಮಹಿಳಾ ತಂಡದ ಆಟಕ್ಕೆ ಕೋಟ್ಯಂತರ ಫ್ಯಾನ್ಸ್ ಫಿದಾ ಆಗಿದ್ದು, 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಿಸಲು ಕನ್ನಡತಿ ಶ್ರೇಯಾಂಕಾ ಪಾಟೀಲ್ ಶ್ರಮವೂ, ತುಂಬಾ ದೊಡ್ಡದಾಗಿದೆ. ಹೀಗಿದ್ದಾಗ ಶ್ರೇಯಾಂಕಾ ಅವರ ಬಗ್ಗೆ ನಾವು ತಿಳಿಯದೆ ಹೋದರೆ ಬೇಸರ ಆಗುತ್ತೆ ಅಲ್ವಾ? ಅಷ್ಟಕ್ಕೂ ಶ್ರೇಯಾಂಕಾ ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯವರು, ಅವರ ತಂದೆ ಕಲಬುರಗಿ ಮೂಲದ ರಾಜೇಶ್ ಪಾಟೀಲ್ ಬೆಂಗಳೂರಿನಲ್ಲಿಯೆ ನೆಲೆಸಿದ್ದಾರೆ. ಇಂತಿಪ್ಪ ಶ್ರೇಯಾಂಕಾ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದಾರೆ. ಅವರ ಸಂಪೂರ್ಣ ವಿದ್ಯಾಭ್ಯಾಸ ಕೂಡ ಬೆಂಗಳೂರಿನಲ್ಲೇ ಆಗಿದೆ. ಹಾಗಾದ್ರೆ ಶ್ರೇಯಾಂಕಾ ಅವರು ಅಪ್ಪನಿಗೆ ಕಚ್ಚೋದು ಯಾಕೆ ಗೊತ್ತಾ?
ಅಪ್ಪನಿಗೆ ಕಚ್ಚುವ ಶ್ರೇಯಾಂಕಾ!
ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನೂ 21 ವರ್ಷ. ಆದರೆ ಅವರು ಮಾಡಿರುವ ಸಾಧನೆ ಮಾತ್ರ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಹೀಗಿದ್ದಾಗ ಚಿಕ್ಕ ವಯಸ್ಸಿನ ಹುಡುಗಿ ಆಗಿರುವ ಕಾರಣ ಶ್ರೇಯಾಂಕಾ ಅವರಿಗೆ ಹುಡುಗಾಟಿಕೆಯು ಕೂಡ ಇದೆ. ಹೀಗೆ ಹುಡುಗಾಟಿಕೆ ಮಾಡಿಕೊಂಡೆ ಅವರ ತಂದೆ ರಾಜೇಶ್ ಪಾಟೀಲ್ ಅವರಿಗೆ ಕಚ್ಚಿ ಕಾಟ ಕೊಡೋದು ಮಾಮೂಲಿ ಅಂತೆ. ಆಗಾಗ ಕೋಪ ಬಂದಾಗೆಲ್ಲಾ ಈ ರೀತಿ ಶ್ರೇಯಾಂಕಾ ಪಾಟೀಲ್ ಅವರ ತಂದೆಗೆ ಕಚ್ಚುತ್ತಾರಂತೆ. ಸ್ವತಃ ಅವರೇ ಈ ವಿಚಾರ ತಿಳಿಸಿದ್ದಾರೆ.
ಹುಟ್ಟಿದ್ದು ಬೆಂಗಳೂರು, ಪಕ್ಕಾ ಲೋಕಲ್!
ಶ್ರೇಯಾಂಕಾ ಹುಟ್ಟಿ ಬೆಳೆದಿದ್ದು ನಮ್ಮ ಬೆಂಗಳೂರಲ್ಲಿ ಹೀಗಾಗಿ ಶ್ರೇಯಾಂಕಾ ಪಾಟೀಲ್ ಮಾತು ಕೂಡ ಬೆಂಗಳೂರಿನ ವರಸೆಯಲ್ಲೇ ಇರುತ್ತೆ. ನಮ್ಮ ಬೆಂಗಳೂರು ಬೆಡಗಿ ಶ್ರೇಯಾಂಕಾ ಅವರು, ತಮ್ಮ ಬಾಲ್ಯದಲ್ಲಿ ಕ್ರಿಕೆಟ್ ಆಟಗಾರ್ತಿ ಆಗ್ತೀನಿ ಅಂತಾ ಅಂದುಕೊಂಡೇ ಇರಲಿಲ್ಲವಂತೆ. ಆದರೆ ಶ್ರೇಯಾಂಕಾರ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರ ಆಗಿದ್ದರು. ಇದೇ ಕಾರಣಕ್ಕೆ ರಾಜೇಶ್ ಪಾಟೀಲ್ ಅವರು ಮಗಳಿಗೆ ಬೆಂಬಲ ನೀಡಿ, ಅವರು ಕ್ರಿಕೆಟ್‌ನಲ್ಲಿ ಸಾಧನೆ ಮಾಡೋಕೆ ಎಲ್ಲಾ ರೀತಿ ಸಹಾಯ ಮಾಡಿದ್ದರಂತೆ.

ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ!
ಶೇಯಾಂಕ ಆಟಕ್ಕೆ ಫ್ಯಾನ್ಸ್ ಈಗ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇಯಾಂಕ ಅವರ ಹವಾ ಜೋರಾಗಿದೆ. ಅದ್ರಲ್ಲೂ ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದ ಬಳಿಕ ಶ್ರೇಯಾಂಕಾ ಹವಾ ಮತ್ತಷ್ಟು ಜೋರಾಗಿದೆ ಅಲ್ಲದೆ 2024ರ WPLನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಕನ್ನಡ ನಾಡಿನ ಪ್ರತಿಭೆ ಈಗ ದೇಶ & ವಿದೇಶದಲ್ಲೂ ಭಾರಿ ಸದ್ದು ಮಾಡುತ್ತಿರುವುದು ಕನ್ನಡಿಗರ ಪಾಲಿಗೆ ಕೂಡ ಹೆಮ್ಮೆ ತಂದಿದೆ. ಇನ್ನೊಂದು ಕಡೆ, ಮಹಿಳಾ ಕ್ರಿಕೆಟ್ ಟೀಂ ಆಟಗಾರ್ತಿಯರು ಕೂಡ ಶ್ರೇಯಾಂಕಾ ಅವರನ್ನು ತುಂಬಾನೆ ಇಷ್ಟ ಪಡುತ್ತಾರೆ ಅನ್ನೋದು ಮತ್ತೊಂದು ವಿಶೇಷ.












Click it and Unblock the Notifications