IPL 2025: ಪಾಕಿಸ್ತಾನ ಪ್ರೀಮಿಯರ್ ಲೀಗ್ + ಪಾಕಿಸ್ತಾನ ಕ್ರಿಕೆಟಿಗರ ಆಸ್ತಿ = ರಿಷಭ್ ಪಂತ್ ವರ್ಷದ ಸಂಬಳ!

ಭಾರತ & ಪಾಕಿಸ್ತಾನ ಆಜನ್ಮ ವೈರಿಗಳು ಅಂತಾ ಜನ ಮಾತನಾಡುತ್ತಾರೆ, ಯಾಕಂದ್ರೆ ಎರಡೂ ದೇಶಗಳು ಒಂದೇ ದಿನದ ಅಂತರದಲ್ಲಿ ಸ್ವಾತಂತ್ರ್ಯ ಪಡೆದರೂ, ಈ ಎರಡೂ ದೇಶಗಳ ನಡುವೆ ಕಿತ್ತಾಟ ಈಗಲೂ ಇದೆ. ಹೀಗಾಗಿಯೇ ಭಾರತ & ಪಾಕಿಸ್ತಾನ ನಡುವೆ ನಡೆಯುವ ಕ್ರಿಕೆಟ್ ಮ್ಯಾಚ್ ಕೂಡ ಯುದ್ಧದ ರೀತಿಯಲ್ಲೇ ಕಾಣುತ್ತದೆ. ಹೀಗಿದ್ದಾಗಲೇ, ಬೀದಿಗೆ ಬಿದ್ದು ಒದ್ದಾಡುತ್ತಿರುವ ಪಾಕಿಸ್ತಾನದ ಪ್ರಿಮಿಯರ್ ಲೀಗ್ & ಭಾರತದ ಐಪಿಎಲ್ ನಡುವೆ ಜನ ಹೋಲಿಕೆ ಮಾಡ್ತಾ, ಪಾಕಿಸ್ತಾನದ ಮಾನ ಹರಾಜು ಹಾಕುತ್ತಿದ್ದಾರೆ. ಈ ಫೈಟಿಂಗ್ ನಡುವೆ ರಿಷಭ್ ಪಂತ್ ವರ್ಷದ ಸಂಬಳ ಕೂಡ ಚರ್ಚೆಗೆ ಬಂದಿದೆ!

ರಿಷಭ್ ಪಂತ್ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿ ಗೆದ್ದು ಬಂದ ಆಟಗಾರ. ಅದರಲ್ಲೂ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ರಿಷಭ್ ಪಂತ್ ಅವರು ಸಾಕಷ್ಟು ಗಮನವನ್ನು ಕೂಡ ಸೆಳೆದಿದ್ದರು. ಇಂತಿಪ್ಪ ರಿಷಭ್ ಪಂತ್ ಅವರು ಭಾರಿ ದೊಡ್ಡ ಮೊತ್ತಕ್ಕೆ ಹರಾಜು ಆಗಿ ಇದೀಗ ಮತ್ತೆ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆದರೆ ಹೀಗಿದ್ದಾಗಲೇ ರಿಷಭ್ ಪಂತ್ ಅವರ ವರ್ಷದ ಸಂಬಳ ಮತ್ತು ಪಾಕಿಸ್ತಾನ ಕ್ರಿಕೆಟ್‌ನ ಪರಿಸ್ಥಿತಿ ತಾಳೆಹಾಕುತ್ತಾ ಜನರು ಟ್ರೋಲ್ ಮಾಡ್ತಿದ್ದಾರೆ!

Discover How The Rishabh Pant Auction Amount 27 Crore Rupees Is Comparing With Pakistan Super League

11,769 ಕೋಟಿ ರೂಪಾಯಿ ಆದಾಯ!

ಪಾಕಿಸ್ತಾನ ಕ್ರಿಕೆಟ್ ಅದೆಷ್ಟು ಬರಗೆಟ್ಟು ಹೋಗಿದೆ ಅಂದ್ರೆ, 2023ರ ಐಪಿಎಲ್ ಟೂರ್ನಿಯಲ್ಲಿ ಬಂದ ಒಟ್ಟು ಆದಾಯವೇ 11,769 ಕೋಟಿ ರೂಪಾಯಿ ಆಗಿದ್ದರೆ ಪಾಕಿಸ್ತಾನ ಪ್ರೀಮಿಯರ್ ಲೀಗ್‌ನ ಒಟ್ಟು ಹಣವೇ ಇದರಲ್ಲಿ ಒಂದು ಹನಿಯ ರೀತಿ ಕಾಣುತ್ತಿದೆ. ಪಾಕಿಸ್ತಾನ ಪ್ರೀಮಿಯರ್ ಲೀಗ್‌ನ ಒಟ್ಟು ಲೆಕ್ಕವನ್ನ ತಿಳಿಯುವುದಾದರೆ...

ಪಾಕಿಸ್ತಾನ ಪ್ರೀಮಿಯರ್ ಲೀಗ್‌ನ ಒಟ್ಟು ಬಹುಮಾನದ ಮೊತ್ತ 168 ಮಿಲಿಯನ್ ಪಾಕಿಸ್ತಾನ ರೂಪಾಯಿ ಆಗಿದೆ. ಅಂದ್ರೆ ಇದು ಸುಮಾರು 4 ಕೋಟಿ 80 ಲಕ್ಷ ರೂಪಾಯಿ ಭಾರತದ ಕರೆನ್ಸಿ ಲೆಕ್ಕದಲ್ಲಿ. ಈ ಲೆಕ್ಕದ ಜೊತೆಗೆ ಆಟಗಾರರಿಗೆ ನೀಡುವ ಮ್ಯಾನ್ ಆಫ್ ದಿ ಮ್ಯಾಚ್, ಪಾಕಿಸ್ತಾನ ಪ್ರೀಮಿಯರ್ ಲೀಗ್ ಆಯೋಜನೆಗೆ ಖರ್ಚು ಮಾಡುವ ಒಟ್ಟು ಹಣವೇ 10 ಕೋಟಿ ರೂಪಾಯಿ ದಾಟಲ್ಲ.

ಹೀಗೆ ಒಂದು ಇಡೀ ಪಾಕಿಸ್ತಾನ ಪ್ರೀಮಿಯರ್ ಲೀಗ್‌ನ ಒಟ್ಟು ಹಣವೇ 10 ಕೋಟಿ ರೂಪಾಯಿ ದಾಟಲ್ಲ ಎನ್ನುವಾಗ, ರಿಷಭ್ ಪಂತ್ 2025ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 27 ಕೋಟಿ ರೂಪಾಯಿಗೆ ಹರಾಜು ಆಗಿದ್ದಾರೆ. ಈ ಮೂಲಕ ಪಾಕಿಸ್ತಾನ ಪ್ರೀಮಿಯರ್ ಲೀಗ್ + ಪಾಕಿಸ್ತಾನ ಕ್ರಿಕೆಟಿಗರ ಆಸ್ತಿ = ರಿಷಭ್ ಪಂತ್ ವರ್ಷದ ಸಂಬಳ! ಅಂತಾ ಟ್ರೋಲ್ ಮಾಡಿ ಜನರು ನಗುತ್ತಿದ್ದಾರೆ.

ಕ್ರಿಕೆಟ್ ಹುಟ್ಟಿದ ದೇಶಕ್ಕೂ ಅಚ್ಚರಿ!

ಹೌದು, 2025ರ ಐಪಿಎಲ್ ಟೂರ್ನಿಗೆ ಇದೀಗ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಐಪಿಎಲ್ ತಂಡಗಳ ಮಾಲೀಕರು ಕೋಟಿ ಕೋಟಿ ಹಣ ಸುರಿದು ಆಟಗಾರರ ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಭಾರತದ ಐಪಿಎಲ್ ಕ್ರೀಡಾಕೂಟ ಮತ್ತಷ್ಟು ಹೆಸರು ಮಾಡುತ್ತಿದೆ. ಹೀಗಿದ್ದಾಗ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುತ್ತಿರುವ 2025ರ ಐಪಿಎಲ್ ಹರಾಜು ಪ್ರಕ್ರಿಯೆ ಭಾರತದ ಕ್ರೀಡಾ ಲೋಕದ ಗತ್ತು ಹೆಚ್ಚು ಮಾಡಿದೆ. ಕ್ರಿಕೆಟ್ ಹುಟ್ಟಿದ ದೇಶವಾದ ಇಂಗ್ಲೆಂಡ್ ಕೂಡ ಈ ಅಬ್ಬರ ಕಂಡು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದೆ. ಇಂಗ್ಲೆಂಡ್ ಮಾತ್ರವಲ್ಲ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ದೇಶಗಳಿಗೂ ಇದು ಅಚ್ಚರಿಯ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+