8 ಕೆಜಿ ಮಟನ್ ತಿಂತೀರಾ... ಪಾಕ್ ವಿರುದ್ಧ ಅಕ್ರಂ ಗರಂ ಆಗಿದ್ದೇಕೆ?
ಪಾಕಿಸ್ತಾನ ಕ್ರಿಕೆಟ್ ತಂಡ ನಿನ್ನೆ ಕ್ರಿಕೆಟ್ ಶಿಶುಗಳ ಎದುರು ಸೋತು ಸುಣ್ಣವಾಗಿದ್ದೇ ತಡ ಈಗ ಆಕ್ರೋಶದ ಕಿಚ್ಚು ಹೆಚ್ಚಾಗಿದೆ. ಅದರಲ್ಲೂ ಪಾಕಿಸ್ತಾನದ ಮಾಜಿ ಆಟಗಾರರೇ, ಈಗ ತಮ್ಮ ದೇಶದ ಹಾಲಿ ಕ್ರಿಕೆಟ್ ಆಟಗಾರರ ವಿರುದ್ಧ ಕೆಂಡವಾಗಿದ್ದಾರೆ. ಇದೇ ರೀತಿ ಒಂದು ಕಾಲದ ಪಾಕ್ ಸ್ಟಾರ್ ಕ್ರಿಕೆಟರ್ ವಾಸಿಂ ಅಕ್ರಂ ತಮ್ಮ ದೇಶದ ಆಟಗಾರರಿಗೆ ಚಳಿ ಬಿಡಿಸಿದ್ದಾರೆ.
ಹೌದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಿನ್ನೆ ನಡೆದಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಈ ಸೋಲು ಪಾಕ್ ತಂಡದ ಆಟಗಾರರಿಗೆ ಆಘಾತ ನೀಡುವ ಜೊತೆಗೆ ಪಾಕಿಸ್ತಾನದ ಅಭಿಮಾನಿ ಬಳಗವನ್ನೂ ಕೆರಳಿಸಿದೆ. ಅದರಲ್ಲೂ ಪಾಕಿಸ್ತಾನಕ್ಕೆ ಆಟವಾಡಿ, ಲೆಜೆಂಡ್ ಎನಿಸಿಕೊಂಡಿದ್ದ ಆಟಗಾರರೇ ತಮ್ಮ ತಂಡದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅದೇ ರೀತಿ ಇದೀಗ ವಾಸಿಂ ಅಕ್ರಂ ಕೂಡ ಪಾಕ್ ಆಟಗಾರರಿಗೆ ಫಿಟ್‌ನೆಸ್ ಅಂದ್ರೆ ಏನು? ಅನ್ನೋದನ್ನ ತಿಳಿಸಿ, ಆಕ್ರೋಶ ಹೊರಹಾಕಿದ್ದಾರೆ.

8 ಕೆಜಿ ಮಟನ್ ತಿಂತೀರಾ...
ಪಾಕ್ ಪ್ರದರ್ಶನ ನೋಡಿ ವಾಸಿ ಅಕ್ರಂ ಗರಂ ಆಗಿದ್ದು, ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದು ಮುಜುಗರದ ಸಂಗತಿ ಕೇವಲ ಎರಡು ವಿಕೆಟ್ ಕಳೆದುಕೊಂಡು ದೊಡ್ಡ ಗುರಿಯ ತಲುಪುವುದು ತುಂಬಾ ಕಷ್ಟ ಎಂದಿದ್ದರು ಅಕ್ರಂ. ಅಲ್ಲದೆ ಪಾಕಿಸ್ತಾನ ಫೀಲ್ಡಿಂಗ್ ಬಗ್ಗೆ ಗರಂ ಆಗಿದ್ದರು ಅಕ್ರಂ. ಇದರ ಜೊತೆಗೆ ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಪ್ರತಿದಿನ ಎಷ್ಟು ಕೆಜಿ ಮಟನ್ ಅಂದರೆ ಮಾಂಸ ತಿನ್ನುತ್ತಾರೆ ಅನ್ನೋದನ್ನೂ ಈಗ ವಾಸಿಂ ಅಕ್ರಂ ಪ್ರಸ್ತಾಪ ಮಾಡಿದ್ದಾರೆ.
ತಮ್ಮ ಮಾತಿನ ಮಧ್ಯೆ ಅಕ್ರಂ, ಪಾಕ್ ಆಟಗಾರರ ಫಿಟ್ನೆಸ್ ಮಟ್ಟವನ್ನ ಸೂಕ್ಷ್ಮವಾಗಿ ಗಮನಿಸಿ ಕಳೆದ 2 ವರ್ಷಗಳಿಂದ ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಿಲ್ಲ. ಆಟಗಾರರು ಫಿಟ್‌ನೆಸ್ ಪರೀಕ್ಷೆ ತೆಗೆದುಕೊಂಡಿಲ್ಲ ಎಂದು ನಾವು ಕಿರುಚುತ್ತಿದ್ದೇವೆ. ನಾನು, ವೈಯಕ್ತಿಕವಾಗಿ ಹೆಸರು ಹೇಳಲು ಆರಂಭಿಸಿದರೆ ಕೆಲವರ ಮುಖಗಳು ಬಾಡುತ್ತದೆ. ಅಷ್ಟಕ್ಕೂ ಈ ಹುಡುಗರು ಪ್ರತಿನಿತ್ಯ 8 ಕೆಜಿ ಮಟನ್ ತಿನ್ನುತ್ತಿದ್ದಾರೆ ಅಂತಾ ಕಾಣ್ತಿದೆ. ಆಟಗಾರರಿಗೆ ಫಿಟ್‌ನೆಸ್ ಪರಿಕ್ಷೆ ಇರಬೇಕು ಅಲ್ವೇ? ಎಂದು ಅಕ್ರಂ ಇದೇ ವೇಳೆ ಗರಂ ಆಗಿದ್ದಾರೆ. ಈ ಮೂಲಕ ತಮ್ಮ ದೇಶದ ಯುವ ಕ್ರಿಕೆಟ್ ಆಟಗಾರರ ವಿರುದ್ಧ ಅಕ್ರಂ ಗರಂ ಆಗಿದ್ದಾರೆ.
ಹೀನಾಯ ಸೋಲು ಕಂಡಿದ್ದ ಪಾಕ್!
ಪಾಕಿಸ್ತಾನ ತಂಡ ಸ್ಥಿರವಾಗಿ ಆಡಲು ಪರದಾಡುತ್ತಿದ್ದು ಸಾಲು ಸಾಲು ಸೋಲಿನಿಂದ ಕಂಗೆಟ್ಟಿದೆ. ಈ ಬಾರಿ ವಿಶ್ವಕಪ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಮೊದಲ 2 ಮ್ಯಾಚ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು ಪಾಕಿಸ್ತಾನ ಕ್ರಿಕೆಟ್ ತಂಡ. ಆದರೆ ಭಾರತ ವಿರುದ್ಧ ಮ್ಯಾಚ್ ನಂತರ ಶುರು ಆಗಿತ್ತು ಸೋಲಿನ ಸರಪಳಿ. ಭಾರತದ ವಿರುದ್ಧ ಸೋತ ಬಳಿಕ ಆಸ್ಟ್ರೇಲಿಯಾ ವಿರುದ್ಧವೂ 368 ರನ್ ಗುರಿ ಬೆನ್ನತ್ತಿ ಆಲೌಟ್ ಆಗಿತ್ತು ಪಾಕಿಸ್ತಾನ. ಈಗ ಕ್ರಿಕೆಟ್ ಶೀಶು ಅಂತಲೇ ಕರೆಸಿಕೊಳ್ಳುವ ಅಫ್ಘಾನಿಸ್ತಾನ ವಿರುದ್ಧವೂ ಸೋತು ಸುಣ್ಣವಾಗಿದ್ದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ ಮಾಜಿ ಆಟಗಾರರು ಕೂಡ ರೊಚ್ಚಿಗೆದ್ದಿದ್ದಾರೆ.

ಈ ಗೆಲುವಿನ ಮೂಲಕ ಅಫ್ಘಾನ್ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. ಹಾಗೇ ಪಾಕಿಸ್ತಾನ ತಂಡ ಮತ್ತೆ ಇದೇ ರೀತಿ ಸೋಲುತ್ತಾ ಹೋದರೆ, ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಅಲರ್ಟ್ ಆಗಿ, ಮುಂದಿನ ಮ್ಯಾಚ್‌ಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ಪಾಕಿಸ್ತಾನದ ಮಾಜಿ ಆಟಗಾರರು ಸಲಹೆ ನೀಡುತ್ತಿದ್ದಾರೆ. ಆದರೆ ಹೀಗೆ ಸೋಲಿನ ಸುಳಿಯಿಂದ ಹೊರಬರಲು ಪಾಕ್ ಆಟಗಾರರು ಮತ್ತೆ ಫಿಟ್‌ನೆಸ್ ಶಿಸ್ತು ಫಾಲೋ ಮಾಡ್ತಾರಾ? ಇಲ್ಲ ಇದೇ ರೀತಿ ತಮ್ಮ ಕಳಪೆ ಆಟ ಮುಂದುವರಿಸುತ್ತಾರಾ? ಅಂತಾ ಕಾದು ನೋಡಬೇಕಿದೆ.












Click it and Unblock the Notifications