Vinesh Phogat: ಮೋದಿ ಸರ್ಕಾರವನ್ನೇ ಎದುರು ಹಾಕಿಕೊಂಡು ಗೆದ್ದು ಬೀಗಿದ ಗಟ್ಟಿಗಿತ್ತಿ ಈ ಕುಸ್ತಿಪಟು!
ಭಾರತ ಪ್ಯಾರಿಸ್ ಒಲಿಂಪಿಕ್ಸ್ 2024 ಟೂರ್ನಿಯಲ್ಲಿ ಹವಾ ಎಬ್ಬಿಸಿದೆ. ಭಾರತದ ಆಟಗಾರರು ಸಾಲು ಸಾಲು ಪದಕಗಳಿಗೆ ಮುತ್ತಿಟ್ಟು ಮುಂದೆ ನುಗ್ಗುತ್ತಿದ್ದಾರೆ. ಹೀಗಿದ್ದಾಗಲೇ ಇಡೀ ಮೋದಿ ಸರ್ಕಾರವನ್ನೇ ಎದುರು ಹಾಕಿಕೊಂಡು, ಕುಸ್ತಿ ಕೋಚ್ ವಿರುದ್ಧ ಕೇಳಿಬಂದ ಅತ್ಯಾಚಾರದ ಆರೋಪ ಖಂಡಿಸಿ ಹೋರಾಟ ಮಾಡಿದ್ದ ಗಟ್ಟಿಗಿತ್ತಿ ವಿನೇಶ್ ಫೋಗಟ್, ಎಷ್ಟೆಲ್ಲಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಗೊತ್ತಾ?
ಭಾರತದಲ್ಲಿ 'ಒಲಿಂಪಿಕ್ಸ್' ಆಡುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಬೆಂಬಲ ಸಿಗಲ್ಲ ಹಾಗೂ 'ಒಲಿಂಪಿಕ್ಸ್' ಕ್ರೀಡಾಪಟುಗಳ ಆಯ್ಕೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತದೆ ಎಂಬ ಆರೋಪ ಮೊದಲಿನಿಂದ ಕೂಡ ಇದೆ. ವಿನೇಶ್ ಫೋಗಟ್ ಜೀವನದಲ್ಲಿ ಕೂಡ, ಈ ಆರೋಪ ನಿಜವಾಗಿತ್ತು. ಅದರಲ್ಲೂ, ಕುಸ್ತಿ ಕೋಚ್ ಆಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದರು ಬ್ರಿಜ್ ಭೂಷಣ್ ಶರಣ್ ಸಿಂಗ್. ಆದರೆ ಇದೇ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಹಿಡಿತ ಹೊಂದಿರುವ ಪ್ರಭಾವಿ ಎಂಬ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿಯೇ ಆ ಸಮಯದಲ್ಲಿ ಹೋರಾಟ ಮಾಡಿದ್ದ ವಿನೇಶ್ ಫೋಗಟ್ ಎಷ್ಟೆಲ್ಲಾ ಹಿಂಸೆ ಅನುಭವಿಸಿದ್ದರು ಗೊತ್ತೆ?

ಮೋದಿ ಸರ್ಕಾರ VS ವಿನೇಶ್ ಫೋಗಟ್?
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನೇ ವಿನೇಶ್ ಫೋಗಟ್ ಅವರು ಎದುರು ಹಾಕಿಕೊಳ್ಳುವ ಪರಿಸ್ಥಿತಿ ಬಂದಿತ್ತು. ಕಳೆದ ವರ್ಷ ಅಂದ್ರೆ 2023 ರಲ್ಲಿ ಕುಸ್ತಿಪಟುಗಳು ದೊಡ್ಡ ಹೋರಾಟ ನಡೆಸಿದ್ದರು. ಭಾರತಕ್ಕೆ 'ಒಲಿಂಪಿಕ್ಸ್' ಕ್ರೀಡಾಕೂಟ ಸೇರಿದಂತೆ ಕಾಮನ್‌ವೆಲ್ತ್ & ಏಷಿಯನ್ ಗೇಮ್ಸ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಕೊಟ್ಟಿದ್ದ ಕುಸ್ತಿಪಟುಗಳು ಮೋದಿ ಅವರ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದರು.
ಲೈಂಗಿಕ ಕಿರುಕುಳ ಆರೋಪವನ್ನ ಹೊತ್ತಿದ್ದ ವ್ಯಕ್ತಿ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ ಎಂಬ ಆರೋಪವನ್ನ ವಿರೋಧ ಪಕ್ಷಗಳು ಕೂಡ ಮಾಡಿದ್ದವು. ಅದರಲ್ಲೂ ಭಾರತಕ್ಕಾಗಿ 'ಪ್ಯಾರಿಸ್ ಒಲಿಂಪಿಕ್ಸ್' ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಡಲು ಸಜ್ಜಾಗಿರುವ ವಿನೇಶ್ ಫೋಗಟ್ ವಿರುದ್ಧ ಏನೆಲ್ಲಾ ಆರೋಪ ಮಾಡಿದ್ದರು ಗೊತ್ತೆ? ಅಲ್ಲದೆ ಮೋದಿ ಸರ್ಕಾರವನ್ನು ಎದುರು ಹಾಕಿಕೊಂಡು ಹೇಗೆಲ್ಲಾ ಪರದಾಡಿದ್ದರು ಕುಸ್ತಿಪಟು ವಿನೇಶ್ ಫೋಗಟ್? ಮುಂದೆ ಓದಿ.
ಚಳಿ, ಮಳೆ & ಗಾಳಿಯಲ್ಲಿ ನರಳಾಟ!
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರಿ ಗಂಭೀರ ಆರೋಪ ಕೇಳಿಬಂದಿತ್ತು. ಯಾಕಂದ್ರೆ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಸಾಕಷ್ಟು ಕಿರುಕುಳವನ್ನು ಅನುಭವಿಸಿದ್ದರು ಎಂದು ಆರೋಪ ಮಾಡಲಾಗಿತ್ತು. ಹೀಗಿದ್ದಾಗ ಬ್ರಿಜ್ ಭೂಷಣ್ ಸಿಂಗ್ ಈ ಸ್ಥಾನಕ್ಕೆ ಅರ್ಹರಲ್ಲ ಎಂದು ಆಕ್ರೋಶ ಹೊರಹಾಕಿದ್ದರು ಭಾರತದ ಕುಸ್ತಿಪಟುಗಳು. ಹೀಗಾಗಿ ದೊಡ್ಡ ಹೋರಾಟ ಕೂಡ ಆರಂಭಿಸಿದ್ದರು.
ವಿನೇಶ್ ಫೋಗಟ್ ಸೇರಿದಂತೆ ದೊಡ್ಡ ದೊಡ್ಡ ಕುಸ್ತಿಪಟುಗಳೇ ಹೋರಾಟಕ್ಕೆ ಎಂಟ್ರಿ ಕೊಟ್ಟಿದ್ರು ಚಳಿ, ಮಳೆ, ಗಾಳಿಯಲ್ಲಿ ನರಳಾಡುತ್ತಾ ಪ್ರತಿಭಟನೆ ನಡೆಸಿದ್ದರು. ಆಗ ಮೋದಿ ಅವರ ಸರ್ಕಾರ ಕೂಡ ಕುಸ್ತಿಪಟುಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಹಾಗೇ ದೇಶಾದ್ಯಂತ ಈ ಕಿಚ್ಚು ದೊಡ್ಡದಾಗಿ ಹೊತ್ತಿಕೊಂಡಿತ್ತು. ಇಷ್ಟೆಲ್ಲವನ್ನೂ ಮೀರಿರುವ ವಿನೇಶ್ ಫೋಗಟ್ ಅವರು ಇದೀಗ 'ಒಲಿಂಪಿಕ್ಸ್' ಕ್ರೀಡಾಕೂಟದ ಇತಿಹಾಸದಲ್ಲೇ, ಯಾವುದೇ ಭಾರತೀಯ ಹೆಣ್ಣುಮಗಳು ಮಾಡದ ಸಾಧನೆ ಮಾಡಲು ಸಜ್ಜಾಗಿದ್ದಾರೆ.
ಭಾರತೀಯರು ಏನು ಹೇಳುತ್ತಿದ್ದಾರೆ?
ಒಟ್ನಲ್ಲಿ ಎಲ್ಲಾ ಕಹಿ ನೆನಪುಗಳನ್ನ ಮರೆತು ಇದೀಗ Olympics 2024ರ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ ವಿನೇಶ್ ಫೋಗಟ್. ಹಾಗೆಯೇ ಭಾರತಕ್ಕೆ ಈ ಬಾರಿ ಚಿನ್ನದ ಪದಕ ಗೆಲ್ಲಿಸಿಕೊಡುವ ಹುಮ್ಮಸ್ಸಿನಲ್ಲಿ ಇದ್ದಾರೆ ವಿನೇಶ್ ಫೋಗಟ್. 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ಸ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಈಗ ಕನ್ಫರ್ಮ್ ಆಗಿದೆ. ಆದರೆ ಚಿನ್ನದ ಪದಕ ಗೆಲ್ಲಬೇಕು ಎಂದು ಮುಂದೆ ನುಗ್ಗುತ್ತಿರುವ ನಮ್ಮ ಹೆಮ್ಮೆಯ ಭಾರತದ ಕುಸ್ತಿಪಟು ವಿನೇಶ್ ಫೋಗಟ್‌ಗೆ ಎಲ್ಲಾ ಒಳ್ಳೆಯದೇ ಆಗಲಿ ಎನ್ನುತ್ತಿದ್ದಾರೆ ಭಾರತೀಯರು.












Click it and Unblock the Notifications