Virat Kohli: ಬಿಸಿಸಿಐ ನಿಯಮದ ವಿರುದ್ಧ ಬೇಸರ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ

ಐಪಿಎಲ್‌ 2025ರ ಆವೃತ್ತಿಗೆ ಇನ್ನು ಕೆಲವೇ ದಿನಗಳಿದ್ದು ಎಲ್ಲಾ ತಂಡಗಳು ಅಭ್ಯಾಸ ಆರಂಭಿಸಿವೆ. ವಿರಾಟ್ ಕೊಹ್ಲಿ ಕೂಡ ಬೆಂಗಳೂರಿಗೆ ಬಂದಿದ್ದು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಕೊಹ್ಲಿ ಅಭ್ಯಾಸ ಆರಂಭಿಸುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್‌ ಸಮಿಟ್‌ನಲ್ಲಿ ಭಾಗವಹಿಸಿದ್ದು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್‌ ಪಂದ್ಯಗಳ ಸಂದರ್ಭದಲ್ಲಿ ಆಟಗಾರರು ಕುಟುಂಬಸ್ಥರ ಜೊತೆ ಇರಬಾರದು ಎನ್ನುವ ಬಿಸಿಸಿಐ ನಿಯಮದ ಬಗ್ಗೆ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರ ಕಠಿಣ ಸಮಯದಲ್ಲಿ ಕುಟುಂಬಸ್ಥರು ಜೊತೆಗೆ ಇದ್ದರೆ ಸಮತೋಲನ ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಿರುವುದಾಗಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.

disappointed virat kohli slams bcci family diktat rcb ipl 2025

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಸೋತ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರವಾಸಗಳಲ್ಲಿ ಆಟಗಾರರರು ಕುಟುಂಬದವರ ಜೊತೆ ಇರುವುದ್ಕೆ ಕಠಿಣ ನಿಯಮಗಳನ್ನು ರೂಪಿಸಿದೆ. 45 ದಿನಗಳಿಗಿಂತ ಹೆಚ್ಚಿನ ದಿನ ಪ್ರವಾಸ ಕೈಗೊಂಡಾಗ ಮೊದಲ ಎರಡು ವಾರಗಳ ಬಳಿಕ ಮಾತ್ರ ಆಟಗಾರರ ಕುಟುಂಬದವರು, ಹೆಂಡತಿ ಮತ್ತು ಮಕ್ಕಳು 14 ದಿನಗಳವರೆಗೆ ಮಾತ್ರ ಜೊತೆಯಲ್ಲಿ ಇರಬಹುದು ಎಂದು ಎಂದು ತಿಳಿಸಿದೆ. ಕಡಿಮೆ ಅವಧಿಯ ಪ್ರವಾಸದಲ್ಲಿ ಆಟಗಾರರು ಒಂದು ವಾರದವರೆಗೆ ಅವರ ಕುಟುಂಬಗಳೊಂದಿಗೆ ಇರಬಹುದಾಗಿದೆ.

ವಿರಾಟ್ ಕೊಹ್ಲಿ ಹೇಳಿದ್ದೇನು?

ಹೊರಗೆ ನಡೆಯುವ ಯಾವುದೇ ತೀವ್ರವಾದ ಘಟನೆಗಳ ಸಮಯದಲ್ಲಿ ನಿಮ್ಮ ಕುಟುಂಬದವರು ಜೊತೆಗಿಲ್ಲದೇ ಇದ್ದರೆ ಎಷ್ಟು ಹಿಂಸೆಯಾಗುತ್ತದೆ ಎಂದು ವಿವರಿಸುವುದು ತುಂಬಾ ಕಷ್ಟ ಎಂದು ಹೇಳಿದರು. ಕುಟುಂಬದವರು ಯಾವ ರೀತಿಯ ವಿಶ್ವಾಸ ತರುತ್ತಾರೆ ಎನ್ನುವುದು ಅವರಿಗೆ ತಿಳಿದಿದೆ ಎನಿಸಲ್ಲ. ಆ ನಿಯಮದ ಬಗ್ಗೆ ನನಗೆ ನಿರಾಸೆಯಾಗಿದೆ, ಪ್ರವಾಸದ ಸಮಯದಲ್ಲಿ ಕಳಪೆ ಪ್ರದರ್ಶನದ ಬಳಿಕ ಯಾವುದೇ ಆಟಗಾರ ಒಂಟಿಯಾಗಿ ಕೂತು ದುಃಖಪಡಲು ಬಯಸಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದರು.

ನಾನು ಕಾಮನ್ ಆಗಿರಲು ಬಯಸುತ್ತೇನೆ, ಆಟವನ್ನು ನಿಜವಾಗಿ ಒಂದು ಜವಾಬ್ದಾರಿ ಎಂದು ಪರಿಗಣಿಸಬಹುದು. ಜವಾಬ್ದಾರಿ ಮುಗಿದ ಬಳಿಕ ಮತ್ತೆ ಜೀವನಕ್ಕೆ ಬರಬೇಕು ಎಂದರು. ನೀವು ನಿಮ್ಮ ಬದ್ಧತೆ, ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮನೆಗೆ ಹಿಂತಿರುಗುತ್ತೀರಿ, ನೀವು ಕುಟುಂಬದ ಜೊತೆ ಇರುತ್ತೀರಿ, ನಿಮ್ಮ ಮನೆಯಲ್ಲಿ ಸಾಮಾನ್ಯರಂತೆ ಇರುತ್ತದೆ. ಸಾಮಾನ್ಯ ಕುಟುಂಬ ಜೀವನ ಮುಂದುವರೆಯುತ್ತದೆ, ಅದು ತುಂಬಾ ಖುಷಿ ಕೊಡುವ ದಿನ, ಸಮಯ ಸಿಕ್ಕಾಗಲೆಲ್ಲಾ ಕುಟುಂಬದ ಜೊತೆ ಸಮಯ ಕಳೆಯುವ ಅವಕಾಶವನ್ನು ನಾನು ಕಳೆದುಕೊಳ್ಳಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+