ಹೇಯ್.. ಗುರು ಭುವನೇಶ್ವರ್ ಕುಮಾರ್ ಸಾಮಾನ್ಯ ಆಟಗಾರ ಅಲ್ಲ, ಒಮ್ಮೆ ಬ್ಯಾಟ್‌ ಕೊಟ್ಟು ನೋಡಿ: ಗಂಭೀರ್‌ಗೆ ಡಿಕೆ ಸಲಹೆ

Dinesh Karthik: ಕ್ರೈಸ್ಟ್‌ಚರ್ಚ್‌ನಲ್ಲಿ ಗುರುವಾರ (ಅಕ್ಟೋಬರ್ 22) ನಡೆದ ಮೊದಲ ಟಿ20ಐ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಆರ್‌ಸಿಬಿ ಸ್ಟಾರ್ ಪ್ಲೇಯರ್ ಭುವನೇಶ್ವರ್ ಕುರಿತು ಭಾರತದ ಮಾಜಿ ಕ್ರಿಕೆಟರ್ ದಿನೇಶ್ ಕಾರ್ತಿಕ್ ಅವರು ಮುಖ್ಯ ಕೋಚ್ ಗೌತಮ್‌ ಗಂಭೀರ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಎರಡನೇ ಪಂದ್ಯಕ್ಕಾಗಿ ತಂಡದ ಪ್ಲೇಯಿಂಗ್ 11 ಸಂಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ದಿನೇಶ್ ಕಾರ್ತಿಕ್ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಲಹೆ ನೀಡಿದ್ದಾರೆ. ತಂಡದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಬಲವನ್ನು ಹೆಚ್ಚಿಸಲು ಈ ಬದಲಾವಣೆ ಅಗತ್ಯ ಎಂದು ಅವರು ಹೇಳಿದ್ದಾರೆ.

Dinesh Karthik Advice to India Head Coach Gautam Gambhir on Bhuvneshwar Kumar Ahead of 2nd T20I

ದಿಶೇನ್ ಕಾರ್ತಿಕ್ ಮಹತ್ವದ ಸಲಹೆ

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳು 225 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರಿಂದ, ಭಾರತದ ಬೌಲಿಂಗ್ ವಿಭಾಗದಲ್ಲಿ ಹೆಚ್ಛಿನ ನಿಯಂತ್ರಣದ ಅಗತ್ಯವಿದೆ ಎಂದು ಮಾಜಿ ಕ್ರಿಕೆಟರ್ ದಿಶೇನ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಭುವನೇಶ್ವರ್ ಕುಮಾರ್ ಮೊದಲ ಪಂದ್ಯದಲ್ಲಿ ತುಸು ದುಬಾರಿಯಾಗಿದ್ದರೂ, ಮುಂಬರುವ ಪಂದ್ಯಗಳಲ್ಲಿ ಅವರು ತಮ್ಮ ಲಯಕ್ಕೆ ಮರಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಭುವಿ ಬ್ಯಾಟಿಂಗ್ ಕೂಡ ಮಾಡಬಲ್ಲರು'

'ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಕೇವಲ ಬೌಲಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಕೆಳ ಕ್ರಮಾಂಕದಲ್ಲಿ ಬಂದು ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಕೆಳಕ್ರಮಾಂಕದ ಆಲ್ ರೌಂಡರ್ ಆಗಿ ಬಳಸಿಕೊಳ್ಳುವುದರಿಂದ ತಂಡದ ಬ್ಯಾಟಿಂಗ್ ಲೈನ್-ಅಪ್‌ಗೆ ಹೆಚ್ಚುವರಿ ಬಲ ಸಿಕ್ಕಂತಾಗಲಿದೆ,' ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಗಂಭೀರ್‌ಗೆ ಸಲಹೆ ನೀಡಿದ್ದಾರೆ.

'ಪ್ಲೇಯಿಂಗ್ 11 ಸಂಯೋಜನೆಗೆ ಒತ್ತು ನೀಡಬೇಕು'

ತಂಡದಲ್ಲಿ ಬ್ಯಾಟಿಂಗ್ ಬಲವನ್ನು ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಗಳನ್ನು ಹೊಂದುವುದು ಮುಖ್ಯವಾಗಿದೆ. ಇದರಿಂದಾಗಿ ಮುಖ್ಯ ಕೋಚ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ 2ನೇ ಟಿ20ಐ ಪಂದ್ಯಕ್ಕಾಗಿ ಪ್ಲೇಯಿಂಗ್ 11 ಅನ್ನು ಮರುಪರಿಶೀಲಿಸಬೇಕು ಎಂದು ಅಂತಲೂ ಮಹತ್ವದ ಸಲಹೆ ನೀಡಿ ಗಮನ ಸೆಳೆದಿದ್ದಾರೆ.

ಭುವನೇಶ್ವರ್ ಕುಮಾರ್ ಮೇಲೆ ನಿರೀಕ್ಷೆಯಿಟ್ಟ ಅಭಿಮಾನಿಗಳು

ಅದರಲ್ಲೂ ಅನುಭವಿ ಭುವನೇಶ್ವರ್ ಕುಮಾರ್ ಅವರು ನಾಲ್ಕು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ್ದು, ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯದೇ 49 ರನ್‌ ಬಿಟ್ಟುಕೊಟ್ಟರು. ಆದರೆ ಅವರು ಮುಂದಿನ ಪಂದ್ಯದಗಳಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ ಎನ್ನುವುದು ಅಭಿಮಾನಿಗಳು ನಿರೀಕ್ಷೆಯಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ಮೂಲಕ ಸುದೀರ್ಘ ವಿರಾಮದ ನಂತರ ಭಾರತ ತಂಡಕ್ಕೆ ಮರಳಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ತಮ್ಮ ಕಂಬ್ಯಾಕ್ ಪಂದ್ಯದಲ್ಲಿ 49 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲು ಸಾಧ್ಯವಾಗದಿರಬಹುದು. ಆದರೆ ಕಿವೀಸ್ ಬ್ಯಾಟರ್‌ಗಳು ಅಬ್ಬರಿಸಿದ ಕ್ರೈಸ್ಟ್‌ಚರ್ಚ್‌ನ ಹೈ-ಸ್ಕೋರಿಂಗ್ ಮೈದಾನದಲ್ಲಿ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಅವರ ಸಾಮರ್ಥ್ಯ ಮತ್ತು ರನ್ ಚೇಸಿಂಗ್ ವೇಳೆ ಪ್ರದರ್ಶಿಸಿದ ಅನುಭವ ತಂಡಕ್ಕೆ ಭರವಸೆ ಮೂಡಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ವಿಕೆಟ್‌ಗಳನ್ನು ಕಬಳಿಸಿ, ಡೆತ್ ಓವರ್‌ಗಳಲ್ಲಿ ಹಾಗೂ ಪವರ್‌ಪ್ಲೇನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಅಪಾರ ಅನುಭವ ಭುವಿಗಿದೆ. ಮೊದಲ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ಸಣ್ಣ ಹಿನ್ನಡೆಯಾಗಿದ್ದರೂ, ಕಿವೀಸ್ ನೆಲದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಮುಂಬರುವ ಪಂದ್ಯಗಳಲ್ಲಿ ಅವರು ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳುವುದು ಖಚಿತ ಎಂಬ ಬಲವಾದ ನಂಬಿಕೆ ಅಭಿಮಾನಿಗಳಲ್ಲಿದೆ.

ಸ್ವಿಂಗ್ ಕಿಂಗ್ ಎನಿಸಿಕೊಂಡಿರುವ ಭುವನೇಶ್ವರ್ ಕುಮಾರ್, ಸರಣಿಯ ಮುಂದಿನ ಪಂದ್ಯಗಳಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ವಿಕೆಟ್ ಬೇಟೆಯಾಡಲಿದ್ದಾರೆ. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಅಂತಲೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+