Naveen Ul Haq: ನವೀನ್‌ಗೆ ವರದಾನವಾಯ್ತು ಕೊಹ್ಲಿಯ ಆ ಒಂದು ಮಾತು!

ಐಪಿಎಲ್ ಪಂದ್ಯದ ವೇಳೆ ಆರಂಭವಾದ ವಿರಾಟ್ ಕೊಹ್ಲಿ ಮತ್ತು ಅಫ್ಘಾನಿಸ್ತಾನ ಬೌಲರ್ ನವೀನ್ ಉಲ್‌ ಹಕ್ ನಡುವಿನ ಜಗಳಕ್ಕೆ ತೆರೆ ಬಿದ್ದಿದೆ. ಏಕದಿನ ವಿಶ್ವಕಪ್‌ನ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುನಿಸು ಮರೆತು ಪರಸ್ಪರ ತಬ್ಬಿಕೊಂಡರು.

ಅದಕ್ಕೂ ಮುನ್ನ ನವೀನ್ ಉಲ್‌ ಹಕ್‌ರನ್ನು ಭಾರತದ ಕ್ರೀಡಾಭಿಮಾನಿಗಳು ಎಲ್ಲೆಂದರಲ್ಲಿ ರೇಗಿಸುತ್ತಿದ್ದರು. ಭಾರತ ಅಫ್ಘಾನಿಸ್ತಾನ ಪಂದ್ಯದ ನಡುವೆ ಕೂಡ ನವೀನ್ ಉಲ್‌ ಹಕ್‌ರನ್ನು ಪ್ರೇಕ್ಷಕರು ಕೆಣಕುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ್ದ ವಿರಾಟ್ ಕೊಹ್ಲಿ, ಆ ರೀತಿ ಮಾಡದಂತೆ ಸನ್ನೆ ಮಾಡಿದ್ದರು.

naveen-ul-haq-following-compromise-with-virat-kohli

ಕೊಹ್ಲಿಯ ಆ ಒಂದು ಮಾತಿಗೆ ಅಭಿಮಾನಿಗಳು ನವೀನ್‌ರನ್ನು ಕೆಣಕುವುದನ್ನು ಬಿಟ್ಟರು, ಪಂದ್ಯದ ಸಮಯದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡು ಒಂದಾದ ಬಳಿಕ ನವೀನ್ ಅವರ ದೆಸೆಯೇ ಬದಲಾಗಿದೆ. ಇಷ್ಟು ದಿನ ವಿಲನ್ ಆಗಿದ್ದ ನವೀನ್ ಈಗ ಹೀರೋ ಆಗಿದ್ದಾರೆ.

ದೆಹಲಿ ಅಂಗಳದಲ್ಲಿ ನವೀನ್‌ಗೆ ಭಾರಿ ಬೆಂಬಲ!

ಅಕ್ಟೋಬರ್ 15ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ದೆಹಲಿಯ ಕ್ರಿಕೆಟ್ ಅಭಿಮಾನಿಗಳು ಅಫ್ಘಾನಿಸ್ತಾನಕ್ಕೆ ಬೆಂಬಲ ಸೂಚಿಸಿದರು. ಅದರಲ್ಲೂ ನವೀನ್ ಉಲ್ ಹಕ್‌ ಅವರಿಗೆ ಭಾರಿ ಬೆಂಬಲ ಸಿಕ್ಕಿತ್ತು, ಜೋಸ್ ಬಟ್ಲರ್ ಅವರ ವಿಕೆಟ್ ಪಡೆಯುತ್ತಿದ್ದಂತೆ ನವೀನ್ ಹೆಸರನ್ನು ಕೂಗಿ ಬೆಂಬಲ ಸೂಚಿಸಿದರು.

ವಿರಾಟ್ ಕೊಹ್ಲಿ ಜೊತೆ ಮುನಿಸು ಮರೆತು ಒಂದಾದ ನಂತರ ನವೀನ್ ಉಲ್ ಹಕ್ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ದೆಹಲಿ ಪ್ರೇಕ್ಷಕರು ಇಂಗ್ಲೆಂಡ್ ವಿರುದ್ಧ ನವೀನ್ ಅವರನ್ನು ಹುರಿದುಂಬಿಸಿದರು ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಶ್ವಕಪ್ ಬಳಿಕ ನವೀನ್ ನಿವೃತ್ತಿ

ಏಕದಿನ ವಿಶ್ವಕಪ್ ಬಳಿಕ ನವೀನ್ ಉಲ್ ಹಕ್ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಅಫ್ಘಾನಿಸ್ತಾನ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ನವೀನ್ ಉಲ್ ಹಕ್ ಅವರು ಈ ಸ್ಮರಣೀಯ ಗೆಲುವನ್ನು ಬಹುಕಾಲ ನೆನಪಿನಲ್ಲಿ ಇಟ್ಟುಕೊಳ್ಳಲಿದ್ದಾರೆ.

ಅಫ್ಘಾನಿಸ್ತಾನ ಇಂಗ್ಲೆಂಡ್ ವಿರುದ್ಧ 69 ರನ್‌ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಏಕದಿನ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಅಫ್ಘಾನಿಸ್ತಾನಕ್ಕೆ ಇದು ಎರಡನೇ ಗೆಲುವಾಗಿದೆ.

ಲಕ್ನೋದಲ್ಲಿ ನಡೆದ ಐಪಿಎಲ್ 2023 ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಜಯಗಳಿಸಿದ ನಂತರ ಕೊಹ್ಲಿ ಮತ್ತು ನವೀನ್ ಜಗಳವಾಡಿದರು. ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಸಹ ಜಗಳದಲ್ಲಿ ಭಾಗಿಯಾಗಿದ್ದರು ಮತ್ತು ಇದರ ಪರಿಣಾಮವಾಗಿ, ಕೊಹ್ಲಿ ಮತ್ತು ಗಂಭೀರ್ ಅವರ ಪಂದ್ಯದ ಶುಲ್ಕದ ಶೇಕಡಾ 100 ರಷ್ಟು ದಂಡವನ್ನು ವಿಧಿಸಿದ್ದರೆ, ನವೀನ್ ಅವರ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ವಿಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+