DC vs RCB: ಡೆಲ್ಲಿಯಲ್ಲಿ ಕನ್ನಡ ಮಣ್ಣಿನ ಮಗ-ದತ್ತು ಪುತ್ರನ ಕಾಳಗ; ಇಲ್ಲಿದೆ ಪಿಚ್‌, ವೆದರ್ ರಿಪೋರ್ಟ್‌

RCB Vs DC IPL 2026: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್‌ 27) ನಡೆಯಲಿರುವ ಐಪಿಎಲ್ 2026ರ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ ಇಲ್ಲಿನ ಪಿಚ್ ರಿಪೋರ್ಟ್‌ ಹಾಗೂ ಹವಾಮಾನ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ

ಪ್ರಸ್ತುತ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಏಳು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ 7 ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಭಾರಿ ಸೋಲು ಅನುಭವಿಸಿರುವ ಡೆಲ್ಲಿ, ಇದೀಗ ಆರ್‌ಸಿಬಿ ವಿರುದ್ಧದ ಈ ಪಂದ್ಯದ ಮೂಲಕ ಪುಟಿದೇಳುವ ಗುರಿ ಹೊಂದಿದೆ. ಮತ್ತೊಂದೆಡೆ ಬೆಂಗಳೂರು ಮತ್ತು ಡೆಲ್ಲಿ ನಡುವಿನ ಈ ಹೋರಾಟವು ಉಭಯ ತಂಡಗಳಿಗೂ ಅಂಕಪಟ್ಟಿಯಲ್ಲಿ ಮೇಲೆರಲು ಅತ್ಯಂತ ನಿರ್ಣಾಯಕವಾಗಿದೆ.

DC vs RCB IPL 2026 Pitch Report Arun Jaitley Stadium Weather And Match Preview Know details

ಕೆ.ಎಲ್‌.ರಾಹುಲ್ ಹೋರಾಟ ವ್ಯರ್ಥ

ಶನಿವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕೆ.ಎಲ್.ರಾಹುಲ್ ಕೇವಲ 67 ಎಸೆತಗಳಲ್ಲಿ 16 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 152 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ನಿತಿನ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿದರು.

ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ಪರ ಆರಂಭಿಕ ಆಟಗಾರರು ಸ್ಫೋಟಕ ಆರಂಭ ನೀಡಿದರು. ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಮೊದಲ ವಿಕೆಟ್‌ಗೆ ಕೇವಲ ಕೆಲವು ಓವರ್‌ಗಳಲ್ಲಿ 126 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಈ ಭರ್ಜರಿ ಆರಂಭವು ಪಂಜಾಬ್ ತಂಡವು ಐತಿಹಾಸಿಕ ರನ್ ಚೇಸ್ ಮಾಡುವಲ್ಲಿ ಪ್ರಮುಖ ಅಡಿಪಾಯ ಹಾಕಿತು.

ಅಯ್ಯರ್ ಆಕ್ರಮಣಕಾರಿ ಆಟಕ್ಕೆ ಮಣಿದ ಡೆಲ್ಲಿ

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಜೊತೆಗೆ ಎರಡು ನಿರ್ಣಾಯಕ ಅರ್ಧಶತಕದ ಜೊತೆಯಾಟಗಳನ್ನು ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮವಾಗಿ, ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪಂಜಾಬ್ ತಂಡವು 7 ಎಸೆತಗಳು ಬಾಕಿ ಇರುವಂತೆಯೇ ಈ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

ಮತ್ತೊಂದೆಡೆ ಅತ್ಯುತ್ತಮ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡವು ಆಡಿರುವ ಏಳು ಪಂದ್ಯಗಳಲ್ಲಿ ಐದು ಗೆಲುವುಗಳನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಬೆಂಗಳೂರು ತಂಡ ಅದೇ ಗೆಲುವಿನ ಲಯವನ್ನು ಮುಂದುವರಿಸುವ ಗುರಿ ಹೊಂದಿದೆ.

ಡೆಲ್ಲಿ ಮತ್ತು ಆರ್‌ಸಿಬಿ ಮುಖಾಮುಖಿ ದಾಖಲೆಗಳು

* ಒಟ್ಟು ಪಂದ್ಯಗಳು: 34

* ಆರ್‌ಸಿಬಿ ಗೆಲುವು: 20

* ಡೆಲ್ಲಿ ಕ್ಯಾಪಿಟಲ್ಸ್ ಗೆಲುವು: 13

ಅಂಕಿಅಂಶಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ತಂಡವು ಮೇಲುಗೈ ಸಾಧಿಸಿದೆ. ಸೋಮವಾರದ ಪಂದ್ಯದಲ್ಲಿ ಡೆಲ್ಲಿ ಈ ಅಂತರವನ್ನು ಕಡಿಮೆ ಮಾಡುತ್ತದೆಯೇ ಅಥವಾ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತನ್ನ ಆಧಿಪತ್ಯ ಮುಂದುವರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಹವಾಮಾನ ವರದಿ ಹೇಳೋದೇನು?

ಅಕ್ಯುವೆದರ್ ಪ್ರಕಾರ, ಏಪ್ರಿಲ್ 27ರಂದು ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಹಗಲಿನಲ್ಲಿ ತಾಪಮಾನವು ಸುಮಾರು 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸಂಜೆಯ ವೇಳೆಗೆ ಸ್ವಲ್ಪ ತಂಪಾದ ವಾತಾವರಣ ಇರಲುದೆ. ಪಂದ್ಯ ನಡೆಯುವ ಅವಧಿಯಲ್ಲಿ ತಾಪಮಾನವು 40 ರಿಂದ 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ರಿಪೋರ್ಟ್‌

ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿಯಾಗುದೆ. ಈ ಮೈದಾನದಲ್ಲಿ ನಡೆದ ಕಳೆದ ಪಂದ್ಯದಲ್ಲೇ 250ಕ್ಕೂ ಅಧಿಕ ರನ್‌ಗಳ ಬೃಹತ್ ಗುರಿಯನ್ನು ಅತ್ಯಂತ ಸುಲಭವಾಗಿ ಬೆನ್ನಟ್ಟಿರುವುದು ಇಲ್ಲಿನ ಬ್ಯಾಟಿಂಗ್ ಪೂರಕ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಹಾಗಾದ್ರೆ ಸೋಮವಾರ ನಡೆಯಲಿರುವ ಆರ್‌ಸಿಬಿ ಮತ್ತು ಡೆಲ್ಲಿ ನಡುವಿನ ಪಂದ್ಯ ಹೇಗಿರಲಿದೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+