CSK vs RR: ತವರಿನಲ್ಲಿ ಅಬ್ಬರಿಸಿದ ಚೆನ್ನೈ ಸೂಪರ್ ಕಿಂಗ್ಸ್: ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲು ಗೆಲುವೊಂದೆ ಟಾರ್ಗೆಟ್
ಆರ್‌ಸಿಬಿ ಅಭಿಮಾನಿಗಳು ಈಗ ಐಪಿಎಲ್‌ನ ಪ್ರತಿಯೋಂದು ಪಂದ್ಯದ ಮೇಲೆ ತಮ್ಮ ದೃಷ್ಟಿಯನ್ನು ನೆಟ್ಟಿರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪಂದ್ಯ ಮೇಲೂ ಆರ್‌ಸಿಬಿ ಒಂದು ಕಣ್ಣು ನೆಟ್ಟಿತ್ತು. ಈ ಪಂದ್ಯದಲ್ಲಿ ಯಾರು ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಪ್ಲೇ ಆಫ್ ಚಾನ್ಸ್ ಎಷ್ಟಿರುತ್ತದೆ ಎಂಬ ಬಗ್ಗೆ ಲೆಕ್ಕಾಚಾರ ನಡೆದಿರುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಚೆನ್ನೈ ಅಬ್ಬರದ ಪ್ರದರ್ಶನವನ್ನು ನೀಡಿ ಐದು ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ರೇಸ್‌ಗೆ ತನ್ನ ಹಕ್ಕನ್ನು ಮಂಡಿಸಿದೆ. ಚೆನ್ನೈ ಅಡಿರುವ 13 ಪಂದ್ಯಗಳಲ್ಲಿ 7 ಜಯ, 6 ಸೋಲು ಕಂಡಿದ್ದು, 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಅಲ್ಲದೆ ಈ ತಂಡದ ರನ್ ರೇಟ್ 0.528 ಆಗಿದೆ.

ಎಂಟು ಅಂಕ ಕಲೆ ಹಾಕಿರುವ ಆರ್‌ಸಿಬಿ
ಆರ್‌ಸಿಬಿ ಡೆಲ್ಲಿ ವಿರುದ್ಧ ಭಾನುವಾರ ಎರಡನೇ ಪಂದ್ಯದಲ್ಲಿ ಕಾದಾಟ ನಡೆಸಬೇಕಿದೆ. ಆರ್‌ಸಿಬಿ ಈ ಪಂದ್ಯವನ್ನು ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ. ಆರ್‌ಸಿಬಿ ಸದ್ಯ ಆಡಿದ 12 ಪಂದ್ಯಗಳಿಂದ ಐದು ಜಯ ಸಾಧಿಸಿದ್ದು, 10 ಅಂಕಗಳನ್ನು ಕಲೆ ಹಾಕಿದೆ. ಆರ್‌ಸಿಬಿ ತಂಡದ ರನ್ ರೇಟ್ 0.217 ಆಗಿದೆ.
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 141 ರನ್ ಕೆಲ ಹಾಕಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ 18.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 145 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯ ಚೆನ್ನೈ ಪಾಲಿಗೆ ಮಹತ್ವದಾಗಿತ್ತು.

ನಾಯಕನ ಆಟವಾಡಿದ ರುತುರಾಜ್
ಚೆನ್ನೈ ಸೂಪರ್ ಕಿಂಗ್ಸ್ ಸಾಧಾರಣ ಮೊತ್ತ ಹಿಂಬಾಲಿಸಿ, ಸಾಧಾರಣ ಆರಂಭವನ್ನು ಕಂಡಿತು. ಯುವ ಆಟಗಾರ ರಚಿನ್ ರವೀಂದ್ರ 27 ರನ್ ಬಾರಿಸಿ ಔಟ್ ಆದರು. ಭರವಸೆಯ ಆಟಗಾರ ಡೇರಿಲ್ ಮಿಚೆಲ್ 22, ಮೊಯಿನ್ ಅಲಿ 10, ಶಿವಂ ದುಬೆ 18 ರನ್ ಗಳ ಕಾಣಿಕೆ ನೀಡಿದರು. ನಾಯಕ ರುತುರಾಜ್ ಗಾಯಕ್ವಾಡ್ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 42 ರನ್ ಸಿಡಿಸಿದರು.
ರಾಜಸ್ಥಾನ ಪರ ಅನುಭವಿ ಸ್ಪಿನ್ ಬೌಲರ್ ಅಶ್ವಿನ್ 2 ವಿಕೆಟ್ ಕಬಳಿಸಿದರು.
ರಿಯಾನ್ ಪರಾಗ್ ಆಸರೆ
ರಾಜಸ್ಥಾನ ಆರಂಭ ಸಾಧಾರಣವಾಗಿತ್ತು. ಯಶಸ್ವಿ ಜೈಸ್ವಾಲ್ (24), ಜೋಸ್ ಬಟ್ಲರ್ (21) ಜೋಡಿ 6.2 ಓವರ್‌ಗಳಲ್ಲಿ 43 ರನ್ ಜೊತೆಯಾಟದ ಕಾಣಿಕೆ ನೀಡಿದರು. ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ 15 ರನ್‌ಗಳಿಗೆ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್ 28 ರನ್ ಬಾರಿಸಿ ಕೊಂಚ ಸಿಎಸ್‌ಕೆ ಬೌಲರ್‌ಗಳನ್ನು ಕಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ರಿಯಾನ್ ಪರಾಗ್ 35 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 47 ರನ್ ಬಾರಿಸಿ ತಂಡಕ್ಕೆ ನೆರವಾದರು.
ಚೆನ್ನೈ ತಂಡದ ಪರ ಸಿಮರ್ಜಿತ್ ಸಿಂಗ್ 3 ಹಾಗೂ ತುಷಾರ್ ದೇಶಪಾಂಡೆ 2 ವಿಕೆಟ್ ಕಬಳಿಸಿದರು.












Click it and Unblock the Notifications