IPL 2026: ಐಪಿಎಲ್‌ 2026 ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು ಮೊದಲ ತಂಡ

CSK Vs LSG IPL 2026: ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ (ಮೇ 10) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉರ್ವಿಲ್ ಪಟೇಲ್‌ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಸೋಲಿನೊಂದಿಗೆ ಲಕ್ನೋ ತಂಡ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಎಲ್‌ಎಸ್‌ಜಿ ನೀಡಿದ ಗುರಿಯನ್ನು ಸಿಎಸ್‌ಕೆ 19.2 ಓವರ್‌ಗಳಲ್ಲಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು.

CSK Beat LSG by 5 Wickets as Urvil Patel Smashes Record Fifty in IPL 2026 in M A Chidambaram

ಮಿಂಚಿದ ಉರ್ವಿಲ್ ಪಟೇಲ್

ಎಲ್‌ಎಸ್‌ಜಿ ನೀಡಿದ 204 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡಕ್ಕೆ ಉರ್ವಿಲ್ ಪಟೇಲ್ ಆಕ್ರಮಣಕಾರಿ ಆಟ ಆಡಿ ಉತ್ತಮ ಆರಂಭ ನೀಡಿದರು. ಕೇವಲ 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 65 ರನ್ ಸಿಡಿಸಿದ ಅವರು ಐಪಿಎಲ್ ಇತಿಹಾಸದ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು. ಇನ್ನು ನಾಯಕ ರುತುರಾಜ್ ಗಾಯಕ್ವಾಡ್ 42 ರನ್ ಸಿಡಿಸಿ ಭದ್ರ ಬುನಾದಿ ಹಾಕಿದರು.

ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವಂತೆ ಕಂಡ ಸಿಎಸ್‌ಕೆ ಲಕ್ನೋ ಬೌಲರ್‌ಗಳ ದಾಳಿಗೆ ಸಿಲುಕಿ ದಿಢೀರ್ ವಿಕೆಟ್ ಕಳೆದುಕೊಂಡಿತು. ಇದರಿಂದ ಪಂದ್ಯ ಕೊನೆಯ ಓವರ್‌ವರೆಗೆ ಸಾಗಿತು. ಒತ್ತಡದ ನಡುವೆಯೂ ಪ್ರಶಾಂತ್ ವೀರ್ ಅಜೇಯ 18 ಮತ್ತು ಶಿವಂ ದುಬೆ ಅಜೇಯ 15 ರನ್‌ಗಳ ಸಿಡಿಸಿ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಜಯದ ದಡ ಸೇರಿಸಿದರು.

ಸಿಎಸ್‌ಕೆ ಪರ ಯಾರು ಎಷ್ಟು ರನ್ ಸಿಡಿಸಿದರು?

ಸಿಎಸ್‌ಕೆ ಪರ ಬ್ಯಾಟ್‌ ಬೀಸಿದ ಉರ್ವಿಲ್ ಪಟೇಲ್‌ 65 ರನ್‌ (23), ನಾಯಕ ರುತುರಾಜ್ ಗಾಯಕ್ವಾಡ್ 42(28) ರನ್‌ ಸಿಡಿಸಿ ಉತ್ತಮ ಆರಂಭ ನೀಡಿದರು. ಉಳಿದಂತೆ ಸಂಜು ಸ್ಯಾಮ್ಸನ್ 28(14), ಕಾರ್ತಿಕ್ ಶರ್ಮಾ 20(20), ಡೆವಾಲ್ಡ್ ಬ್ರೆವಿಸ್ 10(12), ಶಿವಂ ದುಬೆ ಅಜೇಯ 15(7), ಪ್ರಶಾಂತ್ ವೀರ್ ಅಜೇಯ 18(12) ರನ್‌ ಸಿಡಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್‌ ತಂಡ ಜೋಶ್ ಇಂಗ್ಲಿಸ್ (33 ಎಸೆತಗಳಲ್ಲಿ 85 ರನ್), ಶಹಬಾಜ್ ಅಹ್ಮದ್ (25 ಎಸೆತಗಳಲ್ಲಿ ಅಜೇಯ 43) ಅವರ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ದೊಡ್ಡ ಮೊತ್ತದತ್ತ ಸಾಗಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್‌ಗಳಿಗೆ ಸೀಮಿತವಾಯಿತು. ಇನ್ನು ಈ ಗೆಲುವಿನೊಂದಿಗೆ ಚೆನ್ನೈ ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡರೆ, ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡಗಳಲ್ಲಿ ಒಂದಾಗಿದೆ.

ಎಲ್‌ಎಸ್‌ಜಿ, ಸಿಎಸ್‌ಕೆ ಪ್ಲೇಯಿಂಗ್ 11

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಐಡೆನ್ ಮಾರ್ಕ್ರಾಮ್, ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ಮೊಹಮ್ಮದ್ ಶಮಿ, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಜೇಮಿ ಓವರ್‌ಟನ್, ಅಕೀಲ್ ಹೊಸೆನ್, ಅಂಶುಲ್ ಕಾಂಬೋಜ್, ನೂರ್ ಅಹ್ಮದ್, ಮುಖೇಶ್ ಚೌಧರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+