Cristiano Ronaldo: ಕ್ಲಬ್ ಪರ ಆಡಲು ₹2000 ಕೋಟಿ ಸಂಭಾವನೆ ಪಡೆಯಲಿರುವ ಕ್ರಿಸ್ಟಿಯಾನೊ ರೊನಾಲ್ಡೊ

ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಪೋರ್ಚಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ. ತಮ್ಮ ಕ್ಲಾಸಿಕ್ ಕಾಲ್ಚಳಕ, ಗೋಲು ಬಾರಿಸುವ ಕ್ಷಮತೆ, ಎದುರಾಳಿಯನ್ನು ವಂಚಿಸುವ ಚಾಣಾಕ್ಷತನದಿಂದಲೇ ಹೆಸರುವಾಸಿಯಾದ ಸ್ಟಾರ್ ಫುಟ್ಬಾಲ್ ಆಟಗಾರ. ಇವರು ಸದ್ಯ ಸೌದಿ ಕ್ಲಬ್‌ ಜೊತೆ ಒಪ್ಪಂದ ಹೊಂದಿದ್ದು, ಇವರ ಈ ಒಪ್ಪಂದ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ರೊನೊಲ್ಡೊ ಮುಂದಿನ ನಡೆ ಏನು ಎಂಬ ಬಗ್ಗೆ ಪ್ರಶ್ನೆಗಳು ಆರಂಭವಾಗಿದ್ದವು. ಈಗ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ.

ಕ್ರಿಸ್ಟಿಯಾನೊ ರೊನಾಲ್ಡೊ 2022ರಲ್ಲಿ ಸೌದಿ ಪ್ರೊ ಲೀಗ್‌ನಲ್ಲಿ ಅಲ್-ನಾಸರ್ ಕ್ಲಬ್‌ನೊಂದಿಗೆ ಸೇರಿಕೊಂಡರು. ಇವರ ಈ ಒಪ್ಪಂದವು ಇದೇ ತಿಂಗಳು ಅಂತ್ಯವಾಗುತ್ತಿತ್ತು. ಈಗ ಇವರ ಮುಂದಿನ ನಡೆಯ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಅಲ್ಲದೆ ಹೊಸ ಒಪ್ಪಂದದಿಂದ ರೊನಾಲ್ಡೊ ಪಡೆಯಬಹುದಾದ ಮೊತ್ತದ ಬಗ್ಗೆಯೂ ಮಾಹಿತಿ ಲಭಿಸಿದೆ.

Cristiano Ronaldo Extends Al-Nassr Contract Worth 178 Million Annually Until 2027

ರೊನಾಲ್ಡೊ ಅಲ್-ನಾಸರ್ ಕ್ಲಬ್‌ನೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಯುರೋಪಿಯನ್ ಕ್ಲಬ್‌ಗಳತ್ತ ಮುಖ ಮಾಡುತ್ತಾರೆ ಎಂಬ ಊಹಾಪೋಹಗಳು ಎಲ್ಲ ನಿಂತಿವೆ. ತಮ್ಮ ಒಪ್ಪಂದದ ಬಗ್ಗೆ ರೊನಾಲ್ಡೊ ತಮ್ಮ ಎಕ್ಸ್‌ (X) ಖಾತೆಯಲ್ಲಿ ಬರೆದುಕೊಂಡಿದ್ದು, ಹೊಸ ಅಧ್ಯಾಯ ಆರಂಭವಾಗಿದೆ ಎಂದಿದ್ದಾರೆ. ಅದೇ ಉತ್ಸಾಹ, ಕನಸು, ಒಟ್ಟಿಗೆ ಇತಿಹಾಸ ನಿರ್ಮಿಸೋಣ ಎಂದು ರೊನಾಲ್ಡೊ ಹೇಳಿಕೊಂಡಿದ್ದಾರೆ. ಇವರ ಈ ಹೊಸ ಒಪ್ಪಂದವು 2027 ರವರೆಗೆ ವಿಸ್ತರಣೆ ಆಗಿದೆ ಎಂದು ಅಲ್‌ ನಾಸರ್ ಕ್ಲಬ್ ತಿಳಿಸಿದೆ.

ರೊನಾಲ್ಡೊ ಪಡೆಯಲಿರುವ ಸಂಭಾವನೆ ಎಷ್ಟು?

ಅಲ್‌ ನಾಸರ್ ಕ್ಲಬ್‌ ಜೊತೆ ಹೊಸ ಒಪ್ಪಂದದ ಪ್ರಕಾರ ರೊನಾಲ್ಡೊ ವಾರ್ಷಿಕ್ 178 ಮಿಲಿಯನ್ ಪೌಂಡ್‌ (ಪ್ರತಿ ವರ್ಷ ಸುಮಾರು 2 ಸಾವಿರ ಕೋಟಿ ರೂ.) ಸಂಭವಾನೆ ಪಡೆಯಲಿದ್ದಾರೆ. ಇದರ ಹೊರತಾಗಿಯೂ ರೊನಾಲ್ಡೊ ಅವರಿಗೆ ಬೇರೆ ಭತ್ಯೆಗಳು ಸಹ ಸಿಗಲಿವೆ. ಒಂದು ವೇಳೆ ಇವರು ಪ್ರತಿನಿಧಿಸುವ ತಂಡ ಗೆದ್ದರೆ, ಪ್ರತ್ಯೇಕವಾಗಿ 8 ಮಿಲಿಯನ್ ನೀಡಲಾಗುತ್ತದೆ ಎಂದು ಟಾಸ್ಕ್ ಸ್ಪೋರ್ಟ್‌ನ ವರದಿ ಮಾಡಿದೆ. ಅಲ್ಲದೆ ಒಪ್ಪಂದದ ಪೂರ್ವಭಾವಿಯಾಗಿ ಕ್ರಿಸ್ಟಿಯಾನೊ 24.5 ಮಿಲಿಯನ್ ಪಡೆದಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಅಲ್-ನಾಸರ್ ಕ್ಲಬ್‌ ಪರ ಇವರು ಅಮೋಘ ಪ್ರದರ್ಶನ ನೀಡಿದರು. ಇಟ್ಟು ಈ ಕ್ಲಬ್ ಪರ ಒಟ್ಟು 25 ಗೋಲುಗಳನ್ನು ಬಾರಿಸಿದ್ದಾರೆ. ಇವರ ಉಪಸ್ಥಿತಿಯ ಹೊರತಾಗಿಯೂ ಸೌದಿ ಪ್ರೊ ಲೀಗ್‌ ಪ್ರಶಸ್ತಿಯನ್ನು ಕ್ಲಬ್ ಗೆಲ್ಲುವಲ್ಲಿ ವಿಫಲವಾಗಿದೆ. ಸದ್ಯ ರೊನಾಲ್ಡೊ ಭರ್ಜರಿ ಫಾರ್ಮ್‌ನಲ್ಲಿದ್ದು, ಇವರು ಪೋರ್ಚುಗಲ್‌ಗಾಗಿ UEFA ನೇಷನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರು ಮುಂದಿನ ವರ್ಷ ಪೋರ್ಚುಗಲ್‌ ಪರ ವಿಶ್ವಕಪ್ ಆಡುವ ಎಲ್ಲ ಸಾಧ್ಯತೆಗಳು ಇವೆ.

ಅಲ್‌ ನಾಸರ್ ಕ್ಲಬ್‌ ಪರ ರೊನಾಲ್ಡೊ ಆಡುತ್ತಿರುವುದರಿಂದ ಇಡೀ ವಿಶ್ವದ ಗಮನ ಕ್ಲಬ್‌ನತ್ತ ಸೆಳೆಯಿತು. ಅಲ್ಲದೆ ಯುವ ಆಟಗಾರರನ್ನು ಉತ್ಸೇಜಿಸಲು ನೆರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+