Virat Kohli: ಸೆಲ್ಫಿಗಾಗಿ ವಿರಾಟ್ ಕೊಹ್ಲಿ ಕೈ ಹಿಡಿದು ನಿಲ್ಲಿಸಿದ ಆಂಟಿ! ವಿಡಿಯೋ ವೈರಲ್
ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಕಂಡರೆ ಯಾರಿಗೆ ತಾನೆ ಖುಷಿ ಆಗೋದಿಲ್ಲ. ಆಕಶ್ಮಿಕವಾಗಿ ಇಂತಹ ಘಟನೆ ನಡೆದರೆ ಅಭಿಮಾನಿಗಳಿಗೆ ಮೊದಲು ಅನಿಸೋದು ಅವರೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅಂತ. ಸದ್ಯ ಇಂತಹದೊಂದು ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಆಕಸ್ಮಿಕವಾಗಿ ವಿರಾಟ್ ಕೊಹ್ಲಿ ಅವರನ್ನು ಕಂಡ ಆಂಟಿಯೊಬ್ಬರು ಅವರ ಕೈ ಹಿಡಿದು ನಿಲ್ಲಿಸಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ.
ವಿರಾಟ್ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ಕ್ಲಿಪ್ ವೀಕ್ಷಿಸಿದ ನೆಟ್ಟಿಗರು ಒಂದೆಡೆ ವಿರಾಟ್ ಕೊಹ್ಲಿಯನ್ನು ಹೊಗಳುತ್ತಿರುವುದು ಕಂಡು ಬರುತ್ತಿದೆ. ಮತ್ತೊಂದೆಡೆ, ಜನರು ವಿರಾಟ್ ಜೊತೆ ಈ ರೀತಿ ವರ್ತಿಸಬೇಡಿ ಎಂದು ಆಂಟಿಗೆ ಸಲಹೆ ಕೂಡ ನೀಡುತ್ತಿದ್ದಾರೆ.

ವಿರಾಟ್ ಜೊತೆ ಸೆಲ್ಫಿ...
ಈ ವಿಡಿಯೋದಲ್ಲಿ ಮಹಿಳೆ ವಿರಾಟ್ ನನ್ನು ನೋಡಿದ ತಕ್ಷಣ ಆತನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ವಿರಾಟ್ ಆಂಟಿ ಮಾತು ಕೇಳಿ ಫೋಟೋಗಾಗಿ ನಿಲ್ಲಿತ್ತಾರೆ. ಆದರೆ ಮಹಿಳೆ ಫೋನ್ ತೆರೆಯಲು ಸಮಯ ತೆಗೆದುಕೊಳ್ಳಲಾರಂಭಿಸಿದಾಗ, ವಿರಾಟ್ ಸೆಲ್ಫಿ ತೆಗೆದುಕೊಳ್ಳದೆಯೇ ಹೋಗಬಹುದೆಂದು ಆಂಟಿ ಹೆದರುತ್ತಾಳೆ. ಹೀಗಾಗಿ ಮಹಿಳೆ ಕೊಹ್ಲಿ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾರೆ.
Virat Kohli is always there for fans 🫡
— Johns. (@CricCrazyJohns) November 8, 2024
- Video of the Day.....!!!! pic.twitter.com/1rynnZrmod
ಈ ಘಟನೆಯಿಂದ ವಿರಾಟ್ ಸೆಲ್ಫಿಗಾಗಿ ನಿಲ್ಲಲು ಬೇರೆ ದಾರಿ ಇರಲಿಲ್ಲ. ನಂತರ ಮಹಿಳೆಯ ಫೋನ್ ಕ್ಯಾಮೆರಾ ತೆರೆಯಲು ವಿಫಲವಾದಾಗ ಅಲ್ಲಿ ನಿಂತಿರುವ ಮತ್ತೊಬ್ಬ ಆಂಟಿ ಅವರ ಫೋಟೋವನ್ನು ಕ್ಲಿಕ್ ಮಾಡುತ್ತೇನೆ ಆಮೇಲೆ ನಿಮಗೆ ಆ ಫೋಟೋ ಕಳುಹಿಸುತ್ತೇನೆ ಎಂದು ಫೋಟೋ ಕ್ಲಿಕ್ ಮಾಡುತ್ತಾರೆ. ಬಳಿಕ ವಿರಾಟ್ ಅಲ್ಲಿಂದ ಹೊರಡುತ್ತಾರೆ. ಈ ಕ್ಲಿಪ್ ಸುಮಾರು 28 ಸೆಕೆಂಡು ಇದೆ. ಈ ವೀಡಿಯೊಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
ಕೊಹ್ಲಿ ಎಲ್ಲರ ಮೆಚ್ಚಿನ ಕ್ರಿಕೆಟಿಗ...
ಈ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ವಿರಾಟ್ ಕೊಹ್ಲಿಯ ಸರಳತೆಯನ್ನು ಹೊಗಳುತ್ತಿರುವುದು ಕಂಡುಬರುತ್ತದೆ. ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಪ್ರೀತಿ ತೋರಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ.
'ದಯವಿಟ್ಟು ವಿರಾಟ್ ಅವರ ಖಾಸಗಿತನವನ್ನು ಗೌರವಿಸಿ ಆಂಟಿ. ಈ ರೀತಿ ಕೈ ಹಿಡಿಯುವುದು ಒಳ್ಳೆಯದಲ್ಲ' ಎಂದು ಮತ್ತೊಬ್ಬ ನೆಟ್ಟಿಗರು ಬರೆದಿದ್ದಾರೆ. ಮೂರನೆಯವರು 'ವಿರಾಟ್ ಭಾಯ್ ತುಂಬಾ ಮುದ್ದಾದ ಭಾವವನ್ನು ತೋರಿಸಿದ್ದಾರೆ' ಎಂದಿದ್ದಾರೆ. ನಾಲ್ಕನೇ ನೆಟ್ಟಿಗರು 'ವಿರಾಟ್ ನಿಜವಾಗಿಯೂ ಸರಳಜೀವಿ' ಎಂದು ಬರೆದಿದ್ದಾರೆ.
ದಿನದ ವಿಡಿಯೋ...
@CricCrazyJohns ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಪೋಸ್ಟ್ ಮಾಡಿ ಹೀಗೆ ಬರೆಯಲಾಗಿದೆ - ''ವಿರಾಟ್ ಕೊಹ್ಲಿ ಯಾವಾಗಲೂ ಅಭಿಮಾನಿಗಳಿಗಾಗಿ ಹಾಜರಾಗುತ್ತಾರೆ. ಡೇ ಮೇಕಿಂಗ್ ವಿಡಿಯೋ...!'' ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋ ಇದುವರೆಗೆ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 18 ಸಾವಿರ ಬಳಕೆದಾರರು ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ನೂರಾರು ಜನರು ಈ ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications