ಕ್ರಿಕೆಟ್ ಆಟಗಾರರಿಗೆ 500 ರೂಪಾಯಿ ಸಂಬಳ ಕೊಡ್ತೀವಿ ಈ ಕೆಲಸ ಮಾಡಿ ಅಂತಿದ್ದಾರೆ ಫ್ಯಾನ್ಸ್! Asia Cup
ಕ್ರಿಕೆಟ್ ಅನ್ನೋ ವಿಶ್ವ ಪ್ರಸಿದ್ಧ ಆಟಕ್ಕೆ ಬರೋಬ್ಬರಿ 400 ವರ್ಷಗಳಷ್ಟು ಬೃಹತ್ ಇತಿಹಾಸವೂ ಇದೆ. ಕ್ರಿಕೆಟ್ ಆಟಕ್ಕೆ ಪ್ರಪಂಚದ ಮೂಲೆ ಮೂಲೆಯಲ್ಲೂ ಈಗ ಮನ್ನಣೆ ಸಿಕ್ಕಿದ್ದು, ದೊಡ್ಡ ದೊಡ್ಡ ದೇಶಗಳು ಕೂಡ ಕ್ರಿಕೆಟ್ ಆಟವನ್ನು ಕಲಿತು ಹೆಸರು ಮಾಡುತ್ತಿವೆ. ಒಲಿಂಪಿಕ್ಸ್ ಎಂಬ ಆಟಗಳ ಹಬ್ಬದಲ್ಲೂ ಈ ನಮ್ಮ ಕ್ರಿಕೆಟ್ ಆಟವನ್ನು ನೋಡಬಹುದಾಗಿದ್ದು, ಭಾರತ ತಂಡ ಚಿನ್ನದ ಪದಕ ಗೆಲ್ಲುವುದು ಗ್ಯಾರಂಟಿ ಅನ್ನೋ ಮಾತು ಹೇಳುತ್ತಿದ್ದಾರೆ 100 ಕೋಟಿ ಅಭಿಮಾನಿಗಳು. ಆದರೆ ಇಂತಹ ಮಹಾನ್ ಆಟದಲ್ಲೂ ಮೊಸರಲ್ಲಿ ಕಲ್ಲು ಇದ್ದಂತೆ ಕೆಲವು ಪಾಪಿ ದೇಶಗಳು ಸೇರಿಕೊಂಡು ಎಲ್ಲವನ್ನೂ ಹಾಳು ಮಾಡುತ್ತಿವೆ!
ಕ್ರಿಕೆಟ್ ಆಟಕ್ಕೆ ಒಂದು ಗತ್ತು ಇದೆ, ಕ್ರಿಕೆಟ್ ಆಟ ಇಡೀ ಜಗತ್ತಿನ ಶ್ರೀಮಂತ ಕ್ರೀಡೆಗಳಲ್ಲಿ ಒಂದು. ಆದರೆ ಕೆಲ ದೇಶಗಳು ಮಾತ್ರ ಕ್ರಿಕೆಟ್ ಆಟಕ್ಕೆ ಇರುವ ಮಾನ & ಮರ್ಯಾದಿ ತೆಗೆದು ಹಾಕುತ್ತಿವೆ ಅನ್ನೋ ಗಂಭೀರ ಆರೋಪವೂ ಇದೆ. ಫಿಕ್ಸಿಂಗ್ & ಬೆಟ್ಟಿಂಗ್ ಕಾರಣಕ್ಕೆ ಹಲವು ದೇಶಗಳ ಆಟಗಾರರು ಬಲಿಯು ಆಗಿದ್ದಾರೆ. ಅದರಲ್ಲೂ ಕೆಲ ಕೆಲಸಕ್ಕೆ ಬಾರದ ದೇಶಗಳ ಆಟಗಾರರು ನಮ್ಮ ಹೆಮ್ಮೆಯ ಭಾರತ ಕ್ರಿಕೆಟ್ ತಂಡದ ಬಗ್ಗೆ ಮಾತನಾಡಿ ಸರಿಯಾಗಿ ಪಾಠವನ್ನು ಕಲಿಯುತ್ತಿದ್ದಾರೆ. ಇಂತಹ ಸಮಯದಲ್ಲೇ ಪಾಪಿ ದೇಶದ ಕ್ರಿಕೆಟ್ ಆಟಗಾರರಿಗೆ 500 ರೂಪಾಯಿ ಸಂಬಳ ಕೊಡ್ತೀವಿ ಈ ಕೆಲಸ ಮಾಡಿ ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್!

500 ರೂಪಾಯಿ ಸಂಬಳ ಗ್ಯಾರಂಟಿ!
ಮೊನ್ನೆ ಮೊನ್ನೆ ಭಾರತ ತಂಡದ ಎದುರು ಪಾಕಿಸ್ತಾನ ಮತ್ತೊಮ್ಮೆ ಹೀನಾಯವಾಗಿ ಸೋತು ಹೋಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಹಂಗೋ, ಹಿಂಗೋ ಒದ್ದಾಡಿ ಕೊನೆಗೆ 20 ಓವರ್ ಆಟವಾಡಿ ಕೇವಲ 171 ರನ್ ಗಳಿಸಿತ್ತು. ಕೊನೆಗೆ ಈ ಸ್ಕೋರ್ ಬೆನ್ನುಹತ್ತಿದ್ದ ನಮ್ಮ ಭಾರತ ತಂಡ 18.5 ಓವರ್‌ಗಳಲ್ಲಿ ಚಚ್ಚಿ ಬಿಸಾಡಿತ್ತು. ಭಾರತ ತಂಡ 4 ವಿಕೆಟ್ ಕಳೆದುಕೊಂಡು 18.5 ಓವರ್‌ಗಳಲ್ಲಿ 174 ರನ್ ಬಾರಿಸಿತ್ತು. ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು ಭಾರತ ಕ್ರಿಕೆಟ್ ತಂಡ, ಆದರೆ ಇದೇ ಸಮಯದಲ್ಲಿ ಪಾಪಿ ಪಾಕಿಸ್ತಾನ ದೊಡ್ಡ ಸಂಕಷ್ಟಕ್ಕೆ ಸಿಲುಕಿ ಒದ್ದಾಡಿತ್ತು. ಇದೀಗ ಪಾಕಿಸ್ತಾನ ಅಭಿಮಾನಿಗಳು ಕೂಡ ರೊಚ್ಚಿಗೆದ್ದು ಕೂತಿದ್ದಾರೆ!
ಪಾಕಿಸ್ತಾನ ಆಟಗಾರರಿಗೆ ಭೀಕರ ಆಘಾತ...
ಹೌದು, ಏಷ್ಯಾ ಕಪ್ ಟೂರ್ನಿಯಲ್ಲಿ ಸತತವಾಗಿ ಭಾರತ ತಂಡದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡದ ವಿರುದ್ಧ ರೊಚ್ಚಿಗೆದ್ದಿರುವ ಪಾಕಿಸ್ತಾನ ಕ್ರಿಕೆಟ್ ಫ್ಯಾನ್ಸ್, ಪಾಕಿಸ್ತಾನಿ ಕ್ರಿಕೆಟ್ ಆಟಗಾರರಿಗೆ ದಿಢೀರ್ ಹೊಸ ಆಫರ್ ಕೊಟ್ಟಿದ್ದಾರೆ. ನಿಮಗೆಲ್ಲಾ ಕ್ರಿಕೆಟ್ ಆಡಲು ಬರಲ್ಲ, ಹೀಗಾಗಿ ಭಾರತ ಕ್ರಿಕೆಟ್ ತಂಡಕ್ಕೆ ವಾಟರ್ ಬಾಯ್ಸ್ ಆಗಿ ಹೋಗಿ ಬೇಗನೇ ಆಟ ಕಲಿಯಿರಿ. ಬೇಕಾದರೆ ನಾವೇ 500 ರೂಪಾಯಿ ಸಂಬಳ ಕೊಡುತ್ತೇವೆ... ಅಂತಾ ಸೋಷಿಯಲ್ ಮೀಡಿಯಾ ಮೂಲಕ ಪಾಪಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರಿಗೆ ಹೊಸ ಆಫರ್ ಕೊಟ್ಟಿದ್ದಾರೆ!












Click it and Unblock the Notifications