Champions Trophy 2025 Final: ಭಾರತ vs ನ್ಯೂಜಿಲೆಂಡ್ ಫೈನಲ್ ಪಂದ್ಯದ ಸಮಯ, ಸ್ಥಳ, ತಂಡಗಳ ವಿವರ
Champions Trophy 2025 Final: ಚಾಂಪಿಯನಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಿ ಕೊನೆಯ ಘಟ್ಟ ತಲುಪಿದೆ. ಇಂದು (ಮಾರ್ಚ್ 09) ಭಾರತ ಮತ್ತು ನ್ಯೂಜಿಲೆಂಡ್ ಟ್ರೋಫಿಗಾಗಿ ಕಾದಾಡಲು ಸಜ್ಜಾಗಿವೆ. ಹಾಗಾದ್ರೆ ಪಂದ್ಯದ ಸಮಯ, ಸ್ಥಳ ಹಾಗೂ ತಂಡಗಳ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಂದು ಐಸಿಸಿ ಚಾಂಪಿಯನಸ್ ಟ್ರೋಫಿ 2025 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗೆಲ್ಲಲು ಭಾರತ ಮತ್ತು ನ್ಯೂಜಿಲೆಂಡ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಇಂದಿನ ಪಂದ್ಯದಲ್ಲಿ ಹಗೆದ್ದವರೇ ಟ್ರೋಫಿ ಎತ್ತಲಿದ್ದಾರೆ. ಅದಕ್ಕಾಗಿ ಎರಡು ತಂಡಗಳು ಸಕಲ ಸಿದ್ದತೆಗಳನ್ನು ಮಾಡಿಕೊಂಡಿವೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಪಂದ್ಯ ನಡೆಯಲ್ಲಿ ಈ ಪಂದ್ಯ ವೀಕ್ಷಿಸಕು ಬರೀ ಭಾತರ, ನ್ಯೂಜಿಲೆಂಡ್ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಕಾಯುತ್ತಿದೆ.

ಐಸಿಸಿ ಟೂರ್ನಿಗಳಲ್ಲಿ ಮಾರ್ಚ್ 9ರಂದು ಆಡಿದ ಪಂದ್ಯ ಭಾರತದ ಗೆದ್ದ ಇತಿಹಾಸವಂದಿದೆ. 1996ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಮಾರ್ಚ್ 9ರಂದು ಬೆಂಗಳೂರಿನಲ್ಲಿ ಆಡಿದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತ್ತು.
ಇನ್ನು ಇದೀಗ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 25 ವರ್ಷಗಳ ಹಿಂದಿನ ಲೆಕ್ಕವನ್ನು ಇಂದಯ ನಡೆಯಲಿರುವ ಪಂದ್ಯದಲ್ಲಿ ವಾಪಸ್ ಕೊಡಲು ಸಜ್ಜಾಗಿದೆ. 2000ದ 2ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಸೋಲನುಭವಿಸಿತ್ತು.
ಆಗ ನಾಯಕರಾಗಿದ್ದ ಸೌರವ್ ಗಂಗೂಲಿ (117) ಶತಕದ ಮೂಲಕ ಭಾರತ 6 ವಿಕೆಟ್ಗೆ 264 ರನ್‌ಗಳನ್ನು ಮೊತ್ತವನ್ನು ಕಲೆಹಾಕಿದ್ದಾರೆ, ಕ್ರಿಸ್ ಕೇರ್ನ್ಸ್ (102) ಶತಕದ ನೆರವಿನಿಂದ ನ್ಯೂಜಿಲೆಂಡ್ 49.4 ಓವರ್ಗಳಲ್ಲಿ 6 ವಿಕೆಟ್ಗೆ 265 ರನ್ ಗೆಲುವು ಸಾಧಿಸಿತ್ತು.
ಬಳಿಕ 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲೂ ಭಾರತ ತಂಡ ನ್ಯೂಜಿಲೆಂಡ್ ಎದುರು ಸೋಲನಭವಿಸಿತ್ತು. ಇನ್ನು ನ್ಯೂಜಿಲೆಂಡ್ ಗೆದ್ದಿರುವ 2 ಐಸಿಸಿ ಟೂರ್ನಿಗಳಲ್ಲೂ ಭಾರತ ವಿರುದ್ಧವೇ ಫೈನಲ್ನಲ್ಲಿ ಜಯ ಸಾಧಿಸಿದೆ.
ಆದ್ದರಿಂದ ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ ರೋಹಿತ್ ಬಳಗ ಗೆದ್ದು ಅವೆರಡು ಸೋಲಿನ ಸೇಡಡು ತೀರಿಸಿಕೊಳ್ಳಲು ಸಜ್ಜಾಗಿದೆ. ಅಲ್ಲದೆ, 2023ರ ಏಕದಿನ ವಿಶ್ವಕಪ್ ಸೆಮೀಸ್ ಮತ್ತು ಈ ಟೂರ್ನಿಯ ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ಅನ್ನು ಭಾರತ ಸೋಲಿಸಿದೆ. ಇದೇ ವಿಶ್ವಾಸದಲ್ಲಿ ಇಂದಿನ ಫೈನಲ್ ಪಂದ್ಯದಲ್ಲಿ ಗದ್ದು ಕಪ್ ಎತ್ತಲು ಸಜ್ಜಾಗಿದೆ. ಇನ್ನೂ ಈ ರೋಚಕ ಪಂದ್ಯ ವೀಕ್ಷಣೆ ಮಾಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.
ಭಾರತದ ತಂಡ: ರೋಹಿತ್ ಶರ್ಮ(ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣ.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕೆಲ್ ಬ್ರಾಸ್‌ವೇಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲೂಕಿ ಫಗ್ರ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ವಿಲ್ ಒ ರೂರ್ಕ್, ಗ್ಲೆನ್ ಫಿಲಿಫ್ಸ್, ರಚಿನ್ ರವೀಂದ್ರ, ನಥಾನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಜಾಕೋಬ್ ಡಫಿ.












Click it and Unblock the Notifications