Women's Asia Cup 2024: ಏಷ್ಯಾಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಚಾಮರಿ ಅಟಪಟ್ಟು

ಶ್ರೀಲಂಕಾದಲ್ಲಿ ಸದ್ಯ ಮಹಿಳಾ ಏಷ್ಯಾ ಕಪ್‌ ನಡೆಯುತ್ತಿದೆ. ತಂಡಗಳು ಸ್ಥಿರ ಪ್ರದರ್ಶನ ನೀಡುತ್ತಿದ್ದು, ಅಭಿಮಾನಿಗಳ ಮನ ಗೆಲ್ಲುತ್ತಿವೆ. ಭಾರತ ತಂಡ ಸಹ ಗುಂಪು ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಹಂತ ಪ್ರವೇಶಿಸುವುದು ಪಕ್ಕಾ ಆಗಿದೆ. ತವರಿನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಸಹ ಸ್ಥಿರ ಪ್ರದರ್ಶನ ನಿಡುತ್ತಿದೆ.

ಮಲೇಷ್ಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕಿ ನಾಯಕಿ ಚಾಮರಿ ಅಟಪಟ್ಟು ಏಷ್ಯಾಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದುವರೆಗೂ ಯಾವ ಮಹಿಳಾ ಆಟಗಾರ್ತಿ ಮಾಡದ ಸಾಧನೆಯನ್ನು ಮಾಡಿದ್ದಾರೆ. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ನಲ್ಲಿ ಯಾವೊಬ್ಬ ಮಹಿಳಾ ಆಟಗರ್ತಿ ಮೂರಂಕಿಯನ್ನು ಮುಟ್ಟಿರಲಿಲ್ಲ. ಈ ಸಾಧನೆಯನ್ನು ಶ್ರೀಲಂಕಾ ನಾಯಕಿ ಸಾಧಿಸಿದ್ದಾರೆ.

Chamari Atapattu Creates History in Women s Asia Cup 2024 with Record-Breaking Performance

2024 ರ ಏಷ್ಯಾ ಕಪ್‌ನಲ್ಲಿ ಮಲೇಷ್ಯಾ ವಿರುದ್ಧದ ತನ್ನ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಮಹಿಳಾ ತಂಡದ ನಾಯಕಿ ಚಾಮರಿ ಅಟಪಟ್ಟು 7 ಸಿಕ್ಸರ್‌ಗಳನ್ನು ಬಾರಿಸಿದರು. ಇದಕ್ಕೂ ಮುನ್ನ ಯಾವುದೇ ಮಹಿಳಾ ಆಟಗಾರ್ತಿ ಏಷ್ಯಾಕಪ್ ಪಂದ್ಯವೊಂದರಲ್ಲಿ ಇಷ್ಟು ಸಿಕ್ಸರ್ ಬಾರಿಸಿರಲಿಲ್ಲ. ಈ ಟೂರ್ನಿಯಲ್ಲಿ ಇನ್ನಿಂಗ್ಸ್‌ನಲ್ಲಿ ಗರಿಷ್ಠ 3 ಸಿಕ್ಸರ್‌ಗಳನ್ನು ಮಾತ್ರ ಹೊಡೆದಿದ್ದಾರೆ. 2022ರ ಏಷ್ಯಾಕಪ್‌ನಲ್ಲಿ ಭಾರತದ ಶೆಫಾಲಿ ವರ್ಮಾ ಮಲೇಷ್ಯಾ ವಿರುದ್ಧ 3 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಆದರೆ 2022 ರ ಏಷ್ಯಾಕಪ್‌ನಲ್ಲಿ ಭಾರತದ ರಿಚಾ ಘೋಷ್ ಪಾಕಿಸ್ತಾನದ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಪಾಕಿಸ್ತಾನದ ಅಲಿಯಾ ರಿಯಾಜ್ 2022 ರ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಭಾರತದ ಸ್ಮೃತಿ ಮಂಧಾನ 2022 ರಲ್ಲಿ ಶ್ರೀಲಂಕಾ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರು. ಆದರೆ ಈಗ ಎಲ್ಲರನ್ನೂ ಹಿಂದಿಕ್ಕಿ ಚಾಮರಿ ಅಟಪಟ್ಟು 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಹಿಂದಿನ ಆಟಗಾರ್ತಿಯರು ಬಾರಿಸಿದ ಸಿಕ್ಸರ್‌ಗಳ ಸಂಖ್ಯೆಗಿಂತ ಚಾಮರಿ ಎರಡು ಪಟ್ಟು ಹೆಚ್ಚು ಬಾರಿಸಿದ್ದಾರೆ.

Chamari Atapattu Creates History in Women s Asia Cup 2024 with Record-Breaking Performance

ಚಾಮಿರಾ ಶತಕ

ಟಿ20 ಮಾದರಿಯಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಚಾಮರಿ ಅಟಪಟ್ಟು ಪಾತ್ರರಾಗಿದ್ದಾರೆ. ಈ ಮೊದಲು ಟಿ20 ಏಷ್ಯಾಕಪ್‌ನಲ್ಲಿ ಯಾವುದೇ ಮಹಿಳಾ ಆಟಗಾರ್ತಿ ಶತಕ ಸಿಡಿಸಿರಲಿಲ್ಲ. ಅಟಪಟ್ಟು 69 ಎಸೆತಗಳಲ್ಲಿ 119 ರನ್ ಗಳಿಸಿದರು. ಇದರಲ್ಲಿ ಅವರು 14 ಬೌಂಡರಿಗಳು ಮತ್ತು 7 ಸಿಕ್ಸರ್‌ ಸೇರಿವೆ. ಅವರ ಸ್ಟ್ರೈಕ್ ರೇಟ್ 172.46 ಆಗಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಅನುಷ್ಕಾ ಸಂಜೀವನಿ 31 ರನ್‌ಗಳಿಸಿ ನಾಯಕಿಗೆ ಕೊಂಚ ಸಾಥ್ ನೀಡಿದರು. ಚಾಮರಿ ಅವರ ಇನ್ನಿಂಗ್ಸ್‌ನಿಂದಾಗಿ ಶ್ರೀಲಂಕಾ ಮಲೇಷ್ಯಾ ವಿರುದ್ಧ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

ಪಾಯಿಂಟ್ಸ್ ಟೇಬಲ್

ಭಾರತ ತಂಡವು ಸತತ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಪಡೆಯುವ ಮೂಲಕ ಮುನ್ನಡೆ ಸಾಧಿಸಿದೆ. ಆದರೆ ಪಾಕಿಸ್ತಾನ ಮತ್ತು ನೇಪಾಳ ತಲಾ ಒಂದು ಪಂದ್ಯವನ್ನು ಗೆದ್ದಿವೆ. ಪಾಕಿಸ್ತಾನ ಎರಡನೇ ಸ್ಥಾನದಲ್ಲಿದ್ದು ನೇಪಾಳ ಮೂರನೇ ಸ್ಥಾನದಲ್ಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ ತಂಡ ಮಲೇಷ್ಯಾವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿ ಥಾಯ್ಲೆಂಡ್‌ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+