CCL 2025: ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ವೇಳಾಪಟ್ಟಿ; ಬೆಂಗಳೂರಿನಲ್ಲಿ ಮೊದಲ ಪಂದ್ಯ

ಕ್ರಿಕೆಟ್ ಆಡುವವರು ಸ್ಟಾರ್ ಗಳಾಗುವುದು ಕಾಮನ್, ಸ್ಟಾರ್ ಗಳು ಕ್ರಿಕೆಟ್ ಆಡುವುದು ಕಾಮನ್. ಸಿನಿಮಾ ಸ್ಟಾರ್ ಗಳು ಮೈದಾನಕ್ಕಿಳಿದು ಪರಿಣಿತರಂತೆ ಕ್ರಿಕೆಟ್ ಆಡುವುದು ವಿಶೇಷ. ಅದನ್ನು ಸಾಧ್ಯವಾಗಿಸಿರುವುದು ಸೆಲೆಬ್ರಿಟಿ ಕ್ರಿಕೆಟ್ ಲೀಗ್. ಭಾರತದ ಎಂಟು ಪ್ರಮುಖ ಚಿತ್ರರಂಗಳ ನಟರನ್ನು ಒಟ್ಟುಗೂಡಿಸುವ ಈ ಪಂದ್ಯಾವಳಿ ಭಾರಿ ಜನಪ್ರಿಯವಾಗಿದ್ದು ಇದೀಗ 2025ರ ಆವೃತ್ತಿಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಈ ಮೊದಲೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ವೇಳಾಪಟ್ಟಿಯನ್ನು ಘೋಷಣೆ ಮಾಡಿತ್ತು, ಆದರೆ ಈಗ ಹಳೆಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಮೊದಲಿನ ವೇಳಾಪಟ್ಟಿಯಂತೆ ಪಂದ್ಯಾವಳಿ ಜನವರಿ 31 ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಿ ಫೆಬ್ರವರಿ 23 ರವರೆಗೆ ನಡೆಯಬೇಕಿತ್ತು.

Celebrity cricket league ccl 2025 updated schedule

ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ

ಹಳೆಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು ಹೊಸ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಹೊಸ ವೇಳಾ ಪಟ್ಟಿಯ ಪ್ರಕಾರ ಪಂದ್ಯಾವಳಿಯು ಫೆಬ್ರವರಿ 8 ರಂದು ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್, ಪಂಜಾಬ್ ಡಿ ಶೇರ್, ಬೆಂಗಾಲ್ ಟೈಗರ್ಸ್ ಮತ್ತು ಭೋಜ್‌ಪುರಿ ದಬಾಂಗ್ಸ್ ಎಂಟು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ಮತ್ತು ಬೆಂಗಾಲ್ ಟೈಗರ್ಸ್ ಮುಖಾಮುಖಿಯಾಗಲಿದ್ದು, ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಸೆಣೆಸಲಿವೆ.

ನಾಲ್ಕು ತಂಡಗಳಾದ ಭೋಜ್‌ಪುರಿ ದಬಾಂಗ್ಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್ ಮತ್ತು ಪಂಜಾಬ್ ಡಿ ಶೇರ್ ಫೆಬ್ರವರಿ 9 ರಂದು ದೆಹಲಿಯಲ್ಲಿ ಆಡಲಿವೆ. ಆನಂತರದ ಪಂದ್ಯಗಳು ಕ್ರಮವಾಗಿ ಹೈದರಾಬಾದ್, ಕಟಕ್, ಸೂರತ್‌ನಲ್ಲಿ ನಡೆಯಲಿವೆ. ಮಾರ್ಚ್ 1ರಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಮತ್ತು ಮಾರ್ಚ್ 2ರಂದು ಫೈನಲ್ ಪಂದ್ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025 ಹೊಸ ವೇಳಾಪಟ್ಟಿ

ಫೆಬ್ರವರಿ 8, ಸ್ಥಳ: ಬೆಂಗಳೂರು
ಚೆನ್ನೈ ರಿನ್ಹೋಸ್ vs ಬೆಂಗಾಲ್ ಟೈಗರ್ಸ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ
ಕರ್ನಾಟಕ ಬುಲ್ಡೋಜರ್ಸ್ vs ತೆಲುಗು ವಾರಿಯರ್ಸ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

ಫೆಬ್ರವರಿ 9, ಸ್ಥಳ: ದೆಹಲಿ
ಬೆಂಗಾಲ್ ಟೈಗರ್ಸ್ vs ಪಂಜಾಬ್ ದೆ ಶೇರ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ
ಮುಂಬೈ ಹೀರೋಸ್ vs ಭೋಜ್‌ಪುರಿ ದಬಾಂಗ್ಸ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

ಫೆಬ್ರವರಿ 14, ಸ್ಥಳ: ಹೈದರಾಬಾದ್
ಚೆನ್ನೈ ರಿನ್ಹೋಸ್ vs ಕರ್ನಾಟಕ ಬುಲ್ಡೋಜರ್ಸ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ
ಭೋಜ್‌ಪುರಿ ದಬಾಂಗ್ಸ್ vs ತೆಲುಗು ವಾರಿಯರ್ಸ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

ಫೆಬ್ರವರಿ 15, ಸ್ಥಳ: ಹೈದರಾಬಾದ್
ಮುಂಬೈ ಹೀರೋಸ್ vs ಕರ್ನಾಟಕ ಬುಲ್ಡೋಜರ್ಸ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ ಚೆನ್ನೈ ರಿನ್ಹೋಸ್ vs ತೆಲುಗು ವಾರಿಯರ್ಸ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

ಫೆಬ್ರವರಿ 16, ಸ್ಥಳ: ಕಟಕ್
ಪಂಜಾಬ್ ದೆ ಶೇರ್ vs ಭೋಜ್‌ಪುರಿ ದಬಾಂಗ್ಸ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ
ಮುಂಬೈ ಹೀರೋಸ್ vs ಬೆಂಗಾಲಿ ಟೈಗರ್ಸ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

ಫೆಬ್ರವರಿ 22, ಸ್ಥಳ: ಸೂರತ್
ಭೋಜ್‌ಪುರಿ ದಬಾಂಗ್ಸ್ vs ಚೆನ್ನೈ ರಿನ್ಹೋಸ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ
ಪಂಜಾಬ್ ದಿ ಶೇರ್ vs ಕರ್ನಾಟಕ ಬುಲ್ಡೋಜರ್ಸ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

ಫೆಬ್ರವರಿ 23, ಸ್ಥಳ: ಸೂರತ್
ಬೆಂಗಾಲ್ ಟೈಗರ್ಸ್ vs ತೆಲುಗು ವಾರಿಯರ್ಸ್, ಪಂದ್ಯ ಆರಂಭವಾಗುವ ಸಮಯ ಮಧ್ಯಾಹ್ನ 2 ರಿಂದ
ಮುಂಬೈ ಹೀರೋಸ್ vs ಪಂಜಾಬ್ ದಿ ಶೇರ್, ಪಂದ್ಯ ಆರಂಭವಾಗುವ ಸಮಯ ಸಂಜೆ 6.30 ರಿಂದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+