Jasprit Bumrah : ಏಷ್ಯಾ ಕಪ್ ಮತ್ತು ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಬುಮ್ರಾ ಹೇಳಿದ್ದೇನು?

ಗಾಯದ ಕಾರಣ 11 ತಿಂಗಳ ಆಟದಿಂದ ಹೊರಗುಳಿದ ನಂತರ, ಜಸ್ಪ್ರೀತ್ ಬುಮ್ರಾ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದಾರೆ. ಐರ್ಲೆಂಡ್ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಸರಣಿಗೆ ಮುನ್ನ ಬುಮ್ರಾ ನೆಟ್ಸ್‌ನಲ್ಲಿ ಸಂಪೂರ್ಣ ಬೌಲಿಂಗ್ ಮಾಡಿದ್ದಾರೆ. ಅವರ ಫಿಟ್‌ನೆಸ್‌ಗೆ ಅನುಗುಣವಾಗಿ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಗಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಐರ್ಲೆಂಡ್ ವಿರುದ್ಧದ ಮೊದಲನೇ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಚೇತರಿಕೆ, ಅಭ್ಯಾಸದ ಬಗ್ಗೆ ಮಾತನಾಡಿದರು.

 Bumrah Returns: Ind vs Ire T20 Series Crucial for Comeback and Future Fitness

ಗಾಯದಿಂದ ಚೇತರಿಸಿಕೊಂಡು ಪುನರ್ವಸತಿಗೆ ಒಳಗಾದ ಸಂದರ್ಭದಲ್ಲಿ ಹೆಚ್ಚಿನ ಒತ್ತಡ ಇತ್ತು ಎಂದು ಹೇಳಿರುವ ಅವರು, ಭಾರತ ತಂಡಕ್ಕೆ ಮರಳಲು ಸಂತೋಷ ವ್ಯಕ್ತಪಡಿಸಿದ್ದಾರೆ. "ಎಲ್ಲ ಚೆನ್ನಾಗಿದೆ. ಮರಳಿ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಎನ್‌ಸಿಎನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಇದು ದೀರ್ಘ ಪ್ರಯಾಣವಾಗಿದೆ ಆದರೆ ಎಲ್ಲವೂ ಚೆನ್ನಾಗಿದೆ, ನನ್ನ ದೇಹವು ಉತ್ತಮವಾಗಿದೆ ಮತ್ತು ನಾನು ಕ್ರಿಕೆಟ್ ಆಡಲು ಎದುರು ನೋಡುತ್ತಿದ್ದೇನೆ. ಮರಳಿ ಬಂದಿದ್ದಕ್ಕೆ ಸಂತಸವಾಗುತ್ತಿದೆ" ಎಂದು ಬುಮ್ರಾ ಸುದ್ದಿಗಾರರಿಗೆ ತಿಳಿಸಿದರು.

ವಿಶ್ವಕಪ್‌ನಲ್ಲಿ ಆಡಲು ಸಿದ್ಧವಾಗಿದ್ದೇನೆ

ಏಷ್ಯಾಕಪ್ ಮತ್ತು ವಿಶ್ವಕಪ್‌ಗೂ ಮುನ್ನ ಐರ್ಲೆಂಡ್ ಸರಣಿಯು ಬುಮ್ರಾ ಅವರಿಗೆ ಪರೀಕ್ಷೆಯಾಗಿದೆ. ಟಿ20ಗಳು ಪ್ರತಿ ಪಂದ್ಯಕ್ಕೆ ಗರಿಷ್ಠ ನಾಲ್ಕು ಓವರ್‌ಗಳನ್ನು ಬೌಲ್ ಮಾಡಲು ಅವಕಾಶ ಇರುತ್ತದೆ. ಆದರೆ ಏಕದಿನ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಬೇಕಾಗುತ್ತದೆ. ಮತ್ತೆ ಗಾಯಗೊಳ್ಳುವ ಭಯ ಇದ್ದರೂ, ಬುಮ್ರಾ ಅದಕ್ಕೆ ಸಿದ್ಧವಾಗಿದ್ದಾರೆ. ದಿನಕ್ಕೆ 10-15 ಓವರ್ ಬೌಲ್ ಮಾಡಲು ತಯಾರಿ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

"ನಾನು ಸಾಮಾನ್ಯವಾಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೆ. ನನ್ನ ಪುನರ್ವಸತಿ ಕೊನೆಗೊಂಡಾಗ, ನಾನು ಮನೆಗೆ ಹೋಗಿದ್ದೆ ಮತ್ತು ಗುಜರಾತ್ ತಂಡದೊಂದಿಗೆ ಅಭ್ಯಾಸ ಮಾಡಿದೆ. ನಾನು ಬಹಳಷ್ಟು ಸ್ಥಳಗಳಲ್ಲಿ ಸಾಕಷ್ಟು ನೆಟ್ ಸೆಷನ್‌ಗಳನ್ನು ಮಾಡಿದ್ದೇನೆ ಮತ್ತು ನಾನು ಸಾಕಷ್ಟು ಅಭ್ಯಾಸ ಪಂದ್ಯಗಳನ್ನು ಸಹ ಆಡಿದ್ದೇನೆ. ನನ್ನ ಪುನರ್ವಸತಿಯಲ್ಲಿ, ನಾನು ಎಂದಿಗೂ ಟಿ 20 ಪಂದ್ಯಕ್ಕೆ ತಯಾರಿ ನಡೆಸಲಿಲ್ಲ. ನಾನು ಯಾವಾಗಲೂ ವಿಶ್ವಕಪ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೆ. ಹಾಗಾಗಿ ನಾನು 10, 12, 15 ಓವರ್‌ಗಳನ್ನೂ ಬೌಲಿಂಗ್ ಮಾಡುತ್ತಿದ್ದೇನೆ." ಎಂದು ಬುಮ್ರಾ ಹೇಳಿದ್ದಾರೆ.

ಬೆನ್ನು ನೋವಿನ ಕಾರಣದಿಂದ ಕಳೆದ ವರ್ಷ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಈ ವರ್ಷದ ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬುಮ್ರಾ ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಕಳೆದುಕೊಂಡರು.

ಜಸ್ಪ್ರೀತ್ ಬುಮ್ರಾ ಶುಕ್ರವಾರ (ಆಗಸ್ಟ್ 18) ಐರ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಮೂಲಕ ಟಿ20 ಮಾದರಿಯಲ್ಲಿ ನಾಯಕತ್ವ ವಹಿಸಿಕೊಂಡ ಮೊದಲ ಬೌಲರ್ ಎನ್ನುವ ಖ್ಯಾತಿಗೆ ಭಾಜನವಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+