IND vs ZIM: ರವಿ ಬಿಷ್ಣೋಯಿ ಪಿರ್ಕಿ ಎದುರಿಸಲು ಜಿಂಬಾಬ್ವೆ ಕಂಗಾಲು

ಕಳೆದವಾರ ಟಿ20 ವಿಶ್ವಕಪ್‌ ತೆರೆ ಕಂಡಿದೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಟೀಮ್ ಇಂಡಿಯಾಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಇದರ ಬೆನ್ನಲ್ಲೆ ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಚಿತ್ತ ಎಲ್ಲರ ಗಮನ ಸೆಳೆದಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ಬೌಲರ್‌ಗಳ ಸ್ಪಿನ್‌ ಬೌಲಿಂಗ್‌ ಎದುರಿಸಲು ಆತಿಥೇಯ ತಂಡಗಳ ಬ್ಯಾಟರ್‌ಗಳು ವಿಫಲರಾದರು.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 115 ರನ್‌ ಸೇರಿಸಿತು. ಟೀಮ ಇಂಡಿಯಾ ಪರ ಸ್ಪಿನ್ ಬೌಲರ್ಸ್‌ಗಳ ಕರಾರುವಕ್ ದಾಳಿಗೆ ಜಿಂಬಾಬ್ವೆ ತಂಡದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯದ ಆಟಗಾರರ ದಂಡು ಜಿಂಬಾಬ್ವೆ ಪ್ರವಾಸ ಬೆಳೆಸಿದ್ದು ವಿಶೇಷ.

Bishnoi and Washington Lead India to Restrict Zimbabwe to 115 9 in First T20I

ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಕ್ಲೈವ್ ಮದಂಡೆ ಟೀಮ್ ಇಂಡಿಯಾ ಬೌಲರ್ಸ್‌ಗಳನ್ನು ಕೊಂಚ ಕಾಡಿದರು. ಉಳಿದಂತೆ ಉಳಿದ ಬ್ಯಾಟರ್‌ಗಳು ಟೀಮ್ ಇಂಡಿಯಾದ ಯುವ ಪಡೆಯ ಸವಾಲನ್ನು ಮೀರಿ ನಿಲ್ಲಲು ಸಾಧ್ಯವೇ ಆಗಲಿಲ್ಲ. ಜಿಂಬಾಬ್ವೆ ಪರ ಕ್ಲೈವ್ ಮದಂಡೆ 25 ಎದುರಿಸಿ 4 ಬೌಂಡರಿ ಸೇರಿದಂತೆ 29 ರನ್‌ ಸಿಡಿಸಿದರು.

ಈಗಾಗಲೇ ಟೀಮ್ ಇಂಡಿಯಾ ಪರ ಆಡಿದ ಅನುಭವ ಹೊಂದಿರುವ ರವಿ ಬಿಷ್ಣೋಯಿ ತಮ್ಮ ಬಿರುಸಿನ ದಾಳಿಯಿಂದ ಎಲ್ಲರ ಗಮನ ಸೆಳೆದರು. ಇವರು ನಾಲ್ಕು ಓವರ್‌ ಬೌಲಿಂಗ್ ಮಾಡಿ 2 ಓವರ್‌ ಮೇಡನ್‌ ಮಾಡಿ 13 ರನ್‌ ನೀಡಿ, 4 ವಿಕೆಟ್‌ ಕಬಳಿಸಿದರು. ಈ ಮೂಲಕ ಟೀಮ್ ಇಂಡಿಯಾದ ಯಶಸ್ವಿ ಬೌಲರ್‌ ಎನಿಸಿಕೊಂಡರು.

ಉಳಿದಂತೆ ವಾಶಿಂಗ್ಟನ್‌ ಸುಂದರ್‌ 2, ಮುಕೇಶ್‌ ಕುಮಾರ್ ಹಾಗೂ ಆವೀಶ್ ಖಾನ್‌ ತಲಾ ಒಂದು ವಿಕೆಟ್‌ ಕಬಳಿಸಿ ತಂಡಕ್ಕೆ ಆಧಾರವಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+