RCB: ಬಿಹಾರದಲ್ಲಿ ಪರೀಕ್ಷೆ ಬರೆದ ವಿರಾಟ್ ಕೊಹ್ಲಿ! ಒಎಂಆರ್ ಶೀಟ್ ನೋಡಿ ಬೆಚ್ಚಿಬಿದ್ದ ಮೌಲ್ಯಮಾಪಕರು
ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ಅಭಿಮಾನಿಗಳು ವಿರಾಟ್ ಕೊಹ್ಲಿ ಮೇಲಿನ ತಮ್ಮ ಅಭಿಮಾನವನ್ನು ಬಗೆ ಬಗೆಯಾಗಿ ಪ್ರದರ್ಶನ ಮಾಡುತ್ತಾರೆ. ವಿರಾಟ್ ಕೊಹ್ಲಿ ಜೊತೆ ಆತ ಏನಾದರೂ ಆರ್ ಸಿಬಿ ಅಭಿಮಾನಿಯಾಗಿದ್ದರಂತೂ ಮುಗಿದೇ ಹೋಯ್ತು! ಚಿತ್ರ ವಿಚಿತ್ರವಾಗಿ ತಮ್ಮ ಅಭಿಮಾನ ತೋರಿಸುವ ಜನರನ್ನು ನೋಡಬಹುದು.
ಇಲ್ಲೊಬ್ಬ ವಿದ್ಯಾರ್ಥಿ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ಮೇಲಿನ ಅಭಿಮಾನವನ್ನು ತೋರಿಸಲು ಬೇರೆಯದೇ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅದು ಕೂಡ ಆತನ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದು, ಹುಚ್ಚಾಟ ಮೆರೆದಿದ್ದಾನೆ. ಒಎಂಆರ್ ಶೀಟ್‌ನಲ್ಲಿ ತನ್ನ ಹೆಸರನ್ನು ವಿರಾಟ್ ಕೊಹ್ಲಿ ಎಂದು ಬರೆದಿರುವ ವಿದ್ಯಾರ್ಥಿ, ಉತ್ತರ ಗುರುತು ಮಾಡುವಾಗ '18 RCB' ಎನ್ನುವಂತೆ ತುಂಬಿದ್ದಾರೆ.

ತಂದೆ-ತಾಯಿ ಹೆಸರಿಗೂ ಕೊಹ್ಲಿ
ತನ್ನ ಹೆಸರನ್ನು ವಿರಾಟ್ ಕೊಹ್ಲಿ ಎಂದು ಬರೆದಿರುವ ವಿದ್ಯಾರ್ಥಿ, ತಂದೆ ತಾಯಿ ಹೆಸರಿಗೂ ಕೊಹ್ಲಿ ಹೆಸರು ಜೋಡಿಸಿದ್ದಾನೆ. ತಂದೆ ಪ್ರೇಮ್ ನಾಥ್ ಕೊಹ್ಲಿ, ತಾಯಿ ಸರ್ಜೊತ್ ಕೊಹ್ಲಿ ಎಂದು ಬರೆದಿದ್ದಾನೆ. ಇನ್ನು ರೋಲ್ ನಂಬರ್ ವಿಭಾಗದಲ್ಲಿ 18 ಎಂದು ಬರೆದಿದ್ದು, ರಿಜಿಸ್ಟ್ರೇಷನ್ ಸಂಖ್ಯೆ ಕಾಲಮ್‌ನಲ್ಲಿ ಕೂಡ 18, ಸಬ್ಜೆಕ್ಟ್ ಕೋಡ್ ಎನ್ನುವಲ್ಲಿ ಕೂಡ 18 ಎಂದು ಬರೆದಿದ್ದಾನೆ.
ಮೌಲ್ಯಮಾಪಕರಿಗೆ ಆಘಾತ!
ಇನ್ನು ಉತ್ತರ ಪತ್ರಿಕೆ ನೋಡಿದ ಮೌಲ್ಯಮಾಪಕರು ಕೂಡ ಶಾಕ್ ಆಗಿದ್ದಾರೆ. ಅಭಿಮಾನ ಇರಬೇಕು ಆದರೆ ಭವಿಷ್ಯವನ್ನೇ ಹಾಳುಮಾಡಿಕೊಳ್ಳುವ ಇಂತಹ ಹುಚ್ಚು ಅಭಿಮಾನ ಏಕೆ ಎನ್ನುವುದು ಪ್ರಶ್ನೆಯಾಗಿದೆ. ಕೊಹ್ಲಿ ಮತ್ತು ಆರ್ ಸಿಬಿ ಮೇಲೆ ಅಭಿಮಾನ ವ್ಯಕ್ತಪಡಿಸಲು ಬೇರೆಯದೇ ದಾರಿಗಳಿದೆ, ಅದನ್ನು ಬಿಟ್ಟು ತನ್ನ ಭವಿಷ್ಯಕ್ಕೆ ಮಾರಕವಾಗುವಂತಹ ಹುಚ್ಚಾಟ ಯಾಕೆ ಬೇಕಿತ್ತು ಎಂದು ಮೌಲ್ಯಮಾಪಕರು ಕೂಡ ತಲೆ ಚಚ್ಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ಈ ಉತ್ತರ ಪತ್ರಿಕೆ ಭಾರಿ ವೈರಲ್ ಆಗುತ್ತಿದ್ದು ಬಗೆ ಬಗೆಯ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಹಲವು ಮಂದಿ ಹುಡುಗನ ಹುಚ್ಚಾಟಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ. ಏನೇ ಅಭಿಮಾನ ಇದ್ದರೂ, ಅದು ನಿಮ್ಮ ಜೀವನ ಹಾಳು ಮಾಡಿಕೊಳ್ಳು ಮಟ್ಟಕ್ಕೆ ಇರಬಾರದು ಎಂದಿದ್ದಾರೆ.












Click it and Unblock the Notifications