Bengaluru Bulls: ಒನ್ ಮೋರ್ ಬೆಳ್ಳುಳ್ಳಿ ಕಬಾಬ್ ಎಂದ ಬೆಂಗಳೂರು ಬುಲ್ಸ್ ಆಟಗಾರರು
ಬೆಳ್ಳುಳ್ಳಿ ಕಬಾಬ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ವಿಡಿಯೋ. ರಾಹುಲ್ಲಾ ರುಬ್ಬಿಕೊಡಪ್ಪಾ ಎನ್ನುವ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗ ಬೆಂಗಳೂರು ಬುಲ್ಸ್ ತಂಡದ ಆಟಗಾರರು ಕೂಡ ಬೆಳ್ಳುಳ್ಳಿ ಕಬಾಬ್ ವೈರಲ್ ವಿಡಿಯೋ ಸಂಭಾಷಣೆಯನ್ನು ಹೇಳಿದ್ದು ಸದ್ಯ ವೈರಲ್ ವೈರಲ್ ಆಗುತ್ತಿದೆ.
ಬೆಳ್ಳುಳ್ಳಿ ಕಬಾಬ್, ರಾಹುಲ್ಲಾ ರುಬ್ಬಿಕೊಡಪ್ಪಾ ರಾಜ, ಒನ್ ಮೋರ್ ಒನ್ ಮೋರ್ ಅನ್ಬೇಕು ಎಂದು ಬೆಂಗಳೂರು ಗೂಳಿಗಳು ಡೈಲಾಗ್ ಹೊಡೆದಿದ್ದಾರೆ. ಎಕ್ಸ್‌ನಲ್ಲಿ ಬೆಂಗಳೂರು ಬುಲ್ಸ್ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಸದ್ಯ ಸಖತ್ ಸೌಂಡ್ ಮಾಡುತ್ತಿದೆ.

ಬೆಂಗಳೂರು ಬುಲ್ಸ್ ಟ್ವಿಟರ್ ಹ್ಯಾಂಡಲ್ ಅಭಿಮಾನಿಗಳ ಜೊತೆ ಸಾಕಷ್ಟು ಉತ್ತಮ ಬಾಂಧವ್ಯ ಹೊಂದಿದೆ. ಬೆಂಗಳೂರು ಬುಲ್ಸ್ ತಂಡದ ಬಗ್ಗೆ ಅಪ್‌ಡೇಟ್ ಕೊಡುವ ಜೊತೆಗೆ ಆಗಾಗ ಎದುರಾಳಿ ತಂಡಗಳ ಕಾಲೆಳೆಯುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತದೆ.
ಬೆಳ್ಳುಳ್ಳಿ ಕಬಾಬ್ x Bengaluru Bulls😜🕶️#BengaluruBulls #FullChargeMaadi #GooliKano pic.twitter.com/gahkiY6rK2
— Bengaluru Bulls (@BengaluruBulls) February 8, 2024
7ನೇ ಸ್ಥಾನದಲ್ಲಿರುವ ಬುಲ್ಸ್
ಬುಧವಾರ ನಡೆದ ಪುಣೇರಿ ಪಲ್ತಾನ್ ವಿರುದ್ದದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋತಿದ್ದು ಮುಂದಿನ ಹಾದಿ ಕಠಿಣವಾಗಿದೆ. ಸದ್ಯ ಆಡಿರುವ 19 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 10 ಪಂದ್ಯಗಳಲ್ಲಿ ಸೋಲನುಭವಿಸಿದೆ. ಉಳಿದ 2 ಪಂದ್ಯಗಳು ಟೈ ಆಗಿದ್ದು 48 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
ಬೆಂಗಳೂರು ಬುಲ್ಸ್ ಮುಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಸೆಣೆಸಲಿದೆ. ಫೆಬ್ರವರಿ 11ರಂದು ಈ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದಾದ ಬಳಿಕ ದಬಾಂಗ್ ಡೆಲ್ಲಿ ಮತ್ತು ಹರ್ಯಾಣ ಸ್ಟೀಲರ್ಸ್ ವಿರುದ್ಧ ಸೆಣೆಸಲಿದ್ದು ಎಲ್ಲಾ ಪಂದ್ಯಗಳಲ್ಲೂ ಗೆದ್ದರೆ ಮಾತ್ರ ಎಲಿಮಿನೇಟರ್ ಹಂತಕ್ಕೆ ಪ್ರವೇಶಿಸಬಹುದು.












Click it and Unblock the Notifications