ಆರ್‌ಸಿಬಿಯ ಐಪಿಎಲ್‌ ಟ್ರೋಫಿ ಹಿಂಪಡೆದ ಬಿಸಿಸಿಐ

RCB Wins IPL 2025 Trophy: 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಆವೃತ್ತಿಯಲ್ಲಿ ಐಪಿಎಲ್ ಕಪ್‌ ಗೆದ್ದಿದೆ. ಆದರೆ, ಆರ್‌ಸಿಬಿಯ ಟ್ರೋಫಿಯನ್ನು ಬಿಸಿಸಿಐ ಹಿಂಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಇದಕ್ಕೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ಗೆ ಸೋಲುಣಿಸುವ ಮೂಲಕ ಟ್ರೋಫಿ ಮುಡಿಗೇರಿಸಿಕೊಂಡು ಚಾಂಪಿಯನ್‌ ಆಯಿತು. ಈ ಮೂಲಕ 17 ವರ್ಷದ ವನವಾಸಕ್ಕೆ ಮುಕ್ತಿ ಸಿಕ್ಕಂತಾಗಿದೆ.

BCCI Takes Back RCB s IPL 2025 Trophy

ಅಲ್ಲದೆ, ಪ್ರತೀ ಬಾರಿ ಕೇಳಿ ಬರುತ್ತಿದ್ದ 'ಈ ಸಲ ಕಪ್‌ ನಮ್ದೇ,' ಎನ್ನುವ ಘೋಷವಾಕ್ಯವನ್ನು ನಿಜ ಕೂಡ ಮಾಡಿದೆ. ಇದನ್ನು ಈ ಸಲ ಕಪ್‌ ನಮ್ದು ಎಂದು ಬದಲಾಯಿಸಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಚಾಂಪಿಯನ್ಸ್ ಆದ ಬೆಂಗಳೂರು ತಂಡದ ಟ್ರೋಫಿ ವಾಪಾಸ್‌ ಪಡೆದು ಶಾಕ್‌ ಕೊಟ್ಟಿದೆ. ಈ ನಿರ್ಧಾರ ಏಕೆ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿರುತ್ತದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ತಿಳಿಯಿರಿ.

ಆರ್‌ಸಿಬಿಯು 17 ವರ್ಷಗಳ ಬಳಿಕ ಗೆದ್ದುಕೊಂಡಿದ್ದ ಟ್ರೊಫಿಯನ್ನು ಬಿಸಿಸಿಐ ಹಿಂಪಡೆದುಕೊಂಡಿದೆ. ಇದು ಇದೇ ಮೊದಲೇನಲ್ಲ. ಈ ಹಿಂದೆ ಗೆದ್ದಿರುವ ತಂಡಗಳ ಬಳಿಯಿದ್ದ ಟ್ರೋಫಿಯನ್ನು ಸಹ ಹಿಂಪಡೆದುಕೊಂಡಿದೆ. ಬಿಸಿಸಿಐ ನಿಯಮದ ಪ್ರಕಾರ, ಯಾವುದೇ ತಂಡಗಳು ಟ್ರೋಫಿಯನ್ನು ಗೆದ್ರೂ ಅದನ್ನು ಹಿಂಪಡೆಯಲಾಗುದೆ. ಬಳಿಕ ಅದೇ ಮಾದರಿಯದ್ದೇ ರಿಪ್ಲಿಕಾ ಕಪ್‌ ತಂಡಗಳಿಗೆ ನೀಡಲಾಗುತ್ತದೆ.

ಯಾವ ತಂಡಗಳು ಯಾವಾಗ ಎಷ್ಟು ಬಾರಿ ಟ್ರೋಫಿ ಗೆದ್ದಿವೆ?

* ಮುಂಬೈ ಇಂಡಿಯನ್ಸ್ - 5 (2013, 2015, 2017, 2019, 2020)
* ಚೆನ್ನೈ ಸೂಪರ್ ಕಿಂಗ್ಸ್‌ - 5 (2010, 2011, 2018, 2021, 2023)
* ಕೊಲ್ಕತ್ತಾ ನೈಟ್‌ ರೈಡರ್ಸ್ - 3 (2012, 2014, 2024)
* ರಾಜಸ್ಥಾನ್ 1 (2008)
* ಡೆಕ್ಕನ್‌ ಚಾರ್ಜಸ್‌ 1 (2009)
* ಸನ್‌ರೈಸನ್ಸ್ ಹೈದರಾಬಾದ್‌ 1 (2016)
* ಗುಜರಾತ್ ಟೈಟಾನ್ಸ್ 1 (2022)
* ರಾಯಲ್‌ ಚಾಲೆಂಜರ್ಸ್ ಬೆಂಗಳೂರು 1 (2025)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+