Champions Trophy: ಭಾರತ ತಂಡದ ಆಟಗಾರರಿಗೆ ಶಾಕ್ ಕೊಟ್ಟ ಬಿಸಿಸಿಐ!

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಭಾರತ ತಂಡ ಆತ್ಮ ವಿಶ್ವಾಸದಿಂದಲೇ ಚಾಂಪಿಯನ್ಸ್ ಟ್ರೋಫಿ ಆಡಲು ಸಜ್ಜಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಫಾರ್ಮ್‌ಗೆ ಮರಳಿದ್ದು ಟೀಂ ಇಂಡಿಯಾ ಬಲವನ್ನು ಹೆಚ್ಚಿಸಿದೆ. ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು ಫೆಬ್ರವರಿ 20ರಂದು ಭಾರತ ಮೊದಲ ಪಂದ್ಯ ಆಡಲಿದೆ. ಪಂದ್ಯಾವಳಿಗಾಗಿ ದುಬೈಗೆ ಹೋಗಲು ಸಜ್ಜಾಗುತ್ತಿದ್ದ ಭಾರತ ತಂಡದ ಆಟಗಾರರಿಗೆ ಬಿಸಿಸಿಐ ಶಾಕ್ ಕೊಟ್ಟಿದೆ.

ಪಿಟಿಐ ವರದಿ ಮಾಡಿರುವ ಪ್ರಕಾರ ಚಾಂಪಿಯನ್ಸ್ ಟ್ರೋಫಿ ಆಡಲು ಹೋಗುವ ಭಾರತ ತಂಡದ ಆಟಗಾರರ ಜೊತೆ ಪತ್ನಿಯರು, ಗೆಳತಿಯರು ಮತ್ತು ಕುಟುಂಬದ ಸದಸ್ಯರು ಪ್ರಯಾಣ ಮಾಡುವಂತಿಲ್ಲ. ಭಾರತ ತಂಡ ಫೆಬ್ರವರಿ 15ರಂದು ದುಬೈಗೆ ಹೋಗಲಿದ್ದಾರೆ. ಬಿಸಿಸಿಐ ಆಟಗಾರರ ಮೇಲೆ ಕಠಿಣ ನಿಯಮ ಹೇರಲು ಮುಂದಾದ ಬಳಿಕ ಈ ನಿರ್ಧಾರ ಮಾಡಿದೆ.

bcci no families indian cricket team players champions trophy

ಫೆಬ್ರವರಿ 20 ರಂದು ಭಾರತ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯ ಆಡಲಿದೆ. ಫೆ. 23ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣೆಸಲಿದ್ದು, ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಮೂರು ವಾರಗಳಲ್ಲಿ ಮುಗಿಯಲಿದ್ದು, ಬಿಸಿಸಿಐ ಆಟಗಾರರ ಕುಟುಂಬದವರ ಜೊತೆಗಿರದಂತೆ ನಿರ್ಬಂಧ ವಿಧಿಸಿದೆ. ಬಿಸಿಸಿಐ ಹೊಸ ನಿಯಮದ ಪ್ರಕಾರ ಭಾರತ ತಂಡ 45 ಕ್ಕಿಂತ ಹೆಚ್ಚಿನ ದಿನಗಳ ವಿದೇಶ ಪ್ರವಾಸ ಕೈಗೊಂಡರೆ ಮಾತ್ರ ಗರಿಷ್ಠ 2 ವಾರಗಳ ಕಾಲ ಕುಟುಂಬಸ್ಥರು ಜೊತೆಗಿರಬಹುದು ಎಂದು ತಿಳಿಸಿದೆ.

ಆಟಗಾರರಿಗೆ ಮಾಹಿತಿ ರವಾನೆ

ಚಾಂಪಿಯನ್ಸ್ ಟ್ರೋಫಿ ಆಡಲು ಸಜ್ಜಾಗಿರುವ ಭಾರತ ತಂಡದ ಆಟಗಾರರಿಗೆ ಈಗಾಗಲೇ ಈ ಮಾಹಿತಿ ನೀಡಲಾಗಿದೆ. ಆಟಗಾರರು ಹೆಂಡತಿ ಅಥವಾ ಕುಟುಂಬದ ಸದಸ್ಯರ ಜೊತೆ ಬರಲು ಅವಕಾಶವಿಲ್ಲ, ಹಿರಿಯ ಆಟಗಾರರು ಈ ಬಗ್ಗೆ ಕೇಳಿದ್ದರು ಅವರಿಗೆ ಈಗಾಗಲೇ ಬಿಸಿಸಿಐ ನಿರ್ಧಾರವನ್ನು ತಿಳಿಸಿದೆ ಎಂದು ಬಿಸಿಸಿಐನ ಮೂಲವೊಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ನೀಡಿದ ಬಳಿಕ ಬಿಸಿಸಿಐ ಹೊಸ ನಿಯಮಗಳನ್ನು ಜಾರಿ ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶ ಕಳೆದುಕೊಂಡ ಬಳಿಕ, ಚಾಂಪಿಯನ್ಸ್ ಟ್ರೋಫಿ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ.

ಈಗ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಳ್ಳಲು ಖಾಸಗಿ ವಾಹನದಲ್ಲಿ ಹೋಗುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ತಂಡದ ಬಸ್‌ನಲ್ಲಿಯೇ ಎಲ್ಲಾ ಆಟಗಾರರು ಒಟ್ಟಿಗೆ ಪ್ರಯಾಣಿಸಬೇಕು ಎನ್ನುವ ಸೂಚನೆ ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+