ಯುಎಎಸ್‌ಎನಲ್ಲಿ ವ್ಯಾಪಾರಕ್ಕೆ ಕೈ ಹಾಕಿದರಾ ಗಿಲ್? ಬಿಸಿಸಿಐ ಶಿಸ್ತು ಕ್ರಮ
ಟೀಮ್ ಇಂಡಿಯಾದ ಉದಯೋನ್ಮುಖ ಆಟಗಾರ ಸದ್ಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಜೊತೆ ಪ್ರಯಾಣ ಬೆಳೆಸುತ್ತಿದ್ದಾರೆ. ಆಡುವ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ ನಿಜ. ಆದರೆ ಅವರು ಕಾಯ್ದಿರಿಸಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಕಾಯ್ದಿರಿಸಿದ ಓಪನರ್ ಆಗಿ ಇದ್ದಾರೆ. ಇಷ್ಟು ದಿನ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ ಆಗಿರುವ ಶುಭಮನ್ ಗಿಲ್ ಮತ್ತೆ ಈಗ ಸುದ್ದಿಯಲ್ಲಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡದೇ ಇದ್ದರೂ, ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ರನ್ ಬಾರಿಸಿ ಅಭಿಮಾನಿಗಳನ್ನು ತಣಿಸುತ್ತಿದ್ದ ಶುಭಮನ್ ಬಗ್ಗೆ ಈಗ ಮತ್ತಷ್ಟು ಸುದ್ದಿಗಳು ಹೊರ ಬರುತ್ತಿವೆ. ಇನ್ನು ಸದ್ಯ ಟೀಮ್ ಇಂಡಿಯಾದ ಜೊತೆ ಯುಎಸ್‌ಎದಲ್ಲಿರುವ ಶುಭಮನ್ ಕೆನಡಾ ವಿರುದ್ಧದ ಪಂದ್ಯದ ಬಳಿಕ ತವರಿಗೆ ಮರಳುವ ಸಾಧ್ಯತೆ ದಟ್ಟವಾಗಿದೆ. ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಶುಭಮನ್‌ಗಿಲ್ ಸದ್ಯ ಟೀಮ್ ಇಂಡಿಯಾದೊಂದಿಗೆ ಪ್ರಯಾಣ ಬೆಳೆಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೆ ಅವರು ವ್ಯಾಪಾರದತ್ತ ಚಿತ್ತ ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ನಾಯಕ ರೋಹಿತ್ ಶರ್ಮಾ ಜತೆಗೂ ಮನಸ್ತಾಪವಿದೆ ಎನ್ನಲಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲೂ ಗಿಲ್, ಟೀಮ್ ಇಂಡಿಯಾ ನಾಯಕನನ್ನು ಅನ್‌ಫಾಲೋ ಮಾಡಿದ್ದಾರೆ. ಈಗ ಪ್ರಶ್ನೆ ಏನೆಂದರೆ, ಶುಭ್‌ಮನ್ ಗಿಲ್ ಯುಎಸ್‌ನಲ್ಲಿ ತಮ್ಮ ಸಮಯವನ್ನು ಯಾವ ವ್ಯವಹಾರಕ್ಕಾಗಿ ಮೀಸಲಿಟ್ಟಿದ್ದಾರೆ ಎಂಬುದಾಗಿದೆ.
ಗಿಲ್ ಅಮೆರಿಕದಲ್ಲಿ ವ್ಯಾಪಾರ ಅವಕಾಶಗಳನ್ನು ನೋಡುತ್ತಿದ್ದಾರೆ. ಅವರು ಹೂಡಿಕೆದಾರರಾಗಿ ದೊಡ್ಡ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದಾರೆ. ಅಮೆರಿಕದ ಪ್ರಮುಖ ಸಾಹಸೋದ್ಯಮ ಬಂಡವಾಳ ಸಂಸ್ಥೆ ವಿಕಸ್ ವೆಂಚರ್ಸ್‌ನಲ್ಲಿ ಹೂಡಿಕೆಗಾಗಿ ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಕಂಪನಿಯು ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಗಿಲ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿತ್ತು. ಈ ಸಂಸ್ಥೆಯು ತಂತ್ರಜ್ಞಾನ, ಆರೋಗ್ಯ ಮತ್ತು ಗ್ರಾಹಕ ಸರಕುಗಳಿಗೆ ಹೆಸರುವಾಸಿ.

ಶುಭಮನ್ ಗಿಲ್ ಅವರ ನಿವ್ವಳ ಮೌಲ್ಯ
ಶುಭಮನ್ ಗಿಲ್ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ನ ನಾಯಕ. ಇದರೊಂದಿಗೆ ಹಲವು ಜಾಹೀರಾತುಗಳಲ್ಲಿಯೂ ಇವರು ಕಾಣಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಗಿಲ್ ಜಾಹೀರಾತಿಗೆ 2.5 ಕೋಟಿ ರೂ. ಸಂಭವಾವನೆ ಪಡೆಯುತ್ತಾರೆ. ಗಿಲ್ ಜಿಲೆಟ್, ನೈಕ್, ಕ್ಯಾಸಿಯೊ, ಬಜಾಜ್ ಅಲೈನ್ಸ್, ದಿ ಸ್ಲೀಪ್ ಕಂಪನಿ, ಫಿಮಾ ಮೆನ್, ಮೈ ಎಲೆವೆಂತ್ ಸರ್ಕಲ್ ಮತ್ತು ಜೆಬಿಎಲ್ ನಂತಹ ಬ್ರಾಂಡ್‌ಗಳನ್ನು ಹೊಂದಿದ್ದಾರೆ. ಗಿಲ್ ಅವರ ನಿವ್ವಳ ಮೌಲ್ಯ ಸುಮಾರು 34 ಕೋಟಿ ಎಂದು ಎನ್ನಲಾಗುತ್ತಿದೆ.

ಫೋಟೋ ಹಂಚಿಕೊಂಡ ಗಿಲ್
ಅಶಿಸ್ತಿನ ವದಂತಿಗಳಿಗೆ ಗಿಲ್ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ. ಶುಭಮನ್ ಗಿಲ್ ರೋಹಿತ್ ಶರ್ಮಾ ಮತ್ತು ಅವರ ಮಗಳು ಅದಾರ ಅವರೊಂದಿಗೆ ಇನ್‌ಸ್ಟಾಗ್ರಾಮ್ ಕಥೆಯನ್ನು ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾರೆ. ಕೆಲ ಸಮಯದ ಹಿಂದೆ ಅಶಿಸ್ತಿನ ಕಾರಣದಿಂದ ಶುಬ್‌ಮನ್ ಗಿಲ್ ಅವರನ್ನು ಟೂರ್ನಿಯಿಂದ ಹೊರಹಾಕಲಾಗಿದೆ ಎಂಬ ವರದಿಗಳು ಬಂದಿದ್ದವು. ಆದರೆ ಗಿಲ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದೆ.












Click it and Unblock the Notifications