India vs Australia: ವೇಗಿಗಳ ಅಬ್ಬರ; 104 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ
ಪರ್ತ್‌ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್‌ನಲ್ಲಿ ವೇಗಿಗಳು ಅಬ್ಬರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ, ಆಸ್ಟ್ರೇಲಿಯಾ ತಂಡವನ್ನು 104 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ನಾಯಕ ಬುಮ್ರಾ ಅಬ್ಬರಕ್ಕೆ ಕಾಂಗರೂ ಪಡೆ ಬೆಚ್ಚಿಬಿದ್ದಿದೆ. ಎರಡನೇ ದಿನದ ಆಟದ ಮೊದಲ ಸೆಷನ್‌ನಲ್ಲೇ ಆಸ್ಟ್ರೇಲಿಯಾ ಆಲೌಟ್ ಆಗಿದ್ದು ಭಾರತ 46 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಪರ್ತ್‌ನಲ್ಲಿ ಮೊದಲ ದಿನವೇ 17 ವಿಕೆಟ್‌ಗಳು ಪತನವಾಗಿದ್ದವು. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆಸ್ಟ್ರೇಲಿಯಾ ವೇಗಿಗಳು ಆರಂಭದಲ್ಲೇ ಭಾರತಕ್ಕೆ ಆಘಾತ ಕೊಟ್ಟರು. ಯಶಸ್ವಿ ಜೈಸ್ವಾಲ್ ಯಾವುದೇ ರನ್ ಗಳಿಸದೆ ಪೆವಿಲಿಯನ್ ಸೇರಿದರೆ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ದೇವದತ್ ಪಡಿಕ್ಕಲ್ ಕೂಡ ರನ್ ಗಳಿಸದೆ ಔಟಾದರು.

ಕೆಎಲ್ ರಾಹುಲ್ 26 ರನ್, ರಿಷಬ್ ಪಂತ್ 37 ರನ್ ಮತ್ತು ನಿತೀಶ್ ರೆಡ್ಡಿ 41 ರನ್ ಗಳಿಸುವ ಮೂಲಕ ಭಾರತ 150 ರನ್ ಗಳಿಸಲು ಸಹಾಯ ಮಾಡಿದರು. ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಜೋಶ್ ಹೇಜಲ್‌ವುಡ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಪಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಮಾರ್ಷ್ ತಲಾ 32 ವಿಕೆಟ್ ಪಡೆದರು.
ಬುಮ್ರಾ, ರಾಣಾ, ಸಿರಾಜ್ ಅಬ್ಬರ
ಭಾರತ 150 ರನ್‌ಗಳಿಗೆ ಆಲೌಟ್ ಆದ ಬಳಿಕ , ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯುವ ವಿಶ್ವಾಸದಲ್ಲಿ ಕಣಕ್ಕಿಳಿಯಿತು. ಆದರೆ ಭಾರತದ ವೇಗಿಗಳ ಅಬ್ಬರದ ಮುಂದೆ ಕಾಂಗರೂ ಪಡೆ ರನ್ ಗಳಿಸಲು ಪರದಾಡಿತು. ನಾಯಕ ಜಸ್ಪ್ರೀತ್ ಬುಮ್ರಾ, ಹರ್ಷಿರ್ ರಾಣಾ ಮತ್ತು ಮೊಹಮ್ಮದ್ ಸಿರಾಜ್ ಅಬ್ಬರಕ್ಕೆ ಆಸ್ಟ್ರೇಲಿಯಾ ನಲುಗಿತು.
ವೇಗಿ ಮಿಚೆಲ್ ಸ್ಟಾರ್ಕ್ 26 ರನ್ ಗಳಿಸಿದ್ದೇ ಆಸ್ಟ್ರೇಲಿಯಾ ಪರ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 21 ರನ್ ಗಳಿಸಿದರು. 4 ಬ್ಯಾಟರ್ ಮಾತ್ರ ಎರಡಂಕಿ ರನ್ ಗಳಿಸಿದ್ದರೆ ಉಳಿದವರು ಕೇವಲ ಒಂದಂಕಿಗೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ರನ್‌ಗಳಿಗೆ ಆಲೌಟ್ ಆಗಿದ್ದು ಭಾರತ ರನ್‌ಗಳ ಮುನ್ನಡೆ ಪಡೆದುಕೊಂಡಿತು.
ಜಸ್ಪ್ರೀತ್ ಬುಮ್ರಾ 5ವಿಕೆಟ್ ಪಡೆದು ಮಿಂಚಿದರೆ, ಪದಾರ್ಪಣ ಪಂದ್ಯವನ್ನಾಡುತ್ತಿರುವ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಮಿಂಚಿದರು.












Click it and Unblock the Notifications