Asian Games 2026: ಟ್ರ್ಯಾಪ್ ಶೂಟಿಂಗ್‌ನಲ್ಲಿ 'ಚಿನ್ನ'ಕ್ಕೆ ಮುತ್ತಿಟ್ಟ ಭಾರತದ ನೀರೂ ಧಾಂಡಾ

Asian Games 2026: ಜಪಾನ್‌ನ ಐಚಿ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026ರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ನೀರು ಧಾಂಡಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ 'ಚಿನ್ನ' ಗೆದ್ದಿದ್ದು, ಈ ಮೂಲಕ ಕೂಟದಲ್ಲಿ ಭಾರತದ ವೈಯಕ್ತಿಕ ಚಿನ್ನದ ಪದಕದ 10 ದಿನಗಳ ಸುದೀರ್ಘ ಕಾಯುವಿಕೆಗೆ ತೆರೆ ಬಿದ್ದಿದೆ.

​ಜೊತೆಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಪದಕ, ಅದರಲ್ಲೂ ಚಿನ್ನ-ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಅಪ್ರತಿಮ ದಾಖಲೆಗೂ ಅವರು ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಯಾವುದೇ ಮಹಿಳಾ ಶೂಟರ್ ಈ ವಿಭಾಗದಲ್ಲಿ ಪೋಡಿಯಂ ಏರಲು ಸಾಧ್ಯವಾಗಿರಲಿಲ್ಲ.

Asian Games 2026 Neeru Dhanda Wins Historic Gold in Women s Trap Shooting Know Complete details

ಫೈನಲ್ ಸುತ್ತಿನಲ್ಲಿ ಅದ್ಭುತ ಪ್ರದರ್ಶನ

26 ವರ್ಷದ ನೀರು ಧಾಂಡಾ ಫೈನಲ್ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ತೋರಿದರು. 30 ಗುರಿಗಳ ಪೈಕಿ ಕೇವಲ ಎರಡನ್ನು ಮಾತ್ರ ತಪ್ಪಿಸಿಕೊಂಡ ಅವರು, ಬರೋಬ್ಬರಿ 28 ಅಂಕಗಳೊಂದಿಗೆ ಎದುರಾಳಿಗಳನ್ನು ಸಂಪೂರ್ಣವಾಗಿ ಮಕಾಡೆ ಮಲಗಿಸಿದರು. ಚೀನಾದ ಸನ್ ಯುನ್‌ಗಾಂಗ್ ಬೆಳ್ಳಿ ಪದಕ ಪಡೆದರೆ, ಕುವೈತ್‌ನ ಹಾಜರ್ ಅಬ್ದುಲ್‌ಮಲಿಕ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಭಾರತದ ಕೀರ್ತಿ ಪತಾಕೆ ಹಾರಿಸಿದ ನೀರು ಧಾಂಡಾ

ಅರ್ಹತಾ ಸುತ್ತಿನಲ್ಲೇ ನೀರು ಧಾಂಡಾ ಉತ್ತಮ ಲಯದಲ್ಲಿದ್ದರು. ಒಟ್ಟು 118 ಗುರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ಅವರು, ಕತಾರ್‌ನ ರೇ ಬಾಸಿಲ್ ಅವರೊಂದಿಗೆ ಸಮಾನ ಅಂಕ ಗಳಿಸಿ ಅಗ್ರಸ್ಥಾನ ಹಂಚಿಕೊಂಡು ಫೈನಲ್‌ಗೆ ಪ್ರವೇಶಿಸಿದ್ದರು. ಇದೇ ದಿನ ನಡೆದ ಮಹಿಳೆಯರ ಟ್ರ್ಯಾಪ್ ತಂಡ ವಿಭಾಗದಲ್ಲೂ ಭಾರತಕ್ಕೆ ಬೆಳ್ಳಿ ಪದಕ ಒಲಿಯುವಲ್ಲಿ ನೀರು ಪ್ರಮುಖ ಕೊಡುಗೆ ನೀಡಿದ್ದರು. ಇದೀಗ ವೈಯಕ್ತಿಕ ವಿಭಾಗದ ಫೈನಲ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿರುವ ಅವರು, ಒಂದೇ ದಿನ ಎರಡು ಪದಕಗಳ ಸಾಧನೆಯೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+