India VS Pakistan: ಕೊಹ್ಲಿ & ರಾಹುಲ್ ಗುನ್ನಾ, ಪಾಕ್‌ಗೆ ಬಿಗ್ ಶಾಕ್
ಭಾರತ & ಪಾಕಿಸ್ತಾನ ನಡುವಿನ 'ಏಷ್ಯಾಕಪ್' ಮ್ಯಾಚ್ ಅದ್ಭುತ ತಿರುವು ಪಡೆಯುತ್ತಿದೆ. ಮಳೆ ಭೀತಿ ನಡುವೆ ನಿನ್ನೆ ಪಂದ್ಯ ನಿಂತು ಹೋಗಿತ್ತು. ಆದರೆ ಈ ಕಾರಣಕ್ಕೆ ಒಂದು ದಿನ ಮೀಸಲು ಇರಿಸಲಾಗಿತ್ತು. ಹೀಗೆ ಮೀಸಲು ದಿನವಾದ ಇಂದು ಮತ್ತೆ ಮ್ಯಾಚ್ ಶುರುವಾಗಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ನಿನ್ನೆ ಪಂದ್ಯ ನಿಂತಿದ್ದ ಹಂತದಲ್ಲೇ ಇಂದು ಮತ್ತೆ ಆರಂಭವಾಗಿದ್ದು, ಕೊಹ್ಲಿ & ರಾಹುಲ್ ಜೋಡಿ ಪಾಕಿಸ್ತಾನಕ್ಕೆ ಚಳಿ ಬಿಡಿಸಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಪಂದ್ಯ ಏನಾಗುತ್ತೋ? ಎಂಬ ಚಿಂತೆ ಶುರುವಾಗಿತ್ತು. ಆದ್ರೆ ಈ ಚಿಂತೆ ದೂರ ಮಾಡಿದ್ದು ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಜೋಡಿ. ಇಬ್ಬರು ಆಟಗಾರರು 3ನೇ ವಿಕೆಟ್ ಜೊತೆಯಾಟಕ್ಕೆ ಭರ್ತಿ 100 ರನ್‌ಗಳ ಜೊತೆಯಾಟ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡದ ಬೌಲರ್‌ಗಳ ಬೆವರು ಇಳಿಸಿದ ಇಬ್ಬರೂ ಆಟಗಾರರು, ಈಗಾಗಲೇ ಅರ್ಧ ಶತಕ ಬಾರಿಸಿದ್ದು ಇನ್ನೇನು ಶತಕ ಭಾರಿಸುವ ಕಡೆಗೆ ಹೆಜ್ಜೆ ಹಾಕಿದ್ದಾರೆ.

ಮಳೆ ನಡುವೆ ಭಾರತದ ಭರ್ಜರಿ ಪ್ರದರ್ಶನ
ಶ್ರೀಲಂಕಾ ಮಳೆ ಕಾರಣಕ್ಕೆ ನಲುಗಿ ಹೋಗಿದ್ದು 'ಏಷ್ಯಾಕಪ್-2023'ಯ ಬಹುತೇಕ ಪಂದ್ಯ ಇದೇ ಮಳೆಗೆ ಆಹುತಿಯಾಗಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೀಸಲಾಗಿ ಒಂದು ದಿನ ಸಿಕ್ಕಿತ್ತು. ನಿನ್ನೆ ಮ್ಯಾಚ್ ನಿಂತರೂ ಇಂದು ಪಂದ್ಯ ಶುರುವಾಗಿದೆ. ಹೀಗಾಗಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಭಾರತ ತಂಡ ಒಟ್ಟಾರೆ 288 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ. ಹಾಗಾದರೆ ಭಾರತದ ಪರವಾಗಿ ವಿರಾಟ್ ಕೊಹ್ಲಿ & ಕೆ.ಎಲ್. ರಾಹುಲ್ ಗಳಿಸಿರುವುದು ಎಷ್ಟು? ಮುಂದೆ ಓದಿ.

ಇತ್ತೀಚಿನ ಮಾಹಿತಿ ಪ್ರಕಾರ ಭಾರತದ ಪರ ವಿರಾಟ್ ಕೊಹ್ಲಿ 83 ರನ್ ಗಳಿಸಿದ್ದು, ಹಾಗೇ ಕೆ.ಎಲ್. ರಾಹುಲ್ 94 ರನ್ ಗಳಿಸಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ 6 ಬೌಂಡರಿ ಮತ್ತು 1 ಸಿಕ್ಸ್ ಹೊಡೆದಿದ್ದಾರೆ. ಹಾಗೇ ಕೆ.ಎಲ್. ರಾಹುಲ್ 10 ಬೌಂಡರಿ ಸೇರಿ ಒಟ್ಟು 2 ಸಿಕ್ಸ್ ಹೊಡೆದಿದ್ದಾರೆ. ಇಬ್ಬರೂ ಆಟಗಾರರು ಇದೀಗ ಶತಕ ಪೂರೈಸುವ ಹಂತದಲ್ಲಿದ್ದಾರೆ. ಈ ಮೂಲಕ ಪಾಕಿಸ್ತಾನದ ಬೌಲರ್‌ಗಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ಚಳಿ ಬಿಡಿಸಿದ್ದಾರೆ.












Click it and Unblock the Notifications