Asia Cup 2023: ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನವೇ ಗಾಯಗೊಂಡ ಪಾಕ್‌ನ ಮಾರಕ ವೇಗಿ!

ಏಷ್ಯಾಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಬುಧವಾರ ಮುಲ್ತಾನ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ 238 ರನ್‌ಗಳ ಬೃಹತ್ ಗೆಲುವು ಸಾಧಿಸಿತು.

ನಾಯಕ ಬಾಬರ್ ಅಜಮ್ 151 ರನ್ ಗಳಿಸಿ ಮಿಂಚಿದರೆ, ಇಫ್ತಿಕರ್ ಅಹ್ಮದ್ 71 ಎಸೆತಗಳಲ್ಲಿ 109 ರನ್ ಗಳಿಸಿ ಅಬ್ಬರಿಸಿದರು. ಈ ಮೂಲಕ ಪಾಕಿಸ್ತಾನ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 342 ರನ್ ಕಲೆಹಾಕಿತು. ನೇಪಾಳ 23.4 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರೆ, ಶದಾಬ್ ಖಾನ್ 4 ವಿಕೆಟ್ ಪಡೆದು ಮಿಂಚಿದರು.

 Asia Cup 2023: Shaheen Afridi Sustains Injury Three Days Prior to IND vs PAK Showdown

ಸೆಪ್ಟೆಂಬರ್ 2ರಂದು ಪಾಕಿಸ್ತಾನ ಭಾರತದ ವಿರುದ್ಧ ಸೆಣೆಸಲಿದ್ದು, ಈ ಪಂದ್ಯಕ್ಕೂ ಮುನ್ನವೇ ಪ್ರಮುಖ ವೇಗದ ಬೌಲರ್ ಶಾಹೀನ್ ಅಫ್ರಿದಿ ಗಾಯಗೊಂಡಿದ್ದಾರೆ. ಬುಧವಾರ ನೇಪಾಳ ವಿರುದ್ಧದ ಪಂದ್ಯದಲ್ಲಿ 5 ಓವರ್ ಬೌಲಿಂಗ್ ಮಾಡಿದ ಅವರು 2 ವಿಕೆಟ್ ಪಡೆದರು, ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಮೈದಾನದಿಂದಲೇ ಹೊರ ನಡೆದರು.

5 ಓವರ್ ಮಾತ್ರ ಬೌಲ್ ಮಾಡಿದ ಅಫ್ರಿದಿ

ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ವೈದ್ಯರು ಮತ್ತು ಫಿಸಿಯೋ ಜೊತೆ ಸಮಾಲೋಚಿಸಿದ ನಂತರ ಶಾಹೀನ್ ಅಫ್ರಿದಿ ಮೈದಾನವನ್ನು ತೊರೆದರು. ಭಾರತದ ವಿರುದ್ಧದ ಪಂದ್ಯದಲ್ಲಿ ಅವರ ಪಾತ್ರ ನಿರ್ಣಾಯಕವಾಗಿದ್ದು, ಈಗ ಗಾಯಗೊಂಡಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಏಷ್ಯಾ ಕಪ್ 2023 ರ ಆರಂಭಿಕ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ನೇಪಾಳ ವಿರುದ್ಧದ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅವರು 2/27 ರೊಂದಿಗೆ 5 ಓವರ್‌ಗಳನ್ನು ಬೌಲ್ ಮಾಡಿದರು. ಆದರೆ ಫೀಲ್ಡಿಂಗ್ ಮಾಡುವಾಗ ಅನಾನುಕೂಲತೆ ಉಂಟಾಗಿದ್ದರಿಂದ ವೈದ್ಯರು ಮೈದಾನದಿಂದ ಹೊರಹೋಗುವಂತೆ ಸೂಚಿಸಿದರು.

ಮುಲ್ತಾನ್ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು, ಇದು ಅಸ್ವಸ್ಥತೆಗೆ ಒಂದು ಕಾರಣವಾಗಿರಬಹುದು. ಅಲ್ಲದೆ ಮೂರು ದಿನಗಳಲ್ಲಿ ಭಾರತದ ವಿರುದ್ಧ ಪಂದ್ಯ ಇರುವ ಕಾರಣ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದ ಪಾಕಿಸ್ತಾನ ಅವರಿಗೆ ವಿಶ್ರಾಂತಿ ನೀಡಿತು. ಆದರೂ, ಶಾಹೀನ್ ಅಫ್ರಿದಿ ಅವರ ಬೌಲಿಂಗ್‌ನಲ್ಲಿ ಮೊದಲಿನ ಲಯ ಇರಲಿಲ್ಲ ಎಂದು ಹೇಳಲಾಗಿದೆ. ಬಿಸಿ ಮತ್ತು ಆದ್ರತೆ ಕೂಡ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಬಿಡುವಿರದ ವೇಳಾಪಟ್ಟಿ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಶಾಹೀನ್ ಅಫ್ರಿದಿ ಅವರಂತಹ ಬೌಲರ್‌ಗಳನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಅವರ ಇನ್‌ಸ್ವಿಂಗ್ ಎಸೆತಗಳು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿವೆ. ಶಾಹೀನ್ ಬೌಲಿಂಗ್ ಎದುರಿಸಲು ಭಾರತ ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿದೆ.

ಶಾಹೀನ್ ಅಫ್ರಿದಿ ಮೊಣಕಾಲಿನ ಗಾಯದಿಂದ 2022 ರ ಏಷ್ಯಾ ಕಪ್ ಅನ್ನು ತಪ್ಪಿಸಿಕೊಂಡರು. ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2022 ಫೈನಲ್‌ನಲ್ಲಿ ಅವರು 2.1 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು.

ಏಷ್ಯಾಕಪ್‌ನಲ್ಲಿ ಅವರು ಸಂಪೂರ್ಣವಾಗಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬೇಕಿರುವ ಕಾರಣ ಅವರಿಗೆ ಮತ್ತೊಂದು ಸವಾಲು ಎದುರಿಗೆ ಇದೆ. ಸೆಪ್ಟೆಂಬರ್ 2ರಂದು ಭಾರತದ ವಿರುದ್ಧದ ಪಂದ್ಯ ನಂತರ ಅವರು ಸೆಪ್ಟೆಂಬರ್ 6ರಂದು ಶ್ರೀಲಂಕಾ ವಿರುದ್ಧ ಲಾಹೋರ್ ನಲ್ಲಿ ಆಡಲಿದ್ದಾರೆ, ಸೆಪ್ಟೆಂಬರ್ 9ರಂದು ಮತ್ತೆ ಶ್ರೀಲಂಕಾದಲ್ಲಿ ಪಂದ್ಯ ಇದ್ದು ವಾಪಸಾಗಲಿದೆ.

ಪ್ರಯಾಣದ ಜೊತೆಗೆ, ಬಿಡುವಿರದ ವೇಳಾಪಟ್ಟಿ ಫಿಟ್‌ನೆಸ್‌ಗೆ ದೊಡ್ಡ ತೊಡಕಾಗಿದೆ. ಏಷ್ಯಾಕಪ್ ಮುಗಿದ ಬಳಿಕ ಏಕದಿನ ವಿಶ್ವಕಪ್ ಇರುವ ಕಾರನ ಅಫ್ರಿದಿ ಫಿಟ್‌ನೆಸ್ ವಿಚಾರದಲ್ಲಿ ಪಾಕಿಸ್ತಾನ ಹೆಚ್ಚಿನ ಜಾಗೃತಿ ವಹಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+