Asia Cup 2023: ಏಷ್ಯಾಕಪ್‌ ಪಂದ್ಯಗಳನ್ನು ಉಚಿತವಾಗಿ ನೋಡಿ: ವಿವರ ಇಲ್ಲಿದೆ

ಏಷ್ಯಾಕಪ್ 2023ರ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 30ರಂದು ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟಂಬರ್ 2ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಡಿಸ್ನಿ ಹಾಟ್‌ಸ್ಟಾರ್ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ.

ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ನಲ್ಲಿ ಉಚಿತ ಸ್ಟ್ರೀಮಿಂಗ್ ಮಾಡಲು ನಿರ್ಧರಿಸಿದ್ದು, ಮೊಬೈಲ್‌ನಲ್ಲಿ ಉಚಿತವಾಗಿ ಏಷ್ಯಾಕಪ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಈಗಾಗಲೇ ಉಚಿಯವಾಗಿ ವೀಕ್ಷಿಸಿ ಎನ್ನುವ ಅಭಿಯಾನವನ್ನು ಪ್ರಾರಂಭಿಸಿದೆ. 'ಮೊಬೈಲ್‌ನಲ್ಲಿ ಉಚಿತ' ಎಂಬುದು ಹೊಸ ಪ್ರಚಾರದ ಜಾಹೀರಾತಿನ ಅಡಿಬರಹವಾಗಿದೆ.

 Asia Cup 2023: Disney+ Hotstar Unveils Asia Cup Campaign: Free Mobile Streaming!

ಡಿಸ್ನಿ + ಹಾಟ್‌ಸ್ಟಾರ್‌ನ ಮುಖ್ಯ ಉದ್ದೇಶವು ಹೆಚ್ಚಿನ ಪ್ರೇಕ್ಷಕರನ್ನು ತಲುಪುವುದು ಮತ್ತು ಭಾರತದಾದ್ಯಂತ ವೀಕ್ಷಕರಿಗೆ ತೊಂದರೆ-ಮುಕ್ತ ಅನುಭವವನ್ನು ನೀಡುವುದು. ಡಿಸ್ನಿ ಹಾಟ್‌ಸ್ಟಾರ್ ಅಭಿಯಾನದ ಉದ್ದೇಶವಾಗಿದೆ.

ನೀವು ಎಲ್ಲಿ ಬೇಕಾದರೂ ಮತ್ತು ಎಲ್ಲಿಗೆ ಹೋದರೂ ಕ್ರಿಕೆಟ್ ನೋಡಬಹುದು ಎಂದು ತೋರಿಸಲಾಗಿದೆ. ಈ ಅಭಿಯಾನವು ತನ್ಮಯ್ ಭಟ್, ದೇವಯ್ಯ ಬೋಪಣ್ಣ ಮತ್ತು ಮೂನ್‌ಶಾಟ್ ತಂಡದ ಪರಿಕಲ್ಪನೆಯಾಗಿದೆ. ಈ ಅಭಿಯಾನವು ಕ್ರಿಕೆಟ್ ಆಟದೊಂದಿಗೆ ಭಾರತದ ಪ್ರೀತಿಯ ಸಂಬಂಧವನ್ನು ಸಂಪೂರ್ಣವಾಗಿ ಸೆರೆಹಿಡಿದಿದೆ, ಕಿಶೋರ್ ಅಯ್ಯರ್ ಈ ಜಾಹೀರಾತನ್ನು ನಿರ್ದೇಶಿಸಿದ್ದಾರೆ.

ಏಷ್ಯಾಕಪ್ ಜೊತೆ ವಿಶ್ವಕಪ್ ಪಂದ್ಯಗಳು ಉಚಿತ ಪ್ರಸಾರ

ಈ ಚಮತ್ಕಾರಿ ಮತ್ತು ಸೃಜನಾತ್ಮಕ ಜಾಹೀರಾತಿನ ಕುರಿತು ಮಾತನಾಡಿದ ಡಿಸ್ನಿ+ ಹಾಟ್‌ಸ್ಟಾರ್ ವಕ್ತಾರರು, "ಕ್ರಿಕೆಟ್ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ಕ್ರೀಡೆಯನ್ನು ನಮ್ಮ ಬಳಕೆದಾರರಿಗೆ ತಲುಪಿಸಲು ಪ್ರಯತ್ನಿಸುತ್ತೇವೆ. ಏಷ್ಯಾ ಕಪ್ ಮತ್ತು ಮುಂಬರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅನ್ನು ಮೊಬೈಲ್‌ಗಳಲ್ಲಿ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ನೀಡುವ ಮೂಲಕ, ಕ್ರಿಕೆಟ್ ಅನ್ನು ದೇಶದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಲು ಮತ್ತು ಡಿಜಿಟಲ್-ಮೊದಲ ಪ್ರೇಕ್ಷಕರನ್ನು ಸ್ಪರ್ಶಿಸಲು ನಾವು ಸಜ್ಜಾಗಿದ್ದೇವೆ." ಎಂದು ಹೇಳಿದ್ದಾರೆ.

ಸಜ್ಜಾಗುತ್ತಿದೆ ಭಾರತ ತಂಡ

ಏಷ್ಯಾಕಪ್‌ 2023ರ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಭಾರತ ತಂಡಕ್ಕೆ ಮರಳಿದ್ದಾರೆ. ಆರು ತಿಂಗಳ ಬಳಿಕ ಪ್ರಮುಖ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ರೋಹಿತ್ ಶರ್ಮಾ ಮತ್ತು ಕೋ ಕಾಂಟಿನೆಂಟಲ್ ಕಪ್ ಅನ್ನು ಪ್ರಾರಂಭಿಸುತ್ತಾರೆ.

ಭಾರತ ಈ ಬಾರಿ ಏಷ್ಯಾಕಪ್ ಗೆಲ್ಲುವ ಫೇವರಿಟ್ ತಂಡವೆಂದು ಬಿಂಬಿಸಲ್ಪಟ್ಟಿದೆ. ಅಕ್ಟೋಬರ್ 5ರಿಂದ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಅದಕ್ಕೆ ತಯಾರಿಯ ಭಾಗವಾಗಿ ಏಷ್ಯಾಕಪ್ ಪಂದ್ಯಾವಳಿಯನ್ನು ಆಡಲಿದೆ. ತಿಲಕ್ ವರ್ಮಾ ಏಕದಿನ ಮಾದರಿಯಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+