PBKS vs MI: ಪಂಜಾಬ್‌ ತಂಡದ ಯುವ ಬ್ಯಾಟರ್‌ ಅಶುತೋಷ್ ಶರ್ಮಾ ಯಾರು? ಗಮನ ಸೆಳೆದ ಕ್ಲಾಸ್ ಬ್ಯಾಟಿಂಗ್

ಐಪಿಎಲ್‌ 2024ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 9 ರನ್‌ಗಳಿಂದ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿತು. ಈ ಗೆಲುವಿನಲ್ಲಿ ಪಂಜಾಬ್‌ ಸೋತರೂ ತಂಡದ ಯುವ ಬ್ಯಾಟರ್‌ ಅಶುತೋಷ್ ಶರ್ಮಾ ಬ್ಯಾಟಿಂಗ್ ಗಮನ ಸೆಳೆಯಿತು. ಪಂಜಾಬ್ ತಂಡ ಮಿಡ್ಲ್ ಆರ್ಡರ್‌ ಬ್ಯಾಟರ್‌ ಮುಂಬೈ ಇಂಡಿಯನ್ಸ್‌ ತಂಡದ ಬೌಲರ್‌ಗಳನ್ನು ಮನ ಬಂದಂತೆ ಥಳಿಸಿದರು. ಈ ಪ್ಲೇಯರ್ ಯಾರು ಎಂದು ತಿಳಿದು ಕೊಳ್ಳಲು ಅಭಿಮಾನಿಗಳು ಮುಂದಾಗಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಸ್ಟಾರ್ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಬಾರಿಸಿದ 78 ರನ್‌ ಗಳ ಸಹಾಯದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 192 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಪಂಜಾಬ್ 19.1 ಓವರ್‌ಗಳಲ್ಲಿ 183 ರನ್‌ಗಳಿಗೆ ಆಲೌಟ್ ಆಯಿತು.

Ashutosh Sharma s Stellar Performance Can t Seal Win for Punjab Kings Despite Breakout Season

ಪಂಜಾಬ್‌ ಸೋಲಿನಲ್ಲಿ ಅಶುತೋಷ್‌ ಶರ್ಮಾ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ಅಶುತೋಷ್‌ 28 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ಸಹಾಯದಿಂದ 61 ರನ್‌ ಬಾರಿಸಿ ಎಲ್ಲರ ಗಮನ ಸೆಳೆದರು. ನೆರೆದ ಪ್ರೇಕ್ಷಕರು ಇವರ ಬ್ಯಾಟಿಂಗ್ ನೋಡಿ ಫುಲ್ ಖುಷ್ ಆದರು.

ಅಶುತೋಷ್‌ ಶರ್ಮಾ ಯಾರು?

ಅಶುತೋಷ್ ಶರ್ಮಾ ಮಧ್ಯಪ್ರದೇಶದ ರತ್ಲಾಮ್ ನಿವಾಸಿ. ಅವರು 2018 ರಲ್ಲಿ ಮಧ್ಯಪ್ರದೇಶ ಪರ T20 ಪದಾರ್ಪಣೆ ಮಾಡಿದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲು ಅವರ ಕೊನೆಯ T20 ಪಂದ್ಯವು 2019 ರಲ್ಲಿ ಆಗಿತ್ತು. ಅವರು 2019 ರಲ್ಲಿ ಮಧ್ಯ ಪ್ರದೇಶಕ್ಕಾಗಿ ಕೇವಲ ಒಂದು ಲಿಸ್ಟ್ ಎ ಪಂದ್ಯವನ್ನು ಆಡಿದ್ದರು. ಮತ್ತು ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರಲಿಲ್ಲ. 11 ಟಿ20 ಪಂದ್ಯಗಳ ವೃತ್ತಿಜೀವನದಲ್ಲಿ ಅವರು 181.98 ಸ್ಟ್ರೈಕ್ ರೇಟ್‌ನಲ್ಲಿ 293 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ.

ಅಶುತೋಷ್‌ ಶರ್ಮಾ ಇದಕ್ಕೂ ಮೊದಲು ಇವರು ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಬಾರಿಸಿ ಅಬ್ಬರಿಸಿ ಸುದ್ದಿಯಲ್ಲಿದ್ದರು. ಅವರು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದರು. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಕೆಲವೇ ದಿನಗಳ ಹಿಂದೆ ನೇಪಾಳದ ದೀಪೇಂದ್ರ ಸಿಂಗ್ ಐರಿ ಯುವಿ ಅವರ ಅಂತಾರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. 25ರ ಹರೆಯದ ಬ್ಯಾಟ್ಸ್ ಮನ್ ಅಶುತೋಷ್‌ ವೇಗವಾಗಿ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Ashutosh Sharma s Stellar Performance Can t Seal Win for Punjab Kings Despite Breakout Season

ರೈಲ್ವೇಸ್‌ ಪರ ಬ್ಯಾಟ್ ಮಾಡಿದ ಅಶುತೋಷ್ ಶರ್ಮಾ ಕೇವಲ 11 ಎಸೆತಗಳಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ವೇಳೆ ರಾಂಚಿಯಲ್ಲಿ ನಡೆದ ಅರುಣಾಚಲ ಪ್ರದೇಶ ವಿರುದ್ಧದ ಸಿ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಲಾಗಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅಶುತೋಷ್ 12 ಎಸೆತಗಳಲ್ಲಿ 53 ರನ್‌ಗಳ ಇನಿಂಗ್ಸ್‌ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+