ವಿರಾಟ್ ಕೊಹ್ಲಿ 2ನೇ ಮಗು ಹುಟ್ಟುವುದು ಭಾರತದಲ್ಲಿ ಅಲ್ಲ, ಈ ದೇಶದಲ್ಲಿ!
ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಅಂತಾನೆ ಹೆಸರು ಗಳಿಸಿರುವ ವಿರಾಟ್ ಕೊಹ್ಲಿಗೆ ಕನ್ನಡದ ನೆಲ ಅಂದ್ರೆ ಅಚ್ಚುಮೆಚ್ಚು. ವಿರಾಟ್ ಕೊಹ್ಲಿ ಕೂಡ ಮುಕ್ತವಾಗಿ ಕನ್ನಡಿಗರ ಬಗ್ಗೆ ಹೆಮ್ಮೆಯನ್ನ ವ್ಯಕ್ತಪಡಿಸುತ್ತಾರೆ. ತೊದಲು ಕನ್ನಡ ಮಾತನಾಡುವ ಕೊಹ್ಲಿಗೆ ಕನ್ನಡಿಗರು ಫಿದಾ ಆಗಿದ್ದು ಬೆಂಗಳೂರು ತಂಡಕ್ಕೆ ಸುಮಾರು 15 ವರ್ಷದಿಂದ ಕೊಹ್ಲಿ ದುಡಿಯುತ್ತಿದ್ದಾರೆ. ಈ ಕೊಹ್ಲಿ, ತಮ್ಮ 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಹಾಗಾದ್ರೆ ಕೊಹ್ಲಿ ಅವರ 2ನೇ ಮಗು ಹುಟ್ಟುವುದು ಯಾವ ದೇಶದಲ್ಲಿ ಗೊತ್ತಾ?
ಕಿಂಗ್ ವಿರಾಟ್ ಕೊಹ್ಲಿ ಉತ್ತಮ ಕ್ರಿಕೆಟಿಗ ಮಾತ್ರವಲ್ಲದೆ ಅತ್ಯುತ್ತಮ ಸಂಸಾರಸ್ಥ ಕೂಡ ಹೌದು. ಯಾಕೆಂದರೆ ಪ್ರೀತಿಸಿ ಮದುವೆಯಾದ ಅನುಷ್ಕಾ ಅವರನ್ನು ಕಣ್ಣುಗಳಂತೆ ನೋಡಿಕೊಳ್ಳುತ್ತಾರೆ. ಬಿಡುವೇ ಇಲ್ಲದ ಕ್ರಿಕೆಟ್ ಜೀವನದಲ್ಲಿ ಕುಟುಂಬಕ್ಕೆ ಸಾಕಷ್ಟು ಸಮಯವನ್ನ ನೀಡುತ್ತಾರೆ. ಹೀಗೆ ಇಬ್ಬರ ಲವ್‌ಗೆ ಅಭಿಮಾನಿ ಬಳಗ ಫಿದಾ ಆಗಿದೆ. ಈಗ ಇವರ ಪ್ರೀತಿಗೆ ಸಾಕ್ಷಿಯಾಗಿ 2ನೇ ಮಗು ಕೂಡ ಜನಿಸುತ್ತಿದೆ. ಆದ್ರೆ ಕೊಹ್ಲಿ ಅವರ 2ನೇ ಮಗು ಜನಿಸುತ್ತಿರುವುದು ಭಾರತದಲ್ಲಿ ಅಲ್ಲ, ಹಾಗಾದರೆ ಯಾವ ದೇಶದಲ್ಲಿ ಗೊತ್ತಾ..? ಕೊಹ್ಲಿಗೆ ಹುಟ್ಟುವುದು ಗಂಡಾ ಅಥವಾ ಹೆಣ್ಣು ಮಗುವಾ, ಎಂಬ ಚರ್ಚೆ ಶುರುವಾಗಿದ್ದು ಯಾಕೆ? ಬನ್ನಿ ತಿಳಿಯೋಣ, ಮುಂದೆ ಓದಿ.

ಈ ದೇಶದಲ್ಲಿ ಕೊಹ್ಲಿ & ಅನುಷ್ಕಾ!
ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ದಂಪತಿ ಕ್ರಿಕೆಟ್ ಜಗತ್ತಿಗೆ ಮಾತ್ರವಲ್ಲ ಸಿನಿಮಾ ಜಗತ್ತಿಗೂ ಮಾದರಿ ಆಗಿದ್ದಾರೆ. ಹೀಗಿದ್ದಾಗಲೇ ಕೆಲವು ತಿಂಗಳಿಂದ ಇಬ್ಬರ ಸಂಸಾರದ ವಿಚಾರದಲ್ಲಿ, ಒಂದು ದೊಡ್ಡ ಸುದ್ದಿ ಹರಿದಾಡಿತ್ತು. ಅದು ಏನೆಂದರೆ ನಟಿ ಅನುಷ್ಕಾ ಶರ್ಮಾ ಹಾಗೂ, ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಅಂತಾ. ಇದೀಗ ಆ ಮಾತು ನಿಜವಾಗುವ ಸಮಯ ಬಂದಿದೆ. ಯಾಕಂದ್ರೆ ಇದೀಗ ಅನುಷ್ಕಾ ಶರ್ಮಾ ಅವರು ಲಂಡನ್‌ನಲ್ಲಿ ಇದ್ದಾರಂತೆ. ಹಾಗೇ ವಿರಾಟ್ ಕೊಹ್ಲಿ ಕೂಡ, ತಮ್ಮ ಪತ್ನಿ ಜೊತೆ ಇದ್ದು ಲಂಡನ್‌ನಲ್ಲೇ ಅವರಿಗೆ 2ನೇ ಮಗು ಜನಿಸುವ ನಿರೀಕ್ಷೆ ಇದೆ.
ಮೇಡ್ ಫಾರ್ ಈಚ್ ಅದರ್!
ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ನಡುವಿನ ಬಾಂಡಿಂಗ್ ಅತ್ಯುತ್ತಮ ಇಬ್ಬರು ಒಬ್ಬರ ಬಗ್ಗೆ ಮತ್ತೊಬ್ಬರು ತರ್ಲೆ ಮಾಡುತ್ತಾ ಎಂಜಾಯ್ ಮಾಡ್ತಾರೆ. ಹೀಗಿದ್ರೂ ಕೊಹ್ಲಿ ಆಗಲಿ, ಅನುಷ್ಕಾ ಆಗಲಿ ಕೋಪ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಮತ್ತು ಆಗ್ರೆಸ್ಸಿವ್ ವರ್ತನೆ ಬಗ್ಗೆ ಆಗಾಗ ಅನುಷ್ಕಾ ಮಾತನಾಡುತ್ತಾರೆ. ಇದಿಷ್ಟೂ ಕೊಹ್ಲಿ, ಅನುಷ್ಕಾ ನಡುವಿನ ಬಾಂಡಿಂಗ್‌ಗೆ ಉದಾಹರಣೆ. ಹೀಗಿದ್ದಾಗ ತಮ್ಮ ಹೆಂಡತಿಯ ಹೆರಿಗೆ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ಗೆ ರಜೆ ಹಾಕಿ, ಪತ್ನಿಯ ಆರೈಕೆಗೆ ಲಂಡನ್‌ನಲ್ಲಿ ಇದ್ದಾರೆ.
2008ರಲ್ಲಿ ಕ್ರಿಕೆಟ್ ಜಗತ್ತಿಗೆ ಎಂಟ್ರಿ
ಕೊಹ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದು 2008ರಲ್ಲಿ. ಅಲ್ಲಿಂದ ಇಲ್ಲಿಯ ತನಕ ಕೊಹ್ಲಿಯ ಹೆಸರಲ್ಲಿ ನೂರಾರು ದಾಖಲೆ ಸೇರ್ಪಡೆ ಆಗಿವೆ. ಹೀಗೆ ಕ್ರಿಕೆಟ್ ಲೋಕದಲ್ಲಿ ಕೊಹ್ಲಿ ಇದೀಗ ಶೈನಿಂಗ್ ಸ್ಟಾರ್. ಇಂತಹ ನಕ್ಷತ್ರ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ದೊಡ್ಡ ಹೆಸರನ್ನು ಗಳಿಸಿ ಕೊಡಲು ಶ್ರಮಿಸುತ್ತಿದ್ದಾರೆ. 2023ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಕೂಡ ಕೊಹ್ಲಿ ಬ್ಯಾಟಿಂಗ್ ಇಡೀ ಜಗತ್ತಿಗೆ ಇಷ್ಟವಾಗಿತ್ತು. ಇಂತಿಪ್ಪ ಕೊಹ್ಲಿ ಇದೀಗ ತಮ್ಮ ಮತ್ತೊಂದು ಮಗುವಿಗಾಗಿ, ಎಲ್ಲಾ ಅಪ್ಪಂದಿರು ಕಾಯುವಂತೆ ಆಸ್ಪತ್ರೆಯಲ್ಲಿ ಕಾಯುತ್ತಿದ್ದಾರೆ.

ಒಟ್ನಲ್ಲಿ ಇನ್ನೇನು ಕೆಲವೇ ದಿನದಲ್ಲಿ ವಿರಾಟ್ ಕೊಹ್ಲಿ ಅವರ ಸಂಸಾರಕ್ಕೆ ಹೊಸ ಸದಸ್ಯನ ಆಗಮನ ಆಗುವ ನಿರೀಕ್ಷೆ ಇದೆ. ಅದರಲ್ಲೂ ವಿರಾಟ್ ಕೊಹ್ಲಿ ಅವರಿಗೆ ಸಾಲು ಸಾಲು ಕ್ರಿಕೆಟ್ ಸರಣಿ ಇರುವ ಸಮಯದಲ್ಲೇ ಮತ್ತೊಂದು ಮಗು ಜನಿಸುತ್ತಿದೆ. ಹೀಗಾಗಿ ಕೊಹ್ಲಿ ಕೂಡ ಈ ಎಲ್ಲಾ ಬ್ಯುಸಿ ಶೆಡ್ಯೂಲ್ ನಡುವೆ, ಬಿಡುವು ಮಾಡಿಕೊಂಡು ತಮ್ಮ ಸಂಸಾರಕ್ಕೆ ಅಂತಾನೇ ಸಮಯ ನೀಡಿದ್ದಾರೆ.












Click it and Unblock the Notifications