Virat Kohli - Anushka sharma: ಟ್ರೋಫಿ ಗೆಲ್ಲುತ್ತಿದ್ದತೆ ಚೇಸಿಂಗ್ ಸ್ಟಾರ್ ಭಾವುಕ: ವಿರಾಟ್ ತಬ್ಬಿ ಕಣ್ಣಿರು ಒರೆಸಿದ ಅನುಷ್ಕಾ
ಅಹಮದಾಬಾ, ಜೂನ್ 04: ಅದು 2008 ಆಗಿನ್ನು ವಿರಾಟ್ ಕೊಹ್ಲಿ ಮುಖದಲ್ಲಿ ನೆಟ್ಟಗೆ ಮೀಸೆಯೂ ಚಿಗುರಿರಲಿಲ್ಲ. ಅದಗಾಲೇ ಮಲೇಷ್ಯಾದಲ್ಲಿ ವಿರಾಟ್ ಅಂಡರ್ 19 ವಿಶ್ವಕಪ್ ಮುನ್ನಡೆಸಿ ಯಶ ಕಂಡಿದ್ದರು. ಅವರು ಈ ದೊಡ್ಡ ಸಾಧನೆಗೆ ಐಪಿಎಲ್ ಎನ್ನುವ ವೇದಿಕೆಯಲ್ಲಿ ಆಡುವ ಅವಕಾಶವೂ ಲಭಿಸಿತು. ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಕ್ರಿಕೆಟ್ ವ್ಯಾಕರಣಗಳನ್ನು ಕಲಿತ ವಿರಾಟ್‌ಗೆ, ಬೆಂಗಳೂರು ನಗರದ ಸಾಂಗತ್ಯ ಬೆಳೆಯಿತು. ಆಗಲೇ ಹೊಸ ಕನಸಿನ ಅಧ್ಯಾಯ ಆರಂಭವಾಗಿದ್ದು. 19 ವರ್ಷದ ಪೋರನ ಹೆಗಲ ಮೇಲೆ ಕೋಟ್ಯಾಂತರ ಅಭಿಮಾನಿಗಳಿಗೆ ಭರವಸೆಯ ಭಾರ ಇತ್ತು. ಆದರೆ ಅಭಿಮಾನಿಗಳ ಈ ಪ್ರೀತಿಗೆ ತಾನು ಏನು ನೀಡಲಿಲ್ಲ ಎಂಬ ಕೊರಗು ಮಾತ್ರ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರದ್ದಾಗಿತ್ತು.
ವಿರಾಟ್ ಕೊಹ್ಲಿ ಅಭಿಮಾನಿಗಳಗಾಗಿ ಏನಾದ್ರೂ ಸ್ಪೆಷಲ್ ಗಿಫ್ಟ್ ನೀಡಲೇ ಬೇಕು ಎಂದು ದಶಕದಿಂದ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈ ಕನಸು ನನಸಾಗಿದ್ದು, ಗುಜರಾತ್‌ನ ಅಹಮದಾಬಾದ್ ಮೈದಾನದಲ್ಲಿ. ತನ್ನ ಎರಡನೇ ತವರು, ತನ್ನ ಆಟವನ್ನು ಪ್ರೋತ್ಸಾಹಿಸಿದ ನಗರ ಎಂಬ ಹೆಮ್ಮೆ ವಿರಾಟ್‌ಗೂ ಹೆಚ್ಚಿದೆ. ಹೀಗಾಗಿ ಅದೆಷ್ಟೋ ಆಫರ್‌ಗಳು ಬಂದ್ರೂ ಡೋಂಟ್ ಕೇರ್ ಎಂದ ವಿರಾಟ್, ಆರ್‌ಸಿಬಿ ಜೊತೆ ಸತತ 18 ವರ್ಷ ಕಾಣಿಸಿಕೊಂಡರು. ಕೊನೆಗೂ ವಿರಾಟ್ ಅಂದುಕೊಂಡಿದ್ದ ಕನಸು ನನಸಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 17 ವರ್ಷದ ಕನಸು ನನಸಾಗುತ್ತಿರುವುದನ್ನು ಕಂಡು, ಅಗ್ರೇಸಿವ್ ಬ್ಯಾಟರ್‌ಗೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಭಿಮಾನಿಗಳ ಅಭಿಮಾನದ ಭಾರವನ್ನು ವಿರಾಟ್ ಭಾವುಕರಾಗಿ ಹೊರ ಹಾಕಿದ್ದರು. ಈ ಒಂದು ಆನಂದಭಾಷ್ಪವನ್ನು ಕಣ್ಣು ತುಂಬಿಕೊಳ್ಳಲೇ, ಆರ್‌ಸಿಬಿ ತಂಡದ ಕೋಟ್ಯಾಂತರ ಅಭಿಮಾನಿಗಳು 17 ವರ್ಷ ತಪಸ್ಸು ಮಾಡಿದ್ದರು.

ಬರೋಬ್ಬರಿ 18 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಎತ್ತಿ ಹಿಡಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ ಇತಿಹಾಸ ಬರೆದಿದೆ. ಆರ್‌ಸಿಬಿ ಅಭಿಮಾನಿಗಳು ಐತಿಹಾಸಿಕ ಗೆಲುವಿನ ಗುಂಗಿನಿಂದ ಹೊರಬರಲು ಇನಷ್ಟು ದಿನಗಳೇ ಬೇಕೋ ಗೊತ್ತಿಲ್ಲ. 18 ವರ್ಷಗಳ ಅಭಿಮಾನಿಗಳ ಕನಸನ್ನು ಕೊನೆಗೂ ನನಸು ಮಾಡುವಲ್ಲಿ ನಮ್ಮ ಹೆಮ್ಮೆಯ ಆರ್‌ಸಿಬಿ ಆಟಗಾರರು ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಫೈನಲ್ ಪಂದ್ಯದ ಬಳಿಕ, ವಿರಾಟ್ ಕೊಹ್ಲಿ ಅವರು ಓಡಿಬಂದು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದು, ಅನುಷ್ಕಾ ಶರ್ಮಾ ಅವರು ಪತಿಯ ಕಣ್ಣೀರು ಒರೆಸಿದ ಸುಂದರ ಕ್ಷಣಗಳು ವೈರಲ್ ಆಗಿವೆ.
ಕೊನೆಯ ಎಸೆತ ಮುಗಿದ ನಂತರ ವಿರಾಟ್ ಕೊಹ್ಲಿ ಅವರ ಸುತ್ತ ತಂಡದ ಸಹ ಆಟಗಾರರು ಭಾವುಕರಾಗಿ ಅಪ್ಪಿಕೊಂಡು ಸಂಭ್ರಮಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಪತಿ ಮತ್ತು ಆರ್‌ಸಿಬಿಯನ್ನು ಬೆಂಬಲಿಸಲು ಕ್ರೀಡಾಂಗಣದೊಳಗೆ ಹಾಜರಿದ್ದರು. ಈ ವೇಳೆ ಅನುಷ್ಕಾ ಶರ್ಮಾ ಅವರು ಓಡಿಬಂದು ವಿರಾಟ್ ಕೊಹ್ಲಿ ಅಪ್ಪಿಕೊಂಡರು ಈ ವೇಳೆ ವಿರಾಟ್ ಕೊಹ್ಲಿ ಬಾವುಕರಾಗಿ ಕಣ್ಣೀರು ಹಾಕಿದರು. ಈ ವೇಳೆ ಅನುಷ್ಕಾ ಶರ್ಮಾ ತಮ್ಮ ಪತಿಯ ಕಣ್ಣೀರು ಒರೆಸಿದರು. ಕೆಲವು ಸೆಕೆಂಡುಗಳ ಕಾಲ ಪರಸ್ಪರ ಅಪ್ಪಿಕೊಂಡ ನಂತರ, ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಅವರ ಹಣೆಗೆ ಮುತ್ತು ನೀಡಿದರು. ಈ ದೃಶ್ಯವನ್ನು ಕಂಡ ಅಭಿಮಾನಿಗಳು, ವಿರುಷ್ಕಾ ಜೋಡಿಯ ಬಾಂಧವ್ಯವನ್ನು ಅಭಿಮಾನಿಗಳು ಕೊಂಡಾಡಿದರು.












Click it and Unblock the Notifications