ಬೆಂಗಳೂರಿನ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್‌ಗಿಂತಲೂ ದೊಡ್ಡ ಸಿಕ್ಸರ್ ಬಾರಿಸಿದ ಆಂಡ್ರಿ ರಸೆಲ್
ಆಂಡ್ರಿ ರಸೆಲ್... ಈ ಹೆಸರು ಕೇಳಿದರೆ ಸಾಕು ಅವರು ಆಡುವ ಭಯಾನಕ ಬ್ಯಾಟಿಂಗ್ ಕಣ್ಣು ಮುಂದೆ ಬರುತ್ತದೆ. ಟಿ20 ಕ್ರಿಕೆಟ್‌ನ ಬ್ಯಾಟಿಂಗ್‌ಗೆ ಹೊಸ ಭಾಷ್ಯವನ್ನೇ ಬರೆದ ಆಟಗಾರ. ಬಿಗ್ ಹಿಟ್ಟಿಂಗ್ ಸಿಕ್ಸರ್‌ಗಳ ಮೂಲಕ ಸುದ್ದಿಯಲ್ಲಿರುವ ರಸೇಲ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈಗತಾನೇ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಮುಗಿದಿದೆ. ಟೀಮ್ ಇಂಡಿಯಾ ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈಗ ವಿಶ್ವದ ಹಲವೆಡೆ ಟಿ20 ಲೀಗ್‌ಗಳು ಆರಂಭವಾಗಿವೆ. ಈ ಲೀಗ್‌ನಲ್ಲಿ ವೆಸ್ಟ್‌ಇಂಡೀಸ್‌ನ ದೈತ್ಯ ಪ್ರತಿಭೆ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ರಸೆಲ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಅಮೆರಿಕದಲ್ಲಿ ಈಗ ಮೇಜರ್ ಕ್ರಿಕೆಟ್ ಲೀಗ್‌ನ (ಎಂಎಲ್‌ಸಿ) ಎರಡನೇ ಸೀಸನ್ ನೆಯುತ್ತಿದ್ದು, ವಿಶ್ವದ ಸ್ಟಾರ್ ಆಟಗಾರರು ಈ ಲೀಗ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಈ ಲೀಗ್‌ನಲ್ಲಿ, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ ನಡುವೆ ಪಂದ್ಯವನ್ನು ನಡೆಯಿತು. ಇದರಲ್ಲಿ ಲಾಸ್ ಏಂಜಲೀಸ್ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ ಪಾಕಿಸ್ತಾನಿ ಬೌಲರ್‌ನ ಬಾಲ್‌ನಲ್ಲಿ ಬಾರಿಸಿದ ಸಿಕ್ಸರ್ ವಿಶ್ವದಲ್ಲೇ ಭಾರೀ ಸದ್ದು ಮಾಡುತ್ತಿದೆ. ಈ ಸಿಕ್ಸ್ ಎಷ್ಟು ಎತ್ತರಕ್ಕೆ ಹೋಯಿತು ಎಂದರೆ ಈ ಹಿಂದೆ ಯಾವುದೇ ಸಿಕ್ಸ್ ಅಷ್ಟು ಎತ್ತರಕ್ಕೆ ಹೋಗಿರಲಿಲ್ಲ. ಆಂಡ್ರೆ ರಸೆಲ್ ಅವರ ಈ ಸಿಕ್ಸರ್ ಕ್ರೀಡಾಂಗಣದ ಹೊರಗೆ ಬಿದ್ದಿತು.
ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಜುಲೈ 7 ರಂದು ಮೇಜರ್ ಕ್ರಿಕೆಟ್ ಲೀಗ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಬೌಲಿಂಗ್ ನಡೆಸಿದರು. ಆಂಡ್ರೆ ರಸೆಲ್ 30 ರನ್ ಗಳಿಸಿದ್ದಾಗ ಹ್ಯಾರಿಸ್ ರೌಫ್ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ ಅನ್ನು ಕ್ರಿಕೆಟ್ ಜಗತ್ತಿನ ಅತ್ಯಧಿಕ ಸಿಕ್ಸರ್ ಎಂದು ಪರಿಗಣಿಸಲಾಗಿದೆ. ಆಂಡ್ರೆ ರಸೆಲ್ ಅವರ ಈ ಸಿಕ್ಸ್ 351 ಅಡಿ ಎತ್ತರವನ್ನು ತಲುಪಿತು ಮತ್ತು 107 ಮೀಟರ್ ದೂರವನ್ನು ಕ್ರಮಿಸಿತು. ರಸೆಲ್ ಅವರ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಸೇರಿವೆ. ಮತ್ತು 25 ಎಸೆತಗಳಲ್ಲಿ 40 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದರು.

ತಂಡಕ್ಕೆ ಹಿನ್ನಡೆ
ಆಂಡ್ರೆ ರಸೆಲ್ ಖಂಡಿತವಾಗಿಯೂ ಗಗನಚುಂಬಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕಾಗಿ ಅದ್ಭುತ ಕೊಡುಗೆ ನೀಡಿದರು. ಆದರೆ ಈ ಪಂದ್ಯದಲ್ಲಿ ಅವರು ಪ್ರತಿನಿಧಿಸುವ ತಂಡವು ಸೋಲನ್ನು ಎದುರಿಸಬೇಕಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತ್ತು. ಈ ಗುರಿಯನ್ನು ಸ್ಯಾಮ್ ಫ್ರಾನ್ಸಿಸ್ಕೊ ಯುನಿಕಾರ್ನ್ ಕೇವಲ 15.2 ಓವರ್‌ಗಳಲ್ಲಿ ಮುಟ್ಟಿ ಬೀಗಿತು.
ಆಂಡ್ರಿ ರಸೆಲ್ ಬಾರಿಸಿದ ಸಿಕ್ಸರ್ ಬೆಂಗಳೂರಿನಲ್ಲಿರುವ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್‌ಗಿಂತಲೂ ದೊಡ್ಡದು. ಬೆಂಗಳೂರು ಈ ಕಟ್ಟಡ 348 ಅಡಿ ಎತ್ತರ ಇದ್ದು, ರಸೆಲ್ ಬಾರಿಸಿದ ಸಿಕ್ಸರ್ 351 ಅಡಿ ಎತ್ತರ ಹೋಗಿದೆ.
ಅತಿ ಹೆಚ್ಚು ದೂರ ಕ್ರಮಿಸುರುವ ಸಿಕ್ಸರ್‌ಗಳ ಪಟ್ಟಿ
| ಕ್ರಮ ಸಂಖ್ಯೆ | ಆಟಗಾರ | ದೂರ (ಮೀಟರ) | ವಿರುದ್ಧ |
| 1 | ಶಾಹೀದ್ ಆಫ್ರಿದಿ | 153 | ದಕ್ಷಿಣ ಆಫ್ರಿಕಾ |
| 2 | ಬ್ರೇಟ್ ಲೀ | 143 | ವೆಸ್ಟ್ ಇಂಡೀಸ್ |
| 3 | ಮಾರ್ಟಿನ್ ಗಪ್ಟಿಲ್ | 127 | ದಕ್ಷಿಣ ಆಫ್ರಿಕಾ |
| 4 | ಲಿಯಾಮ್ ಲಿವಿಂಗ್‌ಸ್ಟೋನ್ | 122 | ಪಾಕಿಸ್ತಾನ |
| 5 | ಕೋರಿ ಆಂಡರ್ಸನ್ | 122 | ಭಾರತ |












Click it and Unblock the Notifications