Ajinkya Rahane: ವೈಭವ್‌ ಸೂರ್ಯವಂಶಿ ಕೈಬಿಟ್ಟು, ಅವರಿಗೆ ಅವಕಾಶ ನೀಡಿ: ಅಜಿಂಕ್ಯ ರಹಾನೆ ಹೇಳಿಕೆ ಹಿಂದಿದೆ ಮಹತ್ವದ ಸಂದೇಶ

Ajinkya Rahane: ಭಾರತೀಯ ಟಿ20 ಕ್ರಿಕೆಟ್ ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳ ಆಯ್ಕೆ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದೆ. ಯುವ ಪ್ರತಿಭೆ 15 ವೈಭವ್ ಸೂರ್ಯವಂಶಿ ಆಗಮನ ಹಾಗೂ ಟಿ20 ವಿಶ್ವಕಪ್‌ ಹೀರೋ ಸಂಜು ಸ್ಯಾಮ್ಸನ್‌ ಪಾರ್ಮ್‌ ಸಮಸ್ಯೆ ಆಯ್ಕೆ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ವಿಚಾರವಾಗಿ ಮಾತನಾಡಿದ ಅಜಿಂಕ್ಯ ರಹಾನೆ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಆಗಮನ ಹಾಗೂ ಸಂಜು ಸ್ಯಾಮ್ಸನ್ ಅವರ ನಿರಂತರ ಫಾರ್ಮ್‌ ಕೊರತೆ ತಂಡದ ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವಯೇ ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಮ್ಯಾನೇಜ್‌ಮೆಂಟ್‌ಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದು, ಸಂಜು ಸ್ಯಾಮ್ಸನ್ ಅವರಂತಹ ಪಂದ್ಯ ಗೆಲ್ಲಿಸಿಕೊಡುವ ಆಟಗಾರನನ್ನು ಕೈಬಿಡಬೇಡಿ ಎಂದು ಮನವಿ ಮಾಡಿದ್ದಾರೆ.

Ajinkya Rahane Advice to Team India Head Coach Gambhir on Sanju Samson and Vaibhav Sooryavanshi

ಅಜಿಂಕ್ಯ ರಹಾನೆ ಮಹತ್ವದ ಹೇಳಿಕೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ ಅವರು, ಭಾರತೀಯ ತಂಡವು ಸಂಜು ಸ್ಯಾಮ್ಸನ್ ಅವರಿಗೆ ಮತ್ತಷ್ಟು ಅವಕಾಶಗಳನ್ನು ನೀಡಬೇಕು ಎಂದು ಹೇಳಿದ್ದಾರೆ. 'ಸಂಜು ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ (ಮ್ಯಾನ್ ಆಫ್ ದಿ ಸರಣಿ) ಪ್ರಶಸ್ತಿ ಗೆದ್ದು ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಕೆಲವೇ ಕೆಲವು ಇನಿಂಗ್ಸ್‌ಗಳಲ್ಲಿ ವಿಫಲರಾದ ತಕ್ಷಣವೇ ಅವರನ್ನು ತಂಡದಿಂದ ಹೊರಗಿಡುವುದು ಸರಿಯಲ್ಲ. ಅವರು ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಶಕ್ತಿಶಾಲಿ ಬ್ಯಾಟರ್,' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಟಾಪ್-3 ಬ್ಯಾಟಿಂಗ್ ಕ್ರಮಾಂಕವೇ ಮುಂದುವರಿಯಬೇಕು ಎಂಬುದು ರಹಾನೆ ಅವರ ಅಭಿಪ್ರಾಯ. ಅಂದರೆ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರೇ ಅಗ್ರಸ್ಥಾನದಲ್ಲಿ ಬ್ಯಾಟ್ ಮಾಡುವುದು ತಂಡದ ಸಮತೋಲನಕ್ಕೆ ಸೂಕ್ತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ವೈಭವ್ ವಿಷಯದಲ್ಲಿ ತರಾತುರಿ ಬೇಡ'

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಮುಕ್ತವಾಗಿ ಹೊಗಳಿದ ರಹಾನೆ, ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದಾರೆ. 'ವೈಭವ್ ಅವರಿಗೆ ಅವಕಾಶಗಳು ಖಂಡಿತ ಸಿಗಲಿವೆ. ಪ್ರಸ್ತುತ ಅವರು ತಮಗೆ ಸಿಕ್ಕ ಚಾನ್ಸ್‌ಗಳಲ್ಲಿ ತಮ್ಮ ಸಹಜ ಆಟವನ್ನು ಆಡಬೇಕು,' ಎಂದು ಸಲಹೆ ನೀಡಿದ್ದಾರೆ.

ಅಂತಾರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾನಸಿಕವಾಗಿ ಸ್ಥಿರವಾಗಿರುವುದು ಮುಖ್ಯ. ಮೈದಾನದ ಹೊರಗಿನ ಒತ್ತಡಗಳನ್ನು ನಿರ್ವಹಿಸುವುದು ಪ್ರಮುಖ ಸವಾಲಾಗಿರುತ್ತದೆ. ಆದ್ದರಿಂದ ವೈಭವ್ ಅವರನ್ನು ತರಾತುರಿಯಲ್ಲಿ ಆಡಿಸಿ ಅವರ ಮೇಲೆ ಹೆಚ್ಚುವರಿ ಒತ್ತಡ ಹೇರುವ ಬದಲು, ಅನುಭವಿ ಸಂಜು ಸ್ಯಾಮ್ಸನ್‌ಗೆ ಮೊದಲ ಆದ್ಯತೆ ನೀಡುವುದು ಸೂಕ್ತ ಎಂದು ಹೇಳಿದ್ದಾರೆ.

ಮ್ಯಾನೇಜ್‌ಮೆಂಟ್ ಮುಂದಿರುವ ಪ್ರಮುಖ ಸವಾಲು

ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಅವರಿಗೆ ಈಗ ಕಠಿಣ ಪರಿಸ್ಥಿತಿ ಎದುರಾಗಿದೆ. ಒಂದು ಕಡೆ ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್-ವಿನ್ನರ್ ಆಗಿದ್ದ ಸಂಜು ಸ್ಯಾಮ್ಸನ್ ಅವರ ಅನುಭವ, ಇನ್ನೊಂದು ಕಡೆ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ.

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಭಾರತೀಯ ತಂಡದ ಬ್ಯಾಟಿಂಗ್ ಸಂಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು. ಸಂಜು ಸ್ಯಾಮ್ಸನ್ ಅವರನ್ನು ಕೆಲವು ಪಂದ್ಯಗಳಿಂದ ಹೊರಗಿಟ್ಟು ವೈಭವ್‌ ಸೂರ್ಯವಂಶಿ ಅವರಿಗೆ ಅವಕಾಶ ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ, ಮುಂಬರುವ ಸರಣಿಗಳಲ್ಲಿ ಗಂಭೀರ್ ಯಾರನ್ನು ನಂಬಿ ಕಣಕ್ಕಿಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಅಜಿಂಕ್ಯ ರಹಾನೆ ಅವರ ಮಾತುಗಳು ಭಾರತೀಯ ಕ್ರಿಕೆಟ್ ಮ್ಯಾನೇಜ್‌ಮೆಂಟ್‌ಗೆ ಸ್ಪಷ್ಟ ಸೂಚನೆ ನೀಡುವಂತಿವೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಎಷ್ಟು ಮುಖ್ಯವೋ, ವಿಶ್ವಕಪ್ ಗೆದ್ದುಕೊಟ್ಟ ಅನುಭವಿ ಆಟಗಾರರ ಆತ್ಮವಿಶ್ವಾಸವನ್ನು ಕಾಯ್ದುಕೊಳ್ಳುವುದೂ ಅಷ್ಟೇ ಅಗತ್ಯ. ಸಂಜು ಸ್ಯಾಮ್ಸನ್ ಅವರಿಗೆ ನಿರಂತರ ಬೆಂಬಲ ಸಿಗುತ್ತದೆಯೇ ಅಥವಾ ವೈಭವ್ ಸೂರ್ಯವಂಶಿ ಅವರ ಆರಂಭಿಕ ಸ್ಥಾನ ಖಾಯಂ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ವೈಭವ್‌ಗೆ ಇನ್ನೂ ತುಂಬಾ ಅವಕಾಶಗಳು ಸಿಗುತ್ತವೆ. ಸಂಜು ಅವರನ್ನು ಕಣಕ್ಕಿಳಿಸುವುದು ಉತ್ತಮ ಎಂಬುದೇ ರಹಾನೆ ಅವರ ಹೇಳಿಕೆಯ ಹಿಂದಿನ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+