ಸೋಲು + ಒಳ್ಳೆಯತನ = ಕ್ರಿಕೆಟ್ ಲೋಕದ ಮನಸ್ಸು ಗೆದ್ದ ಅಫ್ಘಾನಿಸ್ತಾನ ತಂಡ!

2023ರ ಐಸಿಸಿ ಏಕದಿನ ವಿಶ್ವಕಪ್‌ನ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಸೋಲು ಕಾಣುವ ಮೂಲಕ, ತನ್ನ ಕೊನೇ ಪಂದ್ಯ ಮುಗಿಸಿದೆ. ಹೀಗಾಗಿ ಸೆಮಿಫೈನಲ್ ತಲುಪುವ ಅಫ್ಘಾನಿಸ್ತಾನ ತಂಡದ ಕನಸು ಕನಸಾಗಿಯೇ ಉಳಿದು ಹೋಗಿದೆ. ಇಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ, 5 ವಿಕೆಟ್ ಅಂತರದ ಸೋಲು ಕಂಡಿದೆ ಅಫ್ಘಾನ್ ಕ್ರಿಕೆಟ್ ತಂಡ.

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ, ಬಲಶಾಲಿ ತಂಡಗಳನ್ನೇ ಬಗ್ಗುಬಡಿದಿದ್ದ ಅಫ್ಘಾನಿಸ್ತಾನ. ಇಂದು ಟೂರ್ನಿಯಿಂದ ಹೊರಗೆ ಬಿದ್ದಿದೆ. ಆದರೆ ಆಡಿದ ಅಷ್ಟೂ ಪಂದ್ಯಗಳಲ್ಲಿ ಎದುರಾಳಿಗಳನ್ನ ಕಾಡಿ ಕ್ರಿಕೆಟ್ ಅಭಿಮಾನಿ ಬಳಗದ ಗಮನ ಸೆಳೆದಿತ್ತು ಅಫ್ಘಾನಿಸ್ತಾನ ಕ್ರಿಕೆಟ್ ಟೀಂ. ಅಷ್ಟಕ್ಕೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಇಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿನ 42ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣೆಸಾಡಿದವು. ಸೌತ್ ಆಫ್ರಿಕಾ ತಂಡಕ್ಕೆ ಈ ಪಂದ್ಯ ಸುಲಭದ ತುತ್ತು ಎನ್ನಲಾಗಿತ್ತು, ಆದರೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಭಾರಿ ಪೈಪೋಟಿ ನೀಡಿ ಸೋತು ಹೋಯಿತು.

afghanistan-team-lost-their-last-match

5 ವಿಕೆಟ್ ಅಂತರದ ಸೋಲು

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ ಅಜ್ಮತುಲ್ಲಾ ಒಮರ್ಜಾಯ್ ಅಮೋಘ ಅರ್ಧ ಶತಕದ ನೆರವಿನಿಂದ, 50 ಓವರ್ ಪೂರ್ತಿ ಆಡಿ 244 ರನ್‌ಗಳಿಗೆ ಆಲೌಟ್ ಆಗಿ ಗಮನ ಸೆಳೆದಿತ್ತು. ಹಾಗೇ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಬೌಲಿಂಗ್ ಮಾಡುವ ನಿರೀಕ್ಷೆ ಕೂಡ ಹುಟ್ಟುಹಾಕಿತ್ತು ಅಫ್ಘಾನ್. 245 ರನ್‌ ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಮಧ್ಯದಲ್ಲಿ ಒಂದಷ್ಟು ಎಡವಟ್ಟನ್ನ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸಿಡಿಸಿದ ಅರ್ಧ ಶತಕ ಸೌತ್ ಆಫ್ರಿಕಾ ತಂಡದ ನೆರವಿಗೆ ಬಂದಿತ್ತು.

ಹೀಗೆ ಅಫ್ಘಾನಿಸ್ತಾನ & ದಕ್ಷಿಣ ಆಫ್ರಿಕಾ ತಂಡಗಳು ಇಂದು ಲೀಗ್ ಹಂತದಲ್ಲಿ ತಮ್ಮ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಆದರೆ ಅಫ್ಘಾನಿಸ್ತಾನ ಈ ಪಂದ್ಯವನ್ನ ಸೋತು ತವರಿಗೆ ತೆರಳಿದರೆ, ಈಗಾಗಲೇ ಸೆಮಿಫೈನಲ್ ಸ್ಥಾನ ಗ್ಯಾರಂಟಿ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡ ಅದ್ಭುತ ಗೆಲುವು ಕಂಡಿತ್ತು. 47.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿತ್ತು ದಕ್ಷಿಣ ಆಫ್ರಿಕಾ ತಂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+