RCB ಕಂಡರೆ ಅದೇನೋ ಜೋಶ್, ನಮ್ಮ ಪ್ರಾಣ: ಶಿವರಾಜ್ ಕುಮಾರ್
ಆರ್‌ಸಿಬಿ ಅಂದ್ರೆ ಅದೇನೋ ಜೋಶ್. ಆರ್‌ಸಿಬಿ ಪಂದ್ಯ ಎಲ್ಲೇ ನಡೆದರು ಅದರ ಕ್ರೇಜ್ ಮಾತ್ರ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ಆರ್ ಸಿಬಿ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಗುಣಗಾನ ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲ ಕ್ರಿಕೆಟ್ ಅಂದರೆ ಪಂಚಪ್ರಾಣ ಎಂದು ನಟ ಶಿವರಾಜ್‌ಕುಮಾರ್ ಅವರು ಹೇಳಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಐಪಿಎಲ್ ಪ್ರಾರಂಭವಾಗಿ ಇದೀಗ ಹದಿನೆಂಟು ವರ್ಷ.ಸಿನಿಮಾ ಮಾತ್ರವಲ್ಲ ಕ್ರಿಕೆಟ್ ಅಂದರೆ ಪಂಚಪ್ರಾಣ. RCB ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಈ 18 ವರ್ಷಗಳಲ್ಲಿ ಆರ್‌ಸಿಬಿ ಹೇಗೇ ಆಡಲಿ ನಾವು ಬೆಂಬಲಿಸಿದ್ದೇವೆ. ಆರ್‌ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಬರುತ್ತದೆ. ಅದೇನೋ ಗೊತ್ತಿಲ್ಲ ಆರ್‌ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದಿದ್ದಾರೆ.

ಬೆಂಗಳೂರನ್ನು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ. ಮತ್ತೆ ಆರ್‌ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್‌ನಲ್ಲಿ ಆಡುತ್ತಾರೆ. ಹೀಗಾಗಿ 18ನೇ ಸೀಸನ್‌ನಲ್ಲಿ ಆರ್‌ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಹೋಗಿ ಮ್ಯಾಚ್ ಅನ್ನು ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಶಿವಣ್ಣ ಅವರು ಕರೆ ನೀಡಿದ್ದಾರೆ. ನಟನಿಗೆ ಆರ್‌ಸಿಬಿ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್‌ಗೆ ಖುಷಿಯಾಗಿದೆ.
2025ರ 18ನೇ ಐಪಿಎಲ್ ಸೀಸನ್ ಉದ್ಘಾಟನಾ ಪಂದ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನೂ ಎರಡನೇ ಪಂದ್ಯದಲ್ಲಿ 17 ವರ್ಷಗಳ ಬಳಿಕ ಚೈನ್ನೈ ತಂಡವನ್ನು ತವರಿನ ಅಂಗಳದಲ್ಲೇ ಬಗ್ಗು ಬಡಿದಿತ್ತು. ಈ ಸಲದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಆರ್‌ಸಿಬಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸಹ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭಕೋರಿದ್ದಾರೆ. ಆರ್‌ಸಿಬಿ ತಂಡದ ಜೆರ್ಸಿ ಧರಿಸಿ ನಟ ಶಿವರಾಜ್ ಕುಮಾರ್ ಅವರು ಮಾತನಾಡಿರುವ ವಿಡಿಯೋವನ್ನು ಆರ್‌ಸಿಬಿ ಫ್ರಾಂಚೈಸಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದೆ. 18ನೇ ಸೀಸನ್‌ನಲ್ಲಿ ಆರ್‌ಸಿಬಿ ಎಲ್ಲ ರೀತಿಯಿಂದಲೂ ಒಳ್ಳೆಯ ಆಟ ಆಡುತ್ತಿದೆ ಎಂದು ಹೇಳಿದ್ದಾರೆ. ಸದ್ಯ ನಟ ಶಿವರಾಜ್‌ಕುಮಾರ್ ಅವರು, ರಾಮ್ ಚರಣ್ ಜೊತೆಗಿನ ಸಿನಿಮಾ, ಘೋಸ್ಟ್ ನಿರ್ದೇಶಕನ ಜೊತೆ ಸಿನಿಮಾ, ತಮಿಳು ಡೈರೆಕ್ಟರ್ ಕಾರ್ತಿಕ್ ಅದ್ವೈತ್ ಜೊತೆಗೊಂದು ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications