ಶತಕದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ
ಜಿಂಬಾಬ್ವೆ ಹಾಗೂ ಭಾರತದ ನಡುವಣ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡ 100 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಬ್ಯಾಟಿಂಗ್ ಅಬ್ಬರಕ್ಕೆ ಜಿಂಬಾಬ್ವೆ ಬೌಲರ್‌ಗಳು ಹೈರಾಣಾಗಿದ್ದಾರೆ. ಐಪಿಎಲ್‌ನಲ್ಲಿ ಆಡಿದಂತೆ ಬ್ಯಾಟ್ ಮಾಡಿದ ಅಭಿಷೇಕ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ.
ತಮ್ಮ ನೈಜ ಶೈಲಿಯ ಬ್ಯಾಟ್ ಮಾಡಿದ ಅಭಿಷೇಕ್ ಮನಮೋಹಕ ಶಾಟ್‌ಗಳ ಮೂಲಕ ಗಮನ ಸೆಳೆದರು. ಇವರ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಹಾಕಲು ಜಿಂಬಾಬ್ವೆ ಮಾಡಿಕೊಂಡ ಪ್ಲ್ಯಾನ್ ಎಲ್ಲ ಉಲ್ಟಾ ಆಗಿದೆ. ತಾವಾಡಿದ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಶತಕ ಬಾರಿಸುವ ಮೂಲಕ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ನೊಗ ಹೊರಲು ನಾವು ರೆಡಿ ಎಂದು ಸಾರಿ ಹೇಳಿದ್ದಾರೆ.

ಅಬ್ಬರದ ಶತಕ
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 47 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಹಾಯದಿಂದ 100 ರನ್ ಬಾರಿಸಿದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 212.76 ರನ್ ಆಗಿತ್ತು. ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಭಿಷೇಕ್ ಮೊದಲ ಪಂದ್ಯದಲ್ಲಿ ಲಯ ಬದ್ಧ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು.
ಅಬ್ಬರಿಸಲು ಇದೇ ಅಂಶ ಕಾರಣ
ಜಿಂಬಾಬ್ವೆ ವಿರುದ್ಧ ಎರಡನೇ ಪಂದ್ಯ ಮುಗಿದ ಬಳಿಕ ಅಭಿಷೇಕ್ ಈ ಕ್ಲಾಸಿಕ್ ಇನ್ನಿಂಗ್ಸ್ ಹಿಂದಿನ ಗುಟ್ಟನ್ನು ಬಿಚ್ಚಿದ್ದಾರೆ. ಅಸಲಿಗೆ ತಮ್ಮ ಬ್ಯಾಟ್‌ನಿಂದ ರನ್‌ಗಳ ಬಾರದೇ ಇದ್ದಾಗ ಇವರು ನಾಯಕ ಶುಭಮನ್ ಗಿಲ್ ಅವರ ಬ್ಯಾಟ್ ಬಳಿಸಿದ್ದಾರೆಂದು ತಿಳಿಸಿದರು. ಅಲ್ಲದೆ ತಾವು ರನ್ ಬರ ಅನುಭವಿಸುತ್ತಿದ್ದಾಗ ಅವರು ಗಿಲ್ ಅವರಿಂದ ಬ್ಯಾಟ್ ಪಡೆದು ಆಡುತ್ತಿದೆ ಎಂದು ಸಹ ಹೇಳಿದ್ದಾರೆ.
ಕಳೆದ ಐಪಿಎಲ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಎಡಗೈ ಆಟಗಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಓಪನರ್. ಯಾವುದೇ ಪಿಚ್ ಇರಲಿ, ಯಾರೇ ಎದುರಾಳಿ ಇದ್ದರೂ ಸಹ ಇವರ ಮೈಚಳಿ ಬಿಟ್ಟು ಆಡಿ ಅಭಿಮಾನಿಗಳನ್ನು ರಂಜಿಸಿದ್ದರು. ಇದೇ ಆಟಕ್ಕೆ ಮನಸೋತಿರುವ ಬಿಸಿಸಿಐ ಇವರಿಗೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶವನ್ನು ನಿಡಿತು.

ಬಿಸಿಸಿಐ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿರುವ ಅಭಿಷೇಕ್, ರೋಹಿತ್ ಶರ್ಮಾರಿಂದ ತೆರವಾದ ಆರಂಭಿಕ ಸ್ಲಾಟ್ ಮೇಲೆ ಕಣ್ಣಿಟ್ಟಿದ್ದಾರೆ. 23 ವಯಸ್ಸಿನ ಪಂಜಾಬ್‌ನ ಈ ಪೋರ ತನ್ನಲ್ಲಿ ಇನ್ನು ಸಾಕಷ್ಟು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಹೇಳಿದ್ದಾರೆ. ಅಲ್ಲದೆ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆ ಸಹಯನ್ನು ಕರಗತ ಮಾಡಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರ
ಅಭಿಷೇಕ್ ಶರ್ಮಾ ತಮ್ಮ ಧಮಾಕೆದಾರ ಬ್ಯಾಟಿಂಗ್‌ನಿಂದ ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ್ದರು. 2024ರ ಐಪಿಎಲ್‌ನಲ್ಲಿ ಇವರು ಆಡಿದ 16 ಪಂದ್ಯಗಳಲ್ಲಿ 32.27ರ ಸರಾಸರಿಯಲ್ಲಿ 484 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸಹ ಸೇರಿವೆ. ಒಟ್ಟಾರೆ ಐಪಿಎಲ್ ವೃತ್ತಿ ಜೀವನದಲ್ಲಿ ಅಭಿಷೇಕ್ 63 ಪಂದ್ಯಗಳಲ್ಲಿ 1377 ರನ್ ಸಿಡಿಸಿದ್ದಾರೆ.












Click it and Unblock the Notifications