Abhishek Nayar: ಬೆಂಗಳೂರಿನಲ್ಲಿ ವೈಭವ್ ಸೂರ್ಯವಂಶಿ ಕಣಕ್ಕಿಳಿಸುವ ಕುರಿತು ಅಭಿಷೇಕ್ ನಾಯರ್ ಮಹತ್ವದ ಹೇಳಿಕೆ

Abhishek Nayar: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್ 17) ಭಾರತ-ವೆಸ್ಟ್ ಇಂಡೀಸ್ ನಡುವೆ ಟಿ20 ಸರಣಿಯ ಐದನೇ ಹಾಗೂ ಕೊನೆಯ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದಕ್ಕೂ ಮನ್ನವೇ ಭಾರತೀಯ ಸಹಾಯಕ ತರಬೇತುದಾರ ಅಭಿಷೇಕ್ ನಾಯರ್ ಅವರು 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸೇರ್ಪಡೆ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಶುರುವಾಗಿವೆ.

Abhishek Nayar on Vaibhav sooryavanshi s Selection Ahead of IND vs WI 5th T20 in M Chinnaswamy

ಅಯ್ಯರ್ ಬಳಗದ ಮುಂದಿದೆ ದೊಡ್ಡ ಸವಾಲು

2019 ರಿಂದ ಈಚೆಗೆ ಭಾರತ ತಂಡವು ತವರಿನಲ್ಲಿ ಯಾವುದೇ ಟಿ20 ಸರಣಿಯನ್ನು ಸೋತಿಲ್ಲ. ಆದರೆ ಪ್ರಸ್ತುತ ಸರಣಿಯಲ್ಲಿ ವೆಸ್ಟ್ ಇಂಡೀಸ್ ನೀಡುತ್ತಿರುವ ಕಠಿಣ ಸವಾಲಿನಿಂದಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತೀಯ ತಂಡವು ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಇನ್ನೂ ಈ ಸರಣಿಯಲ್ಲಿ ಈವರೆಗೆ ಪಂದ್ಯವನ್ನಾಡದ ವೈಭವ್‌ಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡುವ ಕುರಿತು ಮಾಜಿ ಅಭಿಷೇಕ್ ನಾಯರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈಭವ್ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಹತ್ವದ ಸಲಹೆ

ವೈಭವ್ ಸೂರ್ಯವಂಶಿ ಅವರಂತಹ ಭರವಸೆಯ ಯುವ ಆಟಗಾರನನ್ನು ಆಡಿಸುವ ಆಸೆ ತಮಗೂ ಇದೆ ಎಂದು ತಿಳಿಸಿದ ನಾಯರ್, ಅವರಿಗೆ ಬೇರೆ ಬ್ಯಾಟಿಂಗ್ ಕ್ರಮಾಂಕ ನೀಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 'ವೈಭವ್‌ಗೆ ಪ್ಲೇಯಿಂಗ್‌ 11ನಲ್ಲಿ ಚಾನ್ಸ್‌ ನೀಡುವುದಾದರೆ, ಅವರನ್ನು ಅವರ ಮೂಲ ಕ್ರಮಾಂಕವಾದ ಆರಂಭಿಕ ಆಟಗಾರನಾಗಿಯೇ ಕಣಕ್ಕಿಳಿಸಬೇಕು. ಕೆಳ ಕ್ರಮಾಂಕದಲ್ಲಿ ಆಡಿಸುವುದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು,' ಎಂದು ಅವರು ತಂಡದ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ.

'ಪ್ರಸ್ತುತ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಯುತ್ತಿದ್ದಾರೆ. ಆದ್ದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಗತ್ಯ ಬದಲಾವಣೆ ಮಾಡುವ ಬದಲು, ಬೌಲಿಂಗ್ ವಿಭಾಗದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು ಹೆಚ್ಚು ಸೂಕ್ತ,' ಅಂತಲೂ ಅಭಿಷೇಕ್ ನಾಯರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ಹಾಗೂ ತಂಡದ ಸಂಯೋಜನೆ ಬಗ್ಗೆ ನಾಯರ್ ಹೇಳಿದ್ದೇನು?

ತಂಡದ ಸಂಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಆಲ್ರೌಂಡರ್ ನಮನ್ ಧೀರ್ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡಬಹುದು. ಹೀಗೆ ಮಾಡುವುದರಿಂದ ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ಅವರಿಗೆ ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗುತ್ತದೆ. ಅಕ್ಷರ್ ಪಟೇಲ್ ಈ ಹಿಂದೆ ಫ್ಲೋಟರ್ ಆಗಿ ಮೇಲಿನ ಕ್ರಮಾಂಕದಲ್ಲಿ ಬಂದು ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ,' ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ಜೊತೆಗೆ ವೇಗಿ ಅರ್ಷದೀಪ್ ಸಿಂಗ್ ಅವರ ಹೆಗಲಿಗೆ ಪೆಟ್ಟಾಗಿರುವುದರಿಂದ ಅವರ ಫಿಟ್‌ನೆಸ್ ಸ್ಥಿತಿಗತಿಯು ಪಂದ್ಯದ ಆಯ್ಕೆಯ ಮೇಲೆ ಪ್ರಮುಖ ಪ್ರಭಾವ ಬೀರಲಿದೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಅಂತಿಮ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗಲಿದೆಯೇ ಅಥವಾ ಸರಣಿ ಕೈಜಾರಬಾರದೆಂಬ ಕಾರಣಕ್ಕೆ ಅನುಭವಿ ಆರಂಭಿಕರನ್ನೇ ಮುಂದುವರಿಸಲಾಗುವುದೇ ಎಂಬುದು ಕುತೂಹಲ ಮೂಡಿಸಿರುವುದಂತೂ ನಿಜ. ಮ್ಯಾನೇಜ್‌ಮೆಂಟ್‌ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ ಅಷ್ಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+