WPL Final RCB vs DC: ಮನೆಗೆ ಟ್ರೋಫಿ ತನ್ನಿ; ಮಂಧಾನ ಪಡೆಗೆ ಶುಭ ಹಾರೈಸಿದ ಎಬಿಡಿ
ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್ ಪಂದ್ಯ ಭಾನುವಾರ ಸಂಜೆ 7.30ಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಈ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ಕಳೆದ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಲೀಗ್ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿದ್ದ ಆರ್‌ಸಿಬಿ ಈ ಬಾರಿ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನೇ ಬಗ್ಗು ಬಡಿದ ಆರ್‌ಸಿಬಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಶುಭ ಹಾರೈಸಿದ ಎಬಿ ಡಿವಿಯಲಿಯರ್ಸ್
ಮಾಜಿ ಆರ್‌ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್ ಫೈನಲ್ ಪಂದ್ಯಕ್ಕೆ ಮುನ್ನ ಎರಡೂ ತಂಡಗಳಿಗೆ ಶುಭಾಶಯ ತಿಳಿಸಿದ್ದಾರೆ. ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿವೆ. ಇಂದಿನ ಪಂದ್ಯ ಕೂಡ ರೋಚಕವಾಗಿರಲಿದೆ ಎಂದು ಹೇಳಿದ್ದಾರೆ.
ಆರ್‌ಸಿಬಿ ತಂಡಕ್ಕೇ ವಿಶೇಷವಾಗಿ ವಿಶ್ ಮಾಡಿರುವ ಅವರು ಟ್ರೋಫಿಯನ್ನು ಮನೆಗೆ ತನ್ನಿ ಎಂದು ಹೇಳಿದ್ದಾರೆ. ಆರ್‌ಸಿಬಿ ಪುರುಷರ ತಂಡಕ್ಕೆ ನೀವು ಸ್ಪೂರ್ತಿಯಾಗಿ ಎಂದು ಹೇಳಿದ್ದಾರೆ.
Come on @RCBTweets! 🏆💪 #WPLFinal pic.twitter.com/yThRPpT8u9
— AB de Villiers (@ABdeVilliers17) March 17, 2024
ಯಾರೇ ಗೆದ್ರೂ ಹೊಸ ಇತಿಹಾಸ
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ ಹೊಸ ಇತಿಹಾಸ ರಚನೆಯಾಗಲಿದೆ. ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೂ ಐಪಿಎಲ್‌ನಲ್ಲಿ ಒಮ್ಮೆಯೂ ಕಪ್ ಗೆದ್ದಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲನೇ ಆವೃತ್ತಿಯಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲು ಆಗಲಿಲ್ಲ. ಈ ಬಾರಿ ಇದುವರೆಗೂ ಕಪ್ ಗೆಲ್ಲದ ಎರಡು ತಂಡಗಳು ಫೈನಲ್ ಪ್ರವೇಶಿಸಿದ್ದು, ಯಾರೆ ಕಪ್ ಗೆದ್ದರು ತಂಡಕ್ಕೆ ಮೊದಲ ಪ್ರಶಸ್ತಿ ಗೆದ್ದ ಇತಿಹಾಸ ನಿರ್ಮಾಣವಾಗಲಿದೆ.
ಉಭಯ ತಂಡಗಳೂ ಕೂಡ ಬಲಿಷ್ಠವಾಗಿದ್ದು, ರೋಚನ ಫೈನಲ್ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ. ಆಲ್‌ರೌಂಡ್ ಪ್ರದರ್ಶನ ನೀಡುತ್ತಿರುವ ಎಲ್ಲಿಸ್ ಪೆರ್ರಿ ಮೇಲೆ ಆರ್ ಸಿಬಿ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ರಿಚಾ ಘೋಷ್, ಸ್ಮೃತಿ ಮಂಧಾನ, ಶ್ರೇಯಾಂಕ ಪಾಟೀಲ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೆಲೋನಿಯೊ, ಆಶಾ ಶೋಭನಾ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 4 ಬಾರಿ ಆರ್‌ಸಿಬಿ ವಿರುದ್ಧ ಮುಖಾಮುಖಿಯಾಗಿದ್ದು ನಾಲ್ಕರಲ್ಲೂ ಗೆಲುವು ಸಾಧಿಸಿದೆ ಅದೇ ವಿಶ್ವಾಸದಲ್ಲಿ ಫೈನಲ್‌ನಲ್ಲಿ ಕಣಕ್ಕಿಳಿಯಲಿದೆ. ಶೆಫಾಲಿ ವರ್ಮಾ, ಅಲಿಸ್ ಕ್ಯಾಪ್ಸಿ, ಮೆಗ್ ಲ್ಯಾನಿಂಗ್, ಜೆಮಿಮಾ ರೋಡ್ರಿಗಸ್, ಮಾರಿಜನ್ ಕಪ್ ಮೇಲೆ ಡೆಲ್ಲಿ ಹೆಚ್ಚಾಗಿ ಅವಲಂಬಿತವಾಗಿದೆ.












Click it and Unblock the Notifications