RCB: ಫೈನಲ್‌ ವೇಳೆಗೆ ಆರ್‌ಸಿಬಿ ಸೇರಲಿದ್ದಾರೆ ಎಬಿ ಡಿವಿಲಿಯರ್ಸ್!

ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಐಪಿಎಲ್ ಆಡುವುದನ್ನು ಬಿಟ್ಟು ಹಲವು ವರ್ಷಗಳಾದರೂ ಅಭಿಮಾನಿಗಳು ಮಾತ್ರ ಅವರನ್ನು ಇನ್ನೂ ಮರೆತಿಲ್ಲ. ಪ್ರತಿ ಬಾರಿ ಆರ್ ಸಿಬಿ ಪಂದ್ಯದಲ್ಲೂ ಎಬಿಡಿ ಎಬಿಡಿ ಎನ್ನುವ ಕೂಗು ಕೇಳುತ್ತಲೇ ಇರುತ್ತೇವೆ. ಈ ಬಾರಿ ಐಪಿಎಲ್‌ನಲ್ಲಿ ಆರ್ ಸಿಬಿ ಫೈನಲ್‌ಗೆ ಅರ್ಹತೆ ಪಡೆದರೆ ತಾನು ತಂಡದ ಜೊತೆ ಇರುವುದಾಗಿ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಟ್ರೋಫಿ ಬರವನ್ನು ಈ ವರ್ಷ ಕೊನೆಗೊಳಿಸಬಹುದು ಎಂದು ಅಭಿಮಾನಿಗಳು ಅಪಾರ ನಿರೀಕ್ಷೆ ಹೊಂದಿದ್ದಾರೆ. ಆರ್ ಸಿಬಿ ಪ್ಲೇಆಫ್‌ಗೆ ಪ್ರವೇಶ ಪಡೆಯಲು ಉಳಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದರೂ ಸಾಕಾಗುತ್ತದೆ.

ab de villiers presence ipl 2025 final rcb qualifies

ಬಲಿಷ್ಠವಾಗಿದೆ ಆರ್ ಸಿಬಿ ತಂಡ

ಆರ್ ಸಿಬಿ ಬೌಲಿಂಗ್ ದಾಳಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈವರೆಗಿನ ಆರ್ ಸಿಬಿ ತಂಡದಲ್ಲಿ ಬೌಲಿಂಗ್ ಕೊರತೆಯಾಗಿತ್ತು. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಸಂಪೂರ್ಣ ಹೊರೆಯನ್ನು ಹೊತ್ತಿದ್ದರು. ಈಗ, ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ ಕುಮಾರ್‌ರಂತಹ ವ್ಯಕ್ತಿಗಳು ಬೌಲಿಂಗ್‌ನಲ್ಲಿ ಮಿಂಚುತ್ತಿದ್ದು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ.

ಬ್ಯಾಟಿಂಗ್ ಕೂಡ ಬಲಿಷ್ಠವಾಗಿದೆ, ವಿರಾಟ್ ಕೊಹ್ಲಿ ಎಂದಿನಂತೆ ತಂಡದ ಬ್ಯಾಟಿಂಗ್ ಆಧಾರ ಸ್ಥಂಭವಾಗಿದ್ದಾರೆ. ಫಿಲ್ ಸಾಲ್ಟ್, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಮತ್ತು ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಎಲ್ಲರೂ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದು ತಂಡವಾಗಿ ಆಡುತ್ತಿರುವುದು ನಿರೀಕ್ಷೆಯನ್ನು ಹೆಚ್ಚಿಸಿದೆ. ಜೂನ್ 3 ರಂದು ಆರ್‌ಸಿಬಿ ಐಪಿಎಲ್ 2025 ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ವೇದಿಕೆಯಲ್ಲಿ ನಿಲ್ಲಬಹುದು ಎನ್ನುವುದು ಅಭಿಮಾನಿಗಳ ಕನಸಾಗಿದೆ.

ಎಬಿ ಡಿವಿಲಿಯರ್ಸ್ ಬರುತ್ತಿದ್ದಾರೆ

ಆರ್‌ಸಿಬಿ ಫೈನಲ್ ತಲುಪಿದರೆ ಕ್ರೀಡಾಂಗಣದಲ್ಲಿ ಇರುತ್ತೇನೆ ಎಂದು ಎಬಿಡಿ ಮಾರು ಕೊಟ್ಟಿದ್ದಾರೆ. 2008 ರಿಂದ 2010 ರವರೆಗೆ ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ್ದರೂ 2011ರಿಂದ ಒಂದು ದಶಕ ಅವರು ಆರ್‌ಸಿಬಿ ತಂಡಕ್ಕಾಗಿ ಆಡಿದ್ದರು. ಅವರು ನಿವೃತ್ತಿ ಆಗುವವರೆಗೂ ಆರ್ ಸಿಬಿ ಜೊತೆಯಿದ್ದರು. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ತಾವು ಕೂಡ ವೇದಿಕೆಗೆ ಬಂದು ಕೊಹ್ಲಿ ಜೊತೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವುದಾಗಿ ಹೇಳಿದ್ದಾರೆ.

ಆರ್‌ಸಿಬಿ ಫೈನಲ್‌ಗೆ ತಲುಪಿದರೆ, ನಾನು ಕ್ರೀಡಾಂಗಣದಲ್ಲಿ ಇರುತ್ತೇನೆ. ವಿರಾಟ್ ಕೊಹ್ಲಿ ಜೊತೆ ಆ ಟ್ರೋಫಿಯನ್ನು ಎತ್ತಿ ಹಿಡಿಯುವುದಕ್ಕಿಂತ ಹೆಚ್ಚಿನ ಸಂತೋಷವನ್ನು ಬೇರೆ ಯಾವುದೂ ನನಗೆ ನೀಡುವುದಿಲ್ಲ. ನಾವು ಹಲವು ವರ್ಷಗಳಿಂದ ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ, ಎಂದು ಎಬಿಡಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+