Ab De Villiers: ಮುಂಬೈ ಸೋಲುಗಳಿಗೆ ಕಾರಣ ತಿಳಿಸಿದ ಎಬಿಡಿ ವಿಲಿಯರ್ಸ್‌

ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡ ಮೇಲೆ ಎಲ್ಲವೂ ಸರಿಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿಸಿದಿದೆ. ಗುಜರಾತ್ ಟೈಟನ್ಸ್‌ ತಂಡದ ಟ್ರೇಡ್‌ ಮಾಡಿಕೊಂಡ ಮುಂಬೈ ಇಂಡಿಯನ್ಸ್‌ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿತು. ಇದರಿಂದ ತಂಡದಲ್ಲಿದ್ದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್‌ ಸೇರಿದಂತೆ ಹಿರಿಯ ಆಟಗಾರರ ಅಸಮಾಧಾನಕ್ಕೂ ಕಾರಣವಾಗಿತ್ತು.

ಈ ಅಸಮಾಧಾನ ಬರೀ ಮೈದಾನದ ಹೊರಗೆ ಎಂದೇ ಅಂದು ಕೊಂಡಿದ್ದರು. ಆದರೆ ಮೈದಾನದಲ್ಲೂ ಆಟಗಾರರ ನಡುವೆ ಬಿರುಕು ಎದ್ದು ಕಾಣುತ್ತಿದೆ. ಇದರ ನೇರ ಪರಿಣಾಮ ತಂಡದ ಮೇಲೆ ಬಿದ್ದಿದೆ. ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಪ್ಲೇ ಆಫ್‌ ರೇಸ್‌ನಿಂದ ಔಟ್ ಆದ ಮೊದಲ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಹಾರ್ದಿಕ್‌ ಪಾಂಡ್ಯ ಮೈದಾನಕ್ಕೆ ಇಳಿದಾಗಲೆಲ್ಲಾ, ಅವರನ್ನು ಅಭಿಮಾನಿಗಳು ಕಿಚಾಯಿಸುತ್ತಿದ್ದರು. ಅಲ್ಲದೆ ಸಾಮಾಜಿಕ ತಾಣದಲ್ಲಿ ಸತತ ಟ್ರೋಲ್‌ಗೆ ಗುರಿಯಾಗಿದ್ದಾರೆ.

AB de Villiers Hardik Pandya s Ego-Driven Captaincy Challenges with Rohit Bumrah

ಮುಂಬೈ ಇಂಡಿಯನ್ಸ್‌ ಸೋಲುಗಳ ಹಿಂದೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದೀಗ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹಾರ್ದಿಕ್ ಅವರ ನಾಯಕತ್ವದ ಬಗ್ಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ರೋಹಿತ್ ಹಾಗೂ ಜಸ್ಪ್ರಿತ್ ಬುಮ್ರಾ ಪ್ಲ್ಯಾನ್‌ ಏಕೆ ವರ್ಕ್‌ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಹಾರ್ದಿಕ್ ನಾಯಕತ್ವದ ಬಗ್ಗೆ ಎಬಿಡಿ ಹೇಳಿದ್ದೇನು?

ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಡಿವಿಲಿಯರ್ಸ್ ಅವರು ಗ್ರೇಮ್ ಸ್ಮಿತ್ ನಾಯಕತ್ವದಲ್ಲಿ ಆಡಿದ ಉದಾಹರಣೆಯನ್ನು ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದಲ್ಲಿ ಯಶಸ್ವಿ ಆಗಲು ಕಾರಣಗಳೇನು ಎಂಬ ಬಗ್ಗೆ ವಿವರಿಸಿದ್ದಾರೆ.

AB de Villiers Hardik Pandya s Ego-Driven Captaincy Challenges with Rohit Bumrah

ಗುಜರಾತ್ ತಂಡ ಯುವ ಆಟಗಾರರಿಂದ ಕೂಡಿತ್ತು. ಅಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಮುಂಬೈ ಇಂಡಿಯುನ್ಸ್‌ ಹಾಗಲ್ಲ. ಮುಂಬೈ ತಂಡದಲ್ಲಿ ಅನುಭವಿ ಆಟಗಾರರ ಗೊಂಚಲೇ ಇದೆ. ಈ ತಂಡದಲ್ಲಿದ್ದ ಆಟಗಾರರು ಅನುಭವಿ ಆಟಗಾರ ತಂಡವನ್ನು ಮುನ್ನಡೆಸಲು ಬಯಸುತ್ತಾರೆ ಎಂದು ಡಿವಿಲಿಯರ್ಸ್‌ ತಿಳಿಸಿದ್ದಾರೆ.

ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ಜಸ್ಪ್ರಿತ್ ಬುಮ್ರಾ ಅವರಂತಹ ಅನುಭವಿ ಆಟಗಾರರು ಇದ್ದಾಗ, ಅವರಿಂದ ಸಲಹೆ ಪಡೆಯುವುದು ಅವಶ್ಯಕ. ಈ ಬಾರಿ ತಂಡ ಸತತ ಸೋಲುಗಳನ್ನು ಕಾಣುವಲ್ಲಿ ಇದೇ ಕಾರಣವಾಗಿದೆ ಎಂದಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅವರ ಆಟದ ಶೈಲಿ ವೈಯಕ್ತಿಕವಾಗಿ ನನಗೆ ಇಷ್ಟ ಎಂದು ಎಬಿಡಿ ತಿಳಿಸಿದ್ದಾರೆ.

AB de Villiers Hardik Pandya s Ego-Driven Captaincy Challenges with Rohit Bumrah

ಮುಂಬೈ ಪ್ರದರ್ಶನ ಹೇಗಿದೆ?

ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದೆ. ಈ ಪೈಕಿ ಹಾರ್ದಿಕ್ ಪಾಂಡ್ಯ ತಂಡ ಪಡೆ ಕೇವಲ 4 ಪಂದ್ಯಗಳನ್ನು ಗೆಲ್ಲಲು ಶಕ್ತವಾಗಿದೆ. ಮುಂಬೈ 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಮುಂಬೈ ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಗುಳಿದಿದೆ. ಈಗ ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ತನ್ನ ಕೊನೆಯ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಜೊತೆಗೆ ಮೇ 17 ರಂದು ಆಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+