ರೋಹಿತ್‌ ಶರ್ಮಾ, ಶುಭ್‌ಮನ್‌ ಅಬ್ಬರದ ಬ್ಯಾಟಿಂಗ್‌; ಇಂಗ್ಲೆಂಡ್‌ ಬೌಲರ್ಸ್ ಗಢಗಢ

Ind vs End 2nd ODI: ಕಟಕ್‌ನಲ್ಲಿ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ಇಂದು (ಫೆಬ್ರವರಿ 09) ಭಾರತ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ತಂಡ ಭಾರತಕ್ಕೆ 305 ರನ್‌ಗಳ ಗುರಿ ನೀಡಿದೆ. ಈ ರನ್‌ಗಳನ್ನು ಬೆನ್ನತ್ತಿದ ಟೀಂ ಇಂಡಿಯಾ ಕೇವಲ 11 ಓವರ್‌ಗಳಿಗೆ ಯಾವುದೇ ವಿಕೆಟ್‌ ನಷ್ಟವುಲ್ಲದೆ 86 ರನ್‌ಗಳನ್ನು ಕಲೆಹಾಕಿದೆ. ಇದೇ ರೀತಿ ರನ್‌ಗಳು ಹರಿದುಬಂದ್ರೆ ಕೇವಲ 30 ಓವರ್‌ನಲ್ಲಿ ಟಾರ್ಗೆಟ್ ರೀಚ್‌ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

2nd ODI Cricket England bowlers Scared for Rohit Sharma and Shubman Gill batting

ಓಪನರ್‌ ಆಗಿ ಕ್ರೀಸ್‌ಗಿಳಿದ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಜೊತೆಯಾಟದ ಮೂಲಕ ಕೇವಲ 16 ಓವರ್‌ಗಳಿಗೆ 127 ರನ್‌ಗಳನ್ನು ಸಿಡಿಸಿದರು. ರೋಹಿತ್‌ ಕೇವಲ 48 ಬಾಲ್‌ಗಳಿಗೆ 73 ರನ್‌ಗಳನ್ನು ಸಿಡಿಸಿದರೆ, 49 ಬಾಲ್‌ಗಳಿಗೆ 56 ರನ್‌ಗಳನ್ನು ಸಿಡಿಸಿ ಇಂಗ್ಲೆಂಟ್‌ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇನ್ನೂ ಇವರಿಬ್ಬರು ಆಟ ಮುಂದುವರೆಸಿದ್ದು, ಹೀಗೆ ರನ್‌ಗಳನ್ನು ಸಿಡಿಸಿದರೆ, ಕೇವಲ 30 ಓವರ್‌ಗಳ ಒಳಗೆ ಪಂದ್ಯ ಮುಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ರೋಹಿತ್‌ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಅಬ್ಬರದ ಬ್ಯಾಟಿಂಗ್‌ ದಾಳಿಗೆ ಇಂಗ್ಲೆಂಡ್‌ ಬೌಲರ್‌ಗಳಿಗೆ ಇವರಿಗೆ ಹೇಗೆ ಬೌಲಿಂಗ್‌ ಮಾಡೋದು ಎಂದು ಕನ್ಫೂಸ್‌ ಆದಂತೆ ಕಾಣುತ್ತಿದೆ. ಯಾಕೆಂದರೆ ಯಾವ ಬಾಲ್‌ ಹಾಕಿದರೂ ಕೂಡ ಚೆಂಡನ್ನು ಬೌಂಡರಿ ಇಲ್ಲ, ಸಿಕ್ಸರ್‌ಗಳನ್ನು ಸಿಡಿಸುತ್ತಲೇ ಇದ್ದಾರೆ. ಶುಭ್‌ಮನ್‌ ಗಿಲ್‌ 52 ಎಸೆತಗಳಿಗೆ ಬರೋಬ್ಬರಿ 60 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ಕ್ರೀಸ್‌ಗಿಳಿದಿದ್ದಾರೆ. ಇನ್ನೂ ರೋಹಿತ್‌ ಶರ್ಮಾ ಶತಕ ಮುಟ್ಟಿಸುವ ಸನಿಹದಲ್ಲಿದ್ದಾರೆ.

ಇದಕ್ಕೂ ಮುಂಚೆ ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಹೊರಗುಲಿದಿದ್ದರು. ಕಾಲು ನೋವು ಹಿನ್ನೆಲೆ ಅವರು ಹೊರಗುಳಿದಿದ್ದಾರೆ. ಇದೀಗ ಅವರ ಆಗಮನದಿಂದಾಗಿ ಯಶಸ್ವಿ ಜೈಸ್ವಾಲ್ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಬಿದ್ದಿದ್ದಾರೆ. ಈ ಪಂದ್ಯದ ಮೂಲಕ ವರುಣ್ ಚಕ್ರವರ್ತಿ ಏಕದಿನ ಕ್ರಿಕೆಟ್‌​ಗೆ ಪಾದಾರ್ಪಣೆ ಮಾಡಿದ್ದಾರೆ. ಅದರಂತೆಯೇ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ.

ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸ್, ಆದಿಲ್ ರಶೀದ್, ಮಾರ್ಕ್​ವುಡ್, ಗಸ್​ ಅಟ್ಕಿನ್ಸನ್, ಜೇಮಿ ಓವರ್ಟನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+