• search
  • Live TV
ಸಿಂಗಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಿಮ್ -ಟ್ರಂಪ್ ಕುಚುಕು ಕುಚುಕು: ದಿಗ್ಗಜರ ಐತಿಹಾಸಿಕ ಭೇಟಿಯ ಮುಖ್ಯಾಂಶ

|

ಚಾಂಗಿ, ಜೂನ್ 12: ಇಡಿ ಜಗತ್ತೂ ಕಾದಿದ್ದ, ಕೌತುಕದ ಕಣ್ಣಿಟ್ಟಿದ್ದ ಐತಿಹಾಸಿಕ ಘಟನೆಯೊಂದು ಇಂದು ಘಟಿಸಿದೆ. ಸಿಂಗಪುರದ ಚಾಂಗಿಯಲ್ಲಿರುವ ಸೆಂತೊಸಾ ದ್ವೀಪದಲ್ಲಿ ಬದ್ಧ ದ್ವೇಷಿಗಳಾಗಿದ್ದ ಅಮೆರಿಕದ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಭೇಟಿಯಾಗಿದ್ದಾರೆ. ಉಭಯ ನಾಯಕರ ಭೇಟಿ ಹತ್ತು ಹಲವು ಮಹತ್ವದ ನಿರ್ಧಾರಗಳಿಗೆ ವೇದಿಕೆ ಒದಗಿಸಿದೆ.

ಇಬ್ಬರು ನಾಯಕರ ಭೇಟಿ ಮತ್ತು ಶೃಂಗಸಭೆಯನ್ನು ಹಲವು ತಿಂಗಳುಗಳ ಹಿಂದೆಯೇ ಆಯೋಜಿಸಲಾಗಿತ್ತು. ಎಲ್ಲ ವೈಮನಸ್ಯಗಳನ್ನೂ ತೊರೆದು, ಇಬ್ಬರು ನಾಯಕರೂ ಈ ಭೇಟಿಗೆ ಒಮ್ಮತದ ಒಪ್ಪಿಗೆ ಸೂಚಿಸಿದ್ದರು.

ಸಿಂಗಪುರದಲ್ಲಿ ಕೊನೆಗೂ ಭೇಟಿಯಾದ ಟ್ರಂಪ್ -ಕಿಮ್!

ಕಿಮ್ ಭೇಟಿ ಬಹಳ ಉತ್ತಮವಾಗಿತ್ತು ಎಂದು ಟ್ರಂಪ್ ಕೊಂಡಾಡಿದರೆ, ಟ್ರಂಪ್ ಜೊತೆ ಉತ್ತಮ ಸಹಕಾರ ಹೊಂದಲು ನಾವು ಬಯಸುತ್ತೇವೆ ಎಂದು ಕಿಮ್ ಭೇಟಿಯ ನಂತರ ಹೇಳಿದರು. ಉಭಯ ನಾಯಕರ ಮಾತುಕತೆಯ ಮುಖ್ಯಾಂಶ ಇಲ್ಲಿದೆ.

ಚಿತ್ರ ಕೃಪೆ: ಪಿಟಿಐ

ಭೇಟಿಯನ್ನು ಕೊಂಡಾಡಿದೆ ಟ್ರಂಪ್

ಭೇಟಿಯನ್ನು ಕೊಂಡಾಡಿದೆ ಟ್ರಂಪ್

ನಮ್ಮಿಬ್ಬರ ನಡುವಿನ ಮುಖಾಮುಖಿ ಭೇಟಿ ಅತ್ಯುತ್ತಮವಾಗಿತ್ತು. ನಾವಿಬ್ಬರು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಉಭಯ ದೇಶಗಳು ಇನ್ನು ಮುಂದೆ ಆಪ್ತ ಸಂಬಂಧ ಹೊಂದಲಿವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಮಾತಿಗೆ ಶುರುವಿಟ್ಟರು. ಸೆಂತೊಸಾ ದ್ವೀಪದಲ್ಲಿರುವ ಐಷಾರಾಮಿ ಹೊಟೇಲ್ ನಲ್ಲಿ ಉಭಯ ನಾಯಕರೂ ಒಟ್ಟಾಗಿ ಫೋಟೊಕ್ಕೆ ಪೋಸು ನೀಡಿದರು.

ಈ ಭೇಟಿ ಸುಲಭದ್ದಾಗಿರಲಿಲ್ಲ!

ಈ ಭೇಟಿ ಸುಲಭದ್ದಾಗಿರಲಿಲ್ಲ!

ನನ್ನ ಮಟ್ಟಿಗೆ ಈ ಭೇಟಿ ಸುಲಭದ್ದಾಗಿರಲಿಲ್ಲ. ಎಲ್ಲ ಪೂರ್ವಗ್ರಹಗಳನ್ನೂ ಬಿಟ್ಟು ನಾವುಬ್ಬರು ಹೀಗೆ ಭೇಟಿಯಾಗುವುದು ಕಷ್ಟದ ಮಾತೇ ಆಗಿತ್ತು! ನಮ್ಮ ಸಂಬಂಧದ ಬಗ್ಗೆ ಇದ್ದ ಕೆಲವು ಪೂರ್ವಗ್ರಹ ಅಭಿಪ್ರಾಯಗಳು ನಮ್ಮಿಬ್ಬರ ಭೇಟಿಗೆ ತಡೆಯೊಡ್ಡಿದ್ದವು. ಆದರೆ ಅವೆಲ್ಲವನ್ನೂ ಮೀರಿ ಇಂದು ನಾವಿಲ್ಲಿದ್ದೇವೆ" ಎಂದು ಕಿಮ್ ಉನ್ ಹೇಳಿದರು. ಕಿಮ್ ಮಾತಿಗೆ ತಲೆಯಲ್ಲಾಡಿಸಿ ಟ್ರಂಪ್ ಸಮ್ಮತಿ ಸೂಚಿಸಿದರು.

ನಾಯಿ-ಬೆಕ್ಕಿಗಿಂತ ಕೆಟ್ಟದಾಗಿ ಕಚ್ಚಾಡುತ್ತಿದ್ದ ಟ್ರಂಪ್- ಕಿಮ್ ಭೇಟಿ ಹಾಗೂ ಹಿಂದಿನ ಕಚ್ಚಾಟ

ಇದೊಂದು ಕಾಲ್ಪನಿಕ ಸಿನೆಮಾದಂತಿದೆ!

ಇದೊಂದು ಕಾಲ್ಪನಿಕ ಸಿನೆಮಾದಂತಿದೆ!

"ಇಡಿ ಜಗತ್ತೂ ಈ ಕ್ಷಣವನ್ನು ಅತ್ಯಂತ ಕೌತುಕದಿಂದ ವೀಕ್ಷಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಜಗತ್ತಿನ ಹಲವು ಜನರು ಈ ಕ್ಷಣವನ್ನು ಯಾವುದೋ ಕಾಲ್ಪನಿಕ ಸಿನೆಮಾದ ಅಥವಾ ಕಾದಂಬರಿಯ ದೃಶ್ಯ ಎಂದುಕೊಂಡಿರಬಹುದು! ನಾವಿಬ್ಬರೂ ಸೇರಿ ಒಂದು ದೊಡ್ಡ ಸಮಸ್ಯೆ, ದೊಡ್ಡ ಗೊಂದಲವನ್ನು ನಿವಾರಿಸುತ್ತೇವೆ" ಎಂದು ಅನುವಾದಕರ ಮೂಲಕ ಹೇಳಿದ ಕಿಮ್ ಬಾಂಧವ್ಯದ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

ಜಗತ್ತನ್ನು ನಡುಗಿಸಿದ ಟ್ರಂಪ್ ಕಿಮ್ ಹ್ಯಾಂಡ್ ಶೇಕ್!

ಜಗತ್ತನ್ನು ನಡುಗಿಸಿದ ಟ್ರಂಪ್ ಕಿಮ್ ಹ್ಯಾಂಡ್ ಶೇಕ್!

ಇತ್ತ ಟ್ರಂಪ್ ಮತ್ತು ಕಿಮ್ ಹ್ಯಾಂಡ್ ಶೇಕ್ ಮಾಡುತ್ತಿದ್ದಂತೆಯೇ ಜಗತ್ತು ತಲ್ಲಣಿಸಿದೆ. ಬದ್ಧ ವೈರಿಗಳಾಗಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾಗಳು ಹೀಗೆ ಕುಚುಕು ಕುಚುಕು ಎನ್ನುತ್ತಿರುವುದು ಏಕೆ ಎಂಬ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಆದರೆ ಅಣ್ವಸ್ತ್ರ ನಿಷೇಧದ ಕುರಿತು ಉಭಯ ದೇಶಗಳೂ ಮಾತುಕತೆ ನಡೆಸಿವೆಯಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಉಭಯ ನಾಯಕರೂ ಪರಿಣಿತ ಅನುವಾದಕರ ಮೂಲಕ ಸಂವಹನ ನಡೆಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The much-awaited summit between the United States and North Korea is finally taking place in Singapore. US President Donald Trump and North Korean leader Kim Jong Un met at a resort island of Sentosa along with their respective translators. They are expected to discuss several issues in their first ever expanded bilateral meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more