ಡೆತ್‌ನೋಟ್‌ನಲ್ಲಿರುವುದು ನಂದಿತಾ ಕೈ ಬರಹ

ಬೆಂಗಳೂರು, ನ.7 : 8 ನೇ ತರಗತಿ ವಿದ್ಯಾರ್ಥಿನಿ ನಂದಿತಾ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಡೆತ್‌ನೋಟ್‌ನಲ್ಲಿರುವ ಕೈ ಬರಹ ಆಕೆಯದ್ದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ಪರೀಕ್ಷೆಗಳಿಂದ ತಿಳಿದುಬಂದಿದೆ. ಇನ್ನೂ ಕೆಲವು ಪರೀಕ್ಷೆಗಳು ಬಾಕಿ ಇವೆ.

ನಂದಿತಾ ಡೆತ್‌ನೋಟ್ ಬರೆದಿಟ್ಟಿದ್ದಳು ಎಂದು ಸೋಮವಾರ ತೀರ್ಥಹಳ್ಳಿ ಪೊಲೀಸರು ಅದನ್ನು ಬಿಡುಗಡೆ ಮಾಡಿದ್ದರು. ರೆಡ್‌ಇಂಕ್‌ನಲ್ಲಿ ಬರೆದಿರುವ ಡೆತ್‌ನೋಟ್‌ ಅನ್ನು ಬೆಂಗಳೂರಿನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳಿಸಲಾಗಿತ್ತು. [ನಂದಿತಾ ಆತ್ಮಹತ್ಯೆ?]

Naditha

"ನಾನು ಚೆನ್ನಾಗಿ ಓದಲೇ ಇಲ್ಲ, ಅಪ್ಪ ನನ್ನನ್ನು ಕ್ಷಮಿಸಿ', 'ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನಾನು ದೊಡ್ಡ ತಪ್ಪು ಮಾಡಿ ವಿಷ ಕುಡಿಯುತ್ತಿದ್ದೇನೆ' ಎಂದು ನಂದಿತಾ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಳು. ಸದ್ಯ ಪ್ರಾಥಮಿಕ ಪರೀಕ್ಷೆಯಂತೆ ನಂದಿತಾ ಕೈ ಬರಹ ಮತ್ತು ಡೆತ್‌ನೋಟ್‌ನಲ್ಲಿನ ಬರಹಕ್ಕೂ ಸಾಮ್ಯತೆ ಕಂಡುಬಂದಿದೆ. [ಆಣೆ ಪ್ರಮಾಣ ರಾಜಕೀಯ]

ಇನ್ನೂ ಹಲವು ಹಂತದ ಪರೀಕ್ಷೆಗಳು ಬಾಕಿ ಇದ್ದು ನಂತರ ಕೈ ಬರಹ ನಂದಿತಾಳದ್ದೇ ಎಂಬುದು ತಿಳಿದು ಬರಲಿದೆ. ನಂದಿತಾ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ತೀರ್ಥಹಳ್ಳಿಯಲ್ಲಿ ನಾಲ್ಕು ತಂಡಗಳಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗಳ ಕೈ ಬರಹವಲ್ಲ : ನಂದಿತಾ ತಂದೆ ಕೃಷ್ಣಪ್ಪ ಡೆತ್‌ನೋಟ್ ನಲ್ಲಿರುವುದು ತನ್ನ ಮಗಳ ಕೈ ಬರಹವಲ್ಲ ಎಂದು ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದು ಕೃಷ್ಣಪ್ಪ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+