Tunga Dam Water Level: ಶಿವಮೊಗ್ಗ ಜಿಲ್ಲೆಯ ಜೀವನಾಡಿ ಜಲಾಶಯ ಕೊನೆಗೂ ಭರ್ತಿ-ನೀರಿನ ಮಟ್ಟದ ಅಂಕಿಅಂಶಗಳ ವಿವರ ಇಲ್ಲಿದೆ

Tunga Dam Water Level: ಇದೀಗ ರಾಜ್ಯಾದ್ಯಂತ ಮುಂಗಾರು ಪಡೆದಿದ್ದು, ಈ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿರುವ ತುಂಬಾ ಜಲಾಶಯ ಭರ್ತಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ನೀರಿನ ಸಂಗ್ರಹದ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.

ಮುಂಗಾರು ಮಳೆ ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಿರುವ ಹಿನ್ನೆಲೆ ರಾಜ್ಯದ ಬಹುತೇಕ ಕಡೆ ಬತ್ತಹೋಗುವ ಹಂತವನ್ನು ತಲುಪಿದ್ದ ಜಲಮೂಲಗಳಿಗೆ ಜೀವ ಬಂದಂತಾಗಿದೆ. ಅಲ್ಲದೆ, ಪ್ರಮುಖ ಜಲಾಶಯಗಳಿಗೂ ನೀರು ಹರಿದುಬರುತ್ತಿದ್ದು, ಅನ್ನದಾತನರ ಮುಖದಲ್ಲಿ ಮತ್ತಷ್ಟು ಮಂದಹಾಶ ಹೆಚ್ಚುವಂತೆ ಮಾಡಿದೆ.

Tunga Dam finally full filled in Shivamogga district Know details

ಇನ್ನು ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಡ್ಯಾಂ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ಮಳೆರಾಯ ಅಬ್ಬರಿಸಿದ ಪರಿಣಾಮ, ಒಳಹರಿವಿನ ಪ್ರಮಾಣ ಏರಿಕೆ ಆಗಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಾದರೂ ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರ ಹರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತುಂಗಾ ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಮೀಟರ್‌ ಆಗಿದೆ. ಈಗಾಗಲೇ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿದ್ದು, ಹಿನ್ನೀರು ಭಾಗದಲ್ಲಿ ಸ್ವಲ್ಪ ಮಳೆಯಾದರೂ ಜಲಾಶಯ ಭರ್ತಿ ಆಗಲಿದೆ ಎಂದು ತಿಳಿದುಬಂದಿದೆ.

ಇನ್ನು ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರುವ ಶಿವಮೊಗ್ಗಕ್ಕೆ ಕುಡಿಯುವ ನೀರಿಗೆ ತುಂಗಾ ಜಲಾಶಯವೇ ಆಧರಾವಾಗಿದೆ. ಅಲ್ಲದೆ, ಅಚ್ಚುಕಟ್ಟು ಭಾಗದ ಜಮೀನುಗಳಿಗೆ ಕೃಷಿ ಚಟುವಟಿಕೆಗೂ ಇದೇ ಜಲಾಶಯದಿಂದ ನೀರು ಬಿಡಲಾಗುತ್ತದೆ. ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ.

ಜಿಲ್ಲೆಯ ಗಾಜನೂರಿನಲ್ಲಿರುವ ತುಂಗಾ ಜಲಾಶಯದ 3.24 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈ ಜಲಾಶಯಕ್ಕೆ 22 ಗೇಟ್‌ಗಳಿವೆ. ಈಗಾಗಲೇ ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಕ್ರಸ್ಟ್‌ ಗೇಟ್‌ಗಳ ಮೇಲ್ಮಟ್ಟಕ್ಕೆ ನೀರು ತಲುಪಿದೆ. ಮಳೆ ಹೀಗೆ ಮುಂದುವರೆದರೆ, ಗೇಟ್‌ಗಳ ಮೂಲಕ ನೀರನ್ನು ಹೊರಗಡೆ ಬಿಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಜಾಗೃತರಾಗಿರುವುದು ಮುಖ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+